ಚಿಕ್ಕಮಗಳೂರು: ಬಾಹ್ಯಕಾಶದ ವಿಜ್ಞಾನಿ ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಅವರ ೧೦ನೇ ವರ್ಷದ ಪುಣ್ಮಸ್ಮರಣೆ ಅಂಗವಾಗಿ ನಗರದ ಶ್ರೀ ಸುಬ್ರಹ್ಮಣ್ಯ ಭಾರತಿ ಮಹಾಸಭಾ ತಮಿಳು ಸಂಘದಿಂದ ಕಚೇರಿಯಲ್ಲಿ ಭಾನುವಾರ ಭಾವಚಿತ್ರಕ್ಕೆ ಮುಖಂಡರುಗಳು ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಕುರಿತು ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಿ.ರಘು ತಮಿಳುನಾಡಿನ ರಾಮೇಶ್ವರದ ಮುಸ್ಲೀಂ ಬಡಕುಟುಂಬದಲ್ಲಿ ಜನಿಸಿದ ಅಬ್ದುಲ್ ಕಲಾಂ ಅವರು ಜೀವನದಲ್ಲಿ ಅನೇಕ ಏರುಪೇರುಗಳನ್ನು ಕಂಡವರು. ಬಳಿಕ ಬಾಹ್ಯಕಾಶ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿ ರಾಷ್ಟ್ರದ ಪ್ರಗತಿಗಾಗಿ ದುಡಿದ ಮಹಾಚೇತನ ಎಂದರು.
ಸಮಾಜದ ಯುವಜನರಿಗೆ ಮಾದರಿ ವ್ಯಕ್ತಿಯಾಗಿ ಅಬ್ದುಲ್ ಕಲಾಂ ಸ್ಪೂರ್ತಿ ನೀಡುತ್ತಾರೆ. ಮರಣಕ್ಕೂ ಮುನ್ನ ತಮ್ಮ ಹೆಸರಿನಲ್ಲಿ ರಜೆ ಘೋಷಿಸದೇ ಒಂದುಗಂಟೆ ಹೆಚ್ಚು ಕೆಲಸ ನಿರ್ವಹಿಸಲಿ ಎಂದು ಸೂಚಿಸಿದ್ದ ರು. ಮರಣದ ನಂತರ ಇಂದಿಗೂ ಜೀವಂತಿಕೆ ಉಳಿಸಿಕೊಂಡಿರುವ ಮಹಾಮೇಧಾವಿ ಎಂದು ಹೇಳಿದರು.
ಮುಸ್ಲೀಂ ಜನಾಂಗ ವ್ಯಕ್ತಿಯಾದರೂ ಕಲಾಂ ಅವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತ ರಾಗಿರಲಿಲ್ಲ. ಜಾತ್ಯಾತೀತ ನಿಲುವು ಹಾಗೂ ಎಲ್ಲಾ ಧರ್ಮವನ್ನು ಸಮಾನವಾಗಿ ಅಪ್ಪಿಕೊಳ್ಳುವ ವಿಶೇಷ ಗುಣ ಅವರಲ್ಲಿತ್ತು. ತಮ್ಮ ೮೩ನೇ ವಯಸ್ಸಿನಲ್ಲಿ ಮಕ್ಕಳೊಂದಿಗಿನ ಸಂವಾದದಲ್ಲೇ ಪ್ರಾಣ ತ್ಯಜಿಸಿದರು ಎಂದು ತಿಳಿಸಿ ದರು.
ತಿರುವಳ್ಳರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಕರ್ ಮಾತನಾಡಿ ಕಲಾಂ ಅವರು ಕನಸನ್ನು ನನಸಾ ಗಿಸುವ ಸಾಮರ್ಥ್ಯ ಹೊಂದಿದವರು. ಅಲ್ಪಸಂಖ್ಯಾತರ ಕುಟುಂಬದಲ್ಲಿ ಜನಿಸಿದ ಅವರು ರಾಷ್ಟ್ರಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಯುವಜನತೆಯ ಕನಸನ್ನು ನನಸಾಗಿಸುವ ಸ್ಪೂರ್ತಿಧಾಯಕ ಮಾತುಗಳು ಅವರ ಕಂ ಠದಲಿದೆ ಎಂದರು.
ಬಾಹ್ಯಕಾಶ ವಿಜ್ಞಾನಿ, ದೇಶದ ರಾಷ್ಟ್ರಪತಿ ನಂತರ ಬೋಧನೆ, ಬರವಣಿಗೆ ಮತ್ತು ಸಾರ್ವಜನಿಕ ಸೇವೆ ಯಲ್ಲಿ ತೊಡಗಿಸಿಕೊಂಡರು. ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸೇರಿದಂತೆ ಹಲ ವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಮೇರು ವ್ಯಕ್ತಿತ್ವದವರು ಎಂದು ಬಣ್ಣಿಸಿದರು.
ಸಂಘದ ಸಲಹೆ ಸಮಿತಿ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ ವಿಜ್ಞಾನ ಕ್ಷೇತ್ರದಲ್ಲಿ ಅಬ್ದುಲ್ ಕಲಾಂ ನೀಡಿದ ಕೊಡುಗೆಗಳು ವಿಶ್ವದ ಬಲಾಡ್ಯ ದೇಶಗಳು ಭಾರತದತ್ತ ನೋಡುವಂತೆ ಮಾಡಿತು. ೧೯೯೮ರಲ್ಲಿ ಪೋ ಖ್ರಾನ್ ಪರಮಾಣು ಪರೀಕ್ಷೆಗಳಲ್ಲಿ ಅವರು ಪ್ರಮುಖ ತಾಂತ್ರಿಕ ಮತ್ತು ರಾಜಕೀಯ ಪಾತ್ರವನ್ನು ವಹಿಸಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮೂರ್ತಿ, ಯುವಘಟಕದ ಅಧ್ಯಕ್ಷ ಕೆ.ಕುಮಾರ್, ಕಾರ್‍ಯ ದರ್ಶಿ ಜಿ.ಕೆ.ಕಾರ್ತೀಕ್, ಸದಸ್ಯರಾದ ಮಂಜು, ಕೇಶವ, ರವಿಕುಮಾರ್, ರಾಮಣ್ಣ, ಭರತ್, ದಕ್ಷಿಣಮೂರ್ತಿ, ಲಕ್ಷ್ಮೀ, ವೆಂಕಟೇಶ್, ಆನಂದ್ ಮತ್ತಿತರರು ಉಪಸ್ಥಿತರಿದ್ದರು.
Abdul Kalam is an inspirational figure for the youth
Leave a comment