Home Crime News ಪೋ‌ಕ್ಸೋ ನ್ಯಾಯಾಲಯದಿಂದ ನಾಲ್ವರಿಗೆ ಕಠಿಣ ಶಿಕ್ಷೆ
Crime NewschikamagalurHomeLatest Newsnamma chikmagalur

ಪೋ‌ಕ್ಸೋ ನ್ಯಾಯಾಲಯದಿಂದ ನಾಲ್ವರಿಗೆ ಕಠಿಣ ಶಿಕ್ಷೆ

Share
Share

ಚಿಕ್ಕಮಗಳೂರು: ನಗರದ ಬಾಲಮಂದಿರದಲ್ಲಿ ವಾಸವಿದ್ದ ಈರ್ವರು ಅಪ್ರಾಪ್ತ ಬಾಲಕಿಯರನ್ನು ಪುಸಲಾಯಿಸಿ ಹಾಸನಕ್ಕೆ ಕರೆದೊಯ್ದು ಬಾಡಿಗೆ ಮನೆಯೊಂದ ರಲ್ಲಿ ಇರಿಸಿ ಹದಿನೈದು ಮಂದಿಯನ್ನು ಲೈಂಗಿಕ ದೌರ್ಜನ್ಯ ಎಸಗಲು ಅನುವು ಮಾಡಿಕೊಟ್ಟಿದ್ದ ನಾಲ್ವರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಪೋ‌ಕ್ಸೋ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಕಳೆದ 2023ರ ಸೆಪ್ಟೆಂಬರ್ ಹದಿನೇಳರಂದು ನಗರದ ಸರ್ಕಾರಿ ಬಾಲ ಕಿಯರ ಬಾಲಮಂದಿರದಿಂದ ಈರ್ವರು ಬಾಲಕಿಯರು ಕಾಣೆಯಾ ಗಿದ್ದಾರೆ ಎಂಬ ದೂರಿನ ಹಿನ್ನೆಲೆ ಯಲ್ಲಿ ತನಿಖೆ ಆರಂಭಿಸಿದ ಡಿವೈ ಎಸ್‌ಪಿ ಶೈಲೇಂದ್ರ ಅವರು ಮಹಿಳಾ ಠಾಣೆಯಎಎಸ್‌ಐ ಸೋಮಶೇಖರ್ ಮತ್ತಿತರೆ ತಂಡದ ಮೂಲಕ ಕಾಣೆ ಯಾದ ಬಾಲಕಿಯರನ್ನು ಹಾಸನದ ಮನೆಯೊಂದರಲ್ಲಿ ಪತ್ತೆಹಚ್ಚಿದ್ದರು.

ಬಾಲಕಿಯರ ವಿಚಾರಣೆಯ ವೇಳೆ ನಗರದ ಫರ್ಜಾನ, ಪ್ರಶಾಂತ್, ಲಕ್ಷ್ಮೀ ಮತ್ತು ದಿನೇಶ್ ಎಂಬುವವರುಗಳು ತಮ್ಮನ್ನು ಪುಸಲಾಯಿಸಿ ಹಾಸನಕ್ಕೆ ಕರೆದೊಯ್ದು ಬಾಡಿಗೆ ಮನೆಯಲ್ಲಿರಿಸಿ ಹದಿನೈದು ಮಂದಿಯಿಂದ ಲೈಂಗಿಕ ದೌರ್ಜನ್ಯ ನಡೆಸಿದರೆಂಬುದನ್ನು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರಲ್ಲದೆ.

ದೌರ್ಜನ್ಯ ನಡೆಸಿದ ಹದಿನೈದು ಮಂದಿಯನ್ನು ಕೂಡ ವಶಕ್ಕೆ ಪಡೆ ದಿದ್ದು, ನಂತರ ಮಹಿಳಾ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನಗರದ ಪೋಕೋ ನ್ಯಾಯಾಲಯದ ನ್ಯಾಯಾಧೀಶ ರಾಘವೇಂದ್ರ ಗುರು ಪ್ರಸಾದ್ ಕುಲಕರ್ಣಿ ಅವರು, ಫರ್ಜಾನ, ಪ್ರಶಾಂತ್, ಲಕ್ಷ್ಮೀ ಮತ್ತು ದಿನೇಶ್ ಎಂಬುವವರ ಮೇಲಿನ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ ನಾಲ್ವರಿಗೂ ತಲಾ ಹತ್ತು ವರ್ಷಗಳ ಕಠಿಣಶಿಕ್ಷೆ ಹಾಗು ಮೊದಲ ಈರ್ವರಿಗೆ ತಲಾ ಮೂವತ್ತೆರಡು ಸಿದ್ದಾರೆ.

ಸಾವಿರ ರೂ.ದಂಡ ಉಳಿದ ಈರ್ವರಿಗೆ ತಲಾ ಮೂವತ್ತೈಯ್ದು ಸಾವಿರ. ದಂಡ ವಿಧಿಸಿ ನಿನ್ನೆ ತೀರ್ಪು ಪ್ರಕಟಿ ಉಳಿದ ಹದಿನೈದು ಮಂದಿಯ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಅವರುಗಳನ್ನು ಪ್ರಕರಣ ದಿಂದ ಖುಲಾಸೆ ಮಾಡಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದಲೋಹಿತಾಚಾರ್ ಮತ್ತು ಬಿ.ಭರತ್ ಕುಮಾರ್ ಅವರು ಗಳು ವಾದ ಮಂಡಿಸಿದ್ದರು.

Four sentenced to rigorous imprisonment by POCSO court

Share

Leave a comment

Leave a Reply

Your email address will not be published. Required fields are marked *

Don't Miss

ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ

ಕಡೂರು: ಕಳೆದ ಜೂನ್‌ನಲ್ಲಿ ಗಮನ ಬೇರೆಡೆಗೆ ಸೆಳೆದು ಗ್ರಾಹಕರೋರ್ವರ ಖಾತೆಯಿಂದ ₹3.90 ಲಕ್ಷಡ್ರಾ ಮಾಡಿರುವ ಪ್ರಕರಣ ಕುರಿತು ಮಹಿಳೆಯೊಬ್ಬರುಕಡೂರು ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ. ತಾಲೂಕಿನ ಚಿಕ್ಕಪಟ್ಟಣಗೆರೆಯ ಸುನಂದ ಟಿ.ಎಂ. ಎಂಬವರು...

ಶಿವಮೊಗ್ಗ-ಶೃಂಗೇರಿ ಮಾರ್ಗ ಪರಿಗಣಿಸಿ

ಚಿಕ್ಕಮಗಳೂರು: ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ, ಮುತ್ತಿನಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಹರಿಹರಪುರ, ಶೃಂಗೇರಿ ರೈಲ್ವೆ ಮಾರ್ಗವನ್ನು ಪ್ರಮುಖವಾಗಿ ಪರಿಗಣಿಸಬೇಕು...

Related Articles

ಮಾಧ್ಯಮ ಕ್ಷೇತ್ರ ಶಾಸಕಾಂಗ-ಕಾರ್ಯಾಂಗ-ಸಾರ್ವಜನಿಕರ ನಡುವೆ ಸೇತುವೆ

ಚಿಕ್ಕಮಗಳೂರು:  ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂಬ ಮಾತು ಅಕ್ಷರಶಃ ಸತ್ಯ. ಸರಕಾರಗಳ ಯೋಜನೆಗಳ...

ರಕ್ತಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ ಅವಶ್ಯಕತೆ ಅರಿತು ರಕ್ತದಾನ ಮಾಡಬೇಕು

ಚಿಕ್ಕಮಗಳೂರು:  ರಕ್ತಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ. ಈ ದಿಸೆಯಲ್ಲಿ ರಕ್ತದ ಅವಶ್ಯಕತೆ ಅರಿತು ರಕ್ತದಾನ ಮಾಡಬೇಕು. ಇದು...

ಭೂದಾನ-ಗೋದಾನ-ಅನ್ನದಾನಕ್ಕಿಂತ ಮತದಾನ ಶ್ರೇಷ್ಠ

ಚಿಕ್ಕಮಗಳೂರು:  ಭೂದಾನ, ಗೋದಾನ, ಅನ್ನದಾನಕ್ಕಿಂತ ಸಮಾಜದ ನಾಗರೀಕರಿಗೆ ಮ ತದಾನ ಸರ್ವಶ್ರೇಷ್ಟ. ಆಸೆ-ಆಕಾಂಕ್ಷೆಗಳಿಗೆ ಒಳಗಾಗದೇ ಪ್ರಜೆಗಳ...

ಮರದಿಂದ ಬಿದ್ದು ಕಾರ್ಮಿಕ ಸಾವು

ಕಳಸ: ಮರದಿಂದ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾಫಿ ಎಸ್ಟೇಟ್...