Home namma chikmagalur ಹಲ್ಲೆ ನಡೆಸಿರುವ ಕುದುರೆಮುಖ ಪೇದೆ-ಠಾಣಾಧಿಕಾರಿಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
namma chikmagalurchikamagalurHomeLatest News

ಹಲ್ಲೆ ನಡೆಸಿರುವ ಕುದುರೆಮುಖ ಪೇದೆ-ಠಾಣಾಧಿಕಾರಿಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

Share
Share

ಚಿಕ್ಕಮಗಳೂರು: ವಿನಾಕಾರಣ ಜಾತಿ ನಿಂದಲೇ ನಡೆಸಿ ಹಲ್ಲೆ ನಡೆಸಿರುವ ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ಮತ್ತು ಸ್ಥಳೀಯ ಮೇಲ್ಜಾತಿಯ ಯುವಕರ ವಿರುದ್ಧ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಕುದುರೆ ಮುಖ ಠಾಣಾಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಲಿಂಗಪ್ಪ ಒತ್ತಾಯಿಸಿದರು.

ನಗರದ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜುಲೈ ೧೫ರಂದು ರಾತ್ರಿ ಸುಮಾರು ೧೦:೩೦ ವೇಳೆಯಲ್ಲಿ ರಸ್ತೆಗೆ ಅಡ್ಡಲಾಗಿ ಪಿಕಪ್ ವಾಹನ ನಿಲ್ಲಿಸಿಕೊಂಡು ಪೊಲೀಸ್ ಸಮವಸ್ತ್ರದಲ್ಲಿದ್ದ ಸಿದ್ದೇಶ್ ಎಂಬವರು ಸ್ಥಳೀಯರಾದ ರಕ್ಷಿತ್ ಹಾಗೂ ಶಶಿ ಎಂಬರೊಂದಿಗೆ ಅಮಲು ಪದಾರ್ಥ ಸೇವಿಸುತ್ತಾ ಜೋರಾಗಿ ಹಾಡುಗಳನ್ನು ಹಾಕಿಕೊಂಡು ನಿಲ್ಲಿಸಿಕೊಂಡಿದ್ದರು.

ಅದೇ ರಸ್ತೆಯಲ್ಲಿ ತೋಟದಿಂದ ಮನೆಗೆ ತೆರಳುತ್ತಿದ್ದ ದಲಿತ ಸಮುದಾಯದ ನಾಗೇಶ್ ಎಂಬ ಯುವಕ ಗಾಡಿಯನ್ನು ಪಕ್ಕಕ್ಕೆ ಸರಿಸಿ ದಾರಿ ಬಿಟ್ಟುಕೊಡಬೇಕೆಂದು ಕೇಳಲು ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಆಟೋರಿಕ್ಷಾಇಳಿದು ಹೋಗುತ್ತಿದ್ದ ವೇಳೆ ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಶ್ ನಾವು ಕುಡಿಯುತ್ತಿರುವ ದೃಶ್ಯವನ್ನು ಮೊಬೈಲ್ನಲ್ಲಿ ಹಿಡಿಯುತ್ತಿದ್ದೀಯಾ ಎಂದು ಮೇಲೆ ಹಲ್ಲೆ ಮಾಡಿ ಬೂಟು ಕಾಲಿನಿಂದ ಒದ್ದು ಜಾತಿ ನಿಂದಲೇ ಮಾಡಿದ್ದಾರೆ ಎಂದು ಆರೋಪಿಸಿದರು.

ಅದೇ ಸಂದರ್ಭದಲ್ಲಿ ಅದೇ ಸಂದರ್ಭದಲ್ಲಿ ಕರೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಶ್ ಕುದುರೆಮುಖ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಅವರನ್ನು ಕರೆಸಿಕೊಂಡು ಮತ್ತು ಅದರಲ್ಲಿದ್ದ ಕೃಷಿ ಪರಿಕರಗಳು ಮೊಬೈಲ್ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಠಾಣೆಗೆ ತೆರಳಿ ದೂರು ನೀಡಿದರು ಹಲ್ಲೆಗೊಳಗಾದ ಯುವಕನಿಂದ ದೂರು ಪಡೆಯದೆ ನಿರಾಕರಿಸಿದ್ದಾರೆ ಎಂದು ಹೇಳಿದರು.

ನಗರದ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು ಈ ಪ್ರಕರಣದಲ್ಲಿ ಕಾನೂನು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಂಡು ವಶಪಡಿಸಿಕೊಂಡಿರುವ ಆಟೋ, ಕೃಷಿಪರಿಕರಗಳು, ಮೊಬೈಲನ್ನು ಕೊಡಿಸುವುದರೊಂದಿಗೆ ಯುವಕನಿಗೆ ವೈದ್ಯಕೀಯ ವೆಚ್ಚ ಮತ್ತು ಆದಾಯ ನಷ್ಟ ಮತ್ತು ಆಗಿರುವ ಮಾನಸಿಕ ಆಘಾತಕ್ಕಾಗಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಗೆದ್ದೆಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯ ವಸತಿ ಶಾಲೆಯ ಅವ್ಯವಸ್ಥೆಯ ಆಗರವಾಗಿದ್ದು, ಕೂಡಲೇ ಸರಿಪಡಿಸಬೇಕೆಂದು ಸಂಘಟನೆಯ ಅಧ್ಯಕ್ಷ ಮೊಹಮದ್ ಸಮೀಉಲ್ಲಾ ಒತ್ತಾಯಿಸಿದರು. ಜಿಲ್ಲೆ, ಕಡೂರು ತಾಲ್ಲೂಕು, ಗೆದ್ದೆಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯ ವಸತಿ ಶಾಲೆಯಲ್ಲಿ ಸುಮಾರು ೩೫೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿರುತ್ತಾರೆ. ಈ ವಸತಿ ಶಾಲೆಯಲ್ಲಿ ಎರಡು ತಿಂಗಳಿನಿಂದ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲದೇ ತಣ್ಣೀರಿನ ಸ್ನಾನ ಮಾಡುತ್ತಿದ್ದು, ಇದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿರುತ್ತದೆ.

ಯು.ಪಿ.ಎಸ್. ಕೆಟ್ಟು ಹೋಗಿರುವುದರಿಂದ ಕರೆಂಟ್ ಸಮಸ್ಯೆಯೂ ಸಹ ಹೆಚ್ಚಾಗಿರುತ್ತದೆ. ಕೆಲವು ಮಕ್ಕಳಿಗೆ ಅಲ್ಲಿನ ಊಟದ ಗುಣಮಟ್ಟ ಚೆನ್ನಾಗಿಲ್ಲದೇ ಇರುವುದರಿಂದ ಮಕ್ಕಳ ಆರೋಗ್ಯಕ್ಕೆ ಪರಿಣಾಮ ಬೀರುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ವಸತಿಶಾಲೆಗೆವ ಭೇಟಿನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು. ಗೋಷ್ಟಿಯಲ್ಲಿ ಮುಖಂಡರಾದ ಮೂಡಿಗೆರೆ ಸಂತೋಷ್,ಆಶಾಸಂತೋಷ್,ನದೀಮ್ ಪಾಶ,ಶ್ರೀನಿವಾಸ್ ಇದ್ದರು.

Demand for legal action against Kudremukh constable and station officer who assaulted

 

Share

Leave a comment

Leave a Reply

Your email address will not be published. Required fields are marked *

Don't Miss

ಧಾರಾಕಾರ ಮಳೆಗೆ ಶೃಂಗೇರಿಯಲ್ಲಿ ತುಂಗಾನದಿಯಲ್ಲಿ ಪ್ರವಾಹ

ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಶನಿವಾರ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿದೆ. ಶೃಂಗೇರಿಯಲ್ಲಿ 70 ಮಿ.ಮೀ, ಕಿಗ್ಗಾದಲ್ಲಿ 152.4 ಮಿ.ಮೀ, ಕೆರೆಕಟ್ಟೆಯಲ್ಲಿ 211 ಮಿ.ಮೀ ಮಳೆಯಾಗಿದ್ದು, ಒಟ್ಟು 2,825 ಮಿ.ಮೀ...

ವಸೂಲಿವೀರ ಅದಕ್ಷ ಡಿ.ಡಿ.ಪಿ.ಐ ಪುಟ್ಟರಾಜುಗೆ ಕಡ್ಡಾಯ ರಜೆ

ಚಿಕ್ಕಮಗಳೂರು; ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾರ್ವಜನಿಕ ಶಿಕ್ಷಣ ಅಧಿಕಾರಿ ಪುಟ್ಟರಾಜು ಕಡ್ಡಾಯ ರಜೆ ಮೇಲೆ ತೆರಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕಟಾರಿಯ ಸೂಚನೆ ನೀಡಿದ್ದಾರೆ.ಆದರೂ ಕಟಾರಿಯ ಸೂಚನೆಗೆ ನಾನು...

Related Articles

ಮೇಲ್ವರ್ಗದರು ಮಾಡಿದ ಒತ್ತುವರಿ ತೆರವಿಗೆ ಗ್ರಾಮಸ್ಥರ ಆಗ್ರಹ

ಚಿಕ್ಕಮಗಳೂರು: ಹಾಂದಿ ಗ್ರಾಮದಲ್ಲಿ ಊರಿನವರು ವಾಸಿಸಲು ನಿವೇಶನಕ್ಕೆ ಉಚಿತವಾಗಿ ಜಾಗ ನೀಡಿದ ಕುಟುಂಬ ಸಮಸ್ಯೆ ಎದುರಿಸುವಂತಾಗಿದ್ದು,...

ಡಕಾಯಿತಿ ಪ್ರಕರಣ ಆರೋಪಿಗಳ ಬಂಧನ-2.55 ಲಕ್ಷ ರೂ. ಮೌಲ್ಯದ ಸ್ವತ್ತು ವಶ

ಚಿಕ್ಕಮಗಳೂರು: ಡಕಾಯಿತಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅಂದಾಜು ೨.೫೫ ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು...

ಗಿರಿ ಭಾಗದ ತಾಣಗಳಿಗೆ ಪ್ರವಾಸಿಗರಿಗೆ ಆನ್‌ಲೈನ್ ನೊಂದಣಿ ಕಡ್ಡಾಯ ಅವೈಜ್ಞಾನಿಕ

ಚಿಕ್ಕಮಗಳೂರು: ಗಿರಿ ಭಾಗದ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರಿಗೆ ಆನ್‌ಲೈನ್ ನೊಂದಣಿ ಕಡ್ಡಾಯಗೊಳಿಸಿರುವ ಜಿಲ್ಲಾಡಳಿತದ ಕ್ರಮ ಅವೈಜ್ಞಾನಿಕವಾಗಿದ್ದು,...

ಬೀದಿ ನಾಯಿಗಳಿಗೆ ನಿಯಂತ್ರಣಕ್ಕೆ ಅಗತ್ಯ ಕ್ರಮ

ಚಿಕ್ಕಮಗಳೂರು: ಅತಿ ಶೀಘ್ರದಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನಿಯಂತ್ರಣಕ್ಕೆ...