ಚಿಕ್ಕಮಗಳೂರು; ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾರ್ವಜನಿಕ ಶಿಕ್ಷಣ ಅಧಿಕಾರಿ ಪುಟ್ಟರಾಜು ಕಡ್ಡಾಯ ರಜೆ ಮೇಲೆ ತೆರಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕಟಾರಿಯ ಸೂಚನೆ ನೀಡಿದ್ದಾರೆ.ಆದರೂ ಕಟಾರಿಯ ಸೂಚನೆಗೆ ನಾನು ರಜೆ ಏಕೆ ಹೋಗಬೇಕು ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ.
ಈತ ಡಿ.ಡಿ.ಪಿ.ಐ ಆಗಿ ಬಂದ ಮೇಲೆ ಶಿಕ್ಷಣ ಇಲಾಖೆ ಎಕ್ಕುಟ್ಟಿ ಹೋಗಿದೆ ಎಂದು ಶಿಕ್ಷಕರು ನೊಂದು ಕೊಳ್ಳುತ್ತಿದ್ದಾರೆ. ಐದನೇ ಸ್ಥಾನದಲ್ಲಿ ಇದ್ದ ಎಸ್.ಎಸ್.ಎಲ್.ಸಿ ಫಲಿತಾಂಶ ಹದಿನಾರನೇ ಸ್ಥಾನಕ್ಕೆ ಕುಸಿದಿರುವುದು ಶೋಚನೀಯ.ಅನುದಾನಿತ ಶಾಲೆಯಲ್ಲಿ 60/ ಕಡಿಮೆ ಬಂದಿರುವ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು ಅವರಿಂದ ಎಂಜಲು ಕಾಸು ತಿಂದು ಕ್ರಮ ಕೈಗೊಳ್ಳದೆ ಇರುವುದನ್ನು ನೋಡಿ ಕಡ್ಡಾಯ ರಜೆ ಮೇಲೆ ಕಳುಹಿಸಲು ಜಿ.ಪಂ.ಸಿ.ಇ.ಒ.ರವರಿಗೆ ಸೂಚನೆ ನೀಡಿದ್ದು ಅವರು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಕುಳಿತಿದ್ದಾರೆ.
ಪುಟ್ಟರಾಜು ಜಿಲ್ಲೆಗೆ ಬಂದು ಶಿಕ್ಷಣ ಇಲಾಖೆಗೆ ವಕ್ಕರಿಸಿದಾಗಿನಿಂದ ಪ್ರತಿ ಕೆ.ಡಿ.ಪಿ ಸಭೆಯಲ್ಲಿ ಈತನ ಬಗ್ಗೆ ಚರ್ಚೆ ಆಗುತ್ತದೆ. ಎಷ್ಟು ಉಗಿದರು ಜೊಲ್ಲು ಸೇರಿಸಿಕೊಂಡು ವಸೂಲಿಗೆ ಹೋಗುತ್ತಾನೆ ಎಂದು ಹಲವು ಶಾಲೆಯವರ ದೂರು.ಸರ್ಕಾರಿ ಶಾಲೆ ಗಳೆಂದರೆ ಅಲರ್ಜಿ ಆದೇ ಖಾಸಗಿ ಶಾಲೆಗಳೆಂದರೆ ಸೆಂಟ್ ಹಾಕಿಕೊಂಡು ಹೋಗುತ್ತಾನೆ .
ಇಲ್ಲಿಯೇ ಇರುವುದು ಸ್ವಾರಸ್ಯ .ಇಲ್ಲಿಯಾದರೆ ಸಣ್ಣಪುಟ್ಟ ತಪ್ಪಿಗೂ ವಸೂಲಿ ಮಾಡಲು ರಹದಾರಿ ಸಿಗುತ್ತದೆ ಎಂಬ ಪ್ಲಾನ್.ಖಾಸಗಿ ಶಾಲೆಗಳ ಪರವಾನಿಗೆ ನವೀಕರಿಸಲು ಲಕ್ಷ, ಲಕ್ಷ ವಸೂಲಿ ಮಾಡಿದ್ದಾರೆ ಎಂದು ಕಿಟಕಿ ಬಾಗಿಲುಗಳು ಹೇಳುತ್ತವೆಯಂತೆ.
ತರೀಕೆರೆ ತಾಲ್ಲೂಕಿನ ಶಾಲೆಯೊಂದರ ನವೀಕರಣಕ್ಕೆ ಐದು ಲಕ್ಷಕ್ಕೂ ಹೆಚ್ಚು ವಸೂಲಿ ಮಾಡಲಾಗಿದೆ.ಇದೇ ರೀತಿ ಅಜ್ಜಂಪುರ ತಾಲ್ಲೂಕಿನ ಶಾಲೆಯನ್ನು ಹತ್ತು ವರ್ಷ ನವೀಕರಿಸಿ ಲಕ್ಷ ರೂ ವಸೂಲಿ ಮಾಡಲಾಗಿದೆ ಎಂಬ ದೂರುಗಳಿವೆ.
ಪುಟ್ಟರಾಜು ಹೆಸರು ಎನ್ನುವ ಬದಲಿಗೆ ವಸೂಲಿ ಪುಟ್ಟರಾಜು ಎಂದು ಮರುನಾಮಕರಣ ಮಾಡುವುದು ಒಳ್ಳೆಯದು ಎನ್ನುತ್ತಾರೆ. ಈತ ಎ.ಐ.ಟಿ.ಗೆಸ್ಟ್ ಹೌಸ್ ನಲ್ಲಿ ತಂಗಿ ಎಲ್ಲಾ ವ್ಯವಹಾರ ನಡೆಸುತ್ತಾನೆ ಕಛೇರಿ ಗೆ ಐದು ಗಂಟೆ ಮೇಲೆ ಬರುವುದಲ್ಲದೆ ಮೊಬೈಲ್ ರಿಸೀವ್ ಮಾಡುವುದಿಲ್ಲ ಎಂದರೆ ಇವನಿಗೆ ಯಾವ ಸ್ವಾಮಿ ಅಥವಾ ರಾಜಕಾರಣಿಯ ಆಶೀರ್ವಾದ ಇರಬಹುದು ಎನ್ನುತ್ತಾರೆ.
ಜಿಲ್ಲೆಯ ವಿಧಾನ ಸಭಾ ಸದಸ್ಯರುಗಳು ಅನುದಾನ ತರಲು ಬ್ಯೂಸಿ ಇದ್ದಾರೆ ವಿರೋಧ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಧರ್ಮಸ್ಥಳದ ಬಗ್ಗೆ ಮಾತನಾಡುತ್ತಾರೆ ವಿನಹಃ ಶಿಕ್ಷಣ ಇಲಾಖೆಯ ಹೆಗ್ಗಣಗಳ ಬಗ್ಗೆ ತುಟಿ ಬಿಚ್ಚಲ್ಲಾ.ಬೋಜೇಗೌಡರನ್ನು ಕಂಡರೆ ಅಧಿಕಾರಿಗಳಿಗೆ ಭಯ ಆದರೆ ಡಿ.ಡಿ.ಪಿ.ಐ.ಪುಟ್ಟರಾಜು ಇವರಿಗೂ ಕೇರ್ ಮಾಡುತ್ತಿಲ್ಲ. ಇಂತಹ ನೀಚಾ ಡಿ.ಡಿ.ಪಿ.ಐ ಪುಟ್ಟರಾಜು ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಶಿಕ್ಷಣ ಇಲಾಖೆ ಸಂಪೂರ್ಣ ಮುಚ್ಚುವ ಸ್ಥಿತಿಗೆ ಬಂದರೆ ಆಶ್ಚರ್ಯ ಇಲ್ಲ.
Compulsory leave for incompetent DDPI Puttaraju
Leave a comment