ಚಿಕ್ಕಮಗಳೂರು: ಡಕಾಯಿತಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅಂದಾಜು ೨.೫೫ ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಕಪ್ ವಾಹನದಲ್ಲಿ ಜುಲೈ ೨೩ರಂದು ಚಾಲಕ ಮತ್ತು ಹೆಲ್ಪರ್ ದರ್ಶನ್ ರೊಂದಿಗೆ ತೀರ್ಥಹಳ್ಳಿಯಿಂದ ಬೆಳಗ್ಗಿನ ಜಾವ ಸುಮಾರು ೪ ಗಂಟೆಗೆ ಎನ್‌ಆರ್ ಪುರಕ್ಕೆ ಬಂದು ಕೋಳಿಗಳನ್ನು ಮಾರಾಟ ಮಾಡಿಕೊಂಡು ಮಾರಾಟದಿಂದ ಬಂದ ೨ ಲಕ್ಷ ಹಣವನ್ನು ತೆಗೆದುಕೊಂಡು ವಾಪಸ್ಸು ಶಿವಮೊಗ್ಗಕ್ಕೆ ಬೆಳಗಿನ ಜಾವ ೪.೪೫ ಗಂಟೆಯ ಸಮಯದಲ್ಲಿ ಶಿವಮೊಗ್ಗ ಮುಖ್ಯ ರಸ್ತೆ ಆರಂಭಳ್ಳಿ ಬಸ್ ನಿಲ್ದಾಣದ ಬಳಿ ಹೋಗುತ್ತಿರುವಾಗ ರಸ್ತೆಯ ಎರಡು ಬದಿಯಿಂದ ಎರಡು ಕಾರುಗಳನ್ನು ಅಡ್ಡವಾಗಿ ನಿಲ್ಲಿಸಿಕೊಂಡು ಸುಮಾರು ೮ ರಿಂದ ೧೦ ಜನ ವಾಹನವನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್ ಮತ್ತು ಕೈನಿಂದ ಪಿಕಪ್ ವಾಹನದ ಚಾಲಕ ಮತ್ತು ಹೆಲ್ಪರ್ ಮೇಲೆ ಹಲ್ಲೆನಡೆಸಿ ಅವರ ಬಳಿ ಇದ್ದ ೩ ಮೊಬೈಲ್, ಬೆಳ್ಳಿ ಬ್ರಾಸ್ಲೆಟ್, ಬೆಳ್ಳಿ ಚೈನ್ ಮತ್ತು ವಾಹನದಲ್ಲಿದ್ದ ೨ ಲಕ್ಷ ನಗದನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆ.
ಆರೋಪಿಗಳನ್ನು ಪತ್ತೆಹಚ್ಚಲು ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಸಿ.ಟಿ.ಜಯಕುಮಾರ್, ಕೊಪ್ಪವಲಯದ ಡಿವೈಎಸ್ಪಿ ಬಾಲಾಜಿ ಸಿಂಗ್ ಅವರ ಮಾರ್ಗದರ್ಶನದಲ್ಲಿ ಎನ್.ಆರ್.ಪುರ ವೃತ್ತನಿರೀಕ್ಷಕ ಗುರುದತ್ ಕಾಮತ್, ಠಾಣಾಧಿಕಾರಿ ಬಿ.ಎಸ್.ನಿರಂಜನ್‌ಗೌಡ ಸಿಬ್ಬಂದಿಗಳಾದ ಪಿ.ಎ.ಬಿನು, ಅಮಿತ್ ಚೌಗುಲೆ, ದೇವರಾಜ, ಮಧು ಎಸ್.ಜಿ, ಯುಗಾಂಧರ್, ಶಿವರುದ್ರಪ್ಪ, ಕೌಶಿಕ್ ಹೆಚ್.ಸಿ. ಹಾಗೂ ಬಾಳೆಹೊನ್ನೂರು ಠಾಣೆಯ ಅಪರಾಧ ವಿಭಾಗದ ಶಂಕರ್ ಕೆ.ಜೆ ರನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.
ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ನಯಾಜ್ ಅಂಜುಂ ಮತ್ತು ರಬ್ಬಾನಿ ಅವರ ತಾಂತ್ರಿಕ ಸಹಯೋಗದೊಂದಿಗೆ ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ತನಿಖೆಯನ್ನು ನಡೆಸಿ ಪ್ರಕರಣದಲ್ಲಿನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ಆರೋಪಿಗಳಾದ ಭದ್ರಾವತಿ ತಾಲೂಕಿನ ಕೂಲಿಕೆಲಸದ ಸತ್ಯಾನಂದ, ಭದ್ರಾವತಿ ಅಪ್ಪಾಜಿ ಬಡಾವಣೆಯ ಮೆಕಾನಿಕ್ ಸಯ್ಯದ್ ಲತೀಫ್ ಸೇರಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು
ಆರೋಪಿಗಳಿಂದ ಒಂದು ಬೆಳ್ಳಿಯ ಬ್ರಾಸ್‌ಲೈಟ್, ಒಂದು ಬೆಳ್ಳಿಯ ಸರ, ೨ ಮೊಬೈಲ್ ಒಂದು ಸೌಂಡ್ ಸಿಸ್ಟಂ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ೧ ಹೊಂಡಾಸಿಟಿ ಕಾರು ಮತ್ತು ಕೃತ್ಯಕ್ಕೆ ಬಳಸಿದ ಒಂದು ಲಾಂಗ್ ಮತ್ತು ಕಬ್ಬಿಣದ ರಾಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.ಒಟ್ಟು ೨.೫೫ ಲಕ್ಷ ರೂ.ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿ ಕದ್ದಮಾಲನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಶ್ರಮಿಸಿದ ಅಪರಾಧ ಪತ್ತೆದಳ ತಂಡದಲ್ಲಿದ್ದ ಅಧಿಕಾರಿ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಜಿಲ್ಲಾಪೊಲೀಸ್ ಮುಖ್ಯಾಧಿಕಾರಿಗಳು ಶ್ಲಾಘಿಸಿದ್ದಾರೆ.
Accused arrested in dacoity case- Property worth Rs. 2.55 lakh seized
Leave a comment