Home ರೈತರ ಅನುಕೂಲಕ್ಕಾಗಿ ಚಾನಲ್ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹ
HomechikamagalurLatest Newsnamma chikmagalur

ರೈತರ ಅನುಕೂಲಕ್ಕಾಗಿ ಚಾನಲ್ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹ

Share
Share

ಚಿಕ್ಕಮಗಳೂರು: ಅಯ್ಯನಕೆರೆ ಕೋಡಿಬಿದ್ದು ಹರಿಯುವ ನೀರಿನಿಂದ ಕೆರೆಗಳನ್ನು ತುಂಬಿಸುವ ಕಾಮಗಾರಿ ಎಂದು ಸರ್ಕಾರ ಅನುಮೋದನೆ ನೀಡಿದ್ದು, ಈ ಯೋಜನೆಯ ಬಗ್ಗೆ ಎರಡೂ ಭಾಗದ ರೈತರ ಗಮನಕ್ಕೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೆ. ಲೋಕೇಶ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರು, ಜನಪ್ರತಿನಿಧಿಗಳು ಹಾಗೂ ಎರಡೂ ಭಾಗದ ರೈತರನ್ನೊಳಗೊಂಡ ಸಭೆಯನ್ನು ಜಿಲ್ಲಾಧಿಕಾರಿಗಳು ಕರೆದು ಯಥಾಸ್ಥಿತಿ ಕಾಪಾಡಬೇಕು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಕ್ಷಣದಿಂದಲೇ ಚಾನಲ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಇಂಜಿನಿಯರ್‌ಗಳು ಅವೈಜ್ಞಾನಿಕವಾಗಿ ದಾಖಲೆಗಳನ್ನು ಸೃಷ್ಟಿಸಿ ಅಗ್ರಹಾರದ ಚೆಕ್‌ಡ್ಯಾಂ ನಿಂದ ನೀರೆತ್ತುವ ಕಾಮಗಾರಿ ಕಾರ್ಯರೂಪಗೊಳಿಸಿರುವುದನ್ನು ಖಂಡಿಸಿದರು.

ಸುಮಾರು ಕಡೂರು ಭಾಗದ ೫೧ ಹಳ್ಳಿಗಳ ರೈತರಿಗೆ ವೇದಾ ನದಿಯು ಜೀವನದಿಯಾಗಿದೆ. ಇಂದಿಗೂ ಕುಡಿಯಲು ಈ ನದಿ ನೀರನ್ನು ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು, ಶಾಸಕರು ಕ್ರಮ ವಹಿಸುವಂತೆ ಮನವಿ ಮಾಡಿದರು.

ಅಯ್ಯನಕೆರೆಯಿಂದ ಕೋಡಿಬಿದ್ದ ನೀರು ಜೀವನಾಡಿಯಾದ ವೇದಾ ನದಿಗೆ ಬರುವುದೇ ಇಲ್ಲ. ಕೋಡಿಬಿದ್ದ ನೀರು ೩೫೪೦ ಕ್ಯೂಸೆಕ್ಸ್ ಹೊರ ಹರಿಯುತ್ತದೆ ಎಂದು ಡಿಪಿಆರ್‌ನಲ್ಲಿ ನಮೂದಿಸಿರುವುದು ಇದು ಶುದ್ಧ ಸುಳ್ಳು, ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಮಾನ್ಸೂನ್ ಪ್ರಾರಂಭವಾದ ೪೫ ದಿನಗಳಲ್ಲಿ ದಿನಕ್ಕೆ ೨೨ ಗಂಟೆ ೨೦೦ ಅಶ್ವಶಕ್ತಿಯ ಪಂಪ್‌ನಿಂದ ನೀರೆತ್ತುವ ಕೆಲಸ ಪ್ರಾರಂಭವಾಗುತ್ತದೆ ಎಂದು ಮಾಜಿ ಜಿ.ಪಂ ಸದಸ್ಯ ಹೆಚ್.ಸಿ ಕಲ್ಮರುಡಪ್ಪ ಅವರು ಮಾಹಿತಿ ಇಲ್ಲದೆ ತಪ್ಪು ಹೇಳಿಕೆ ನೀಡಿದ್ದಾರೆ. ಅಯ್ಯನ ಕೆರೆಯಿಂದ ಹೊರ ಹರಿಯುವ ನೀರಿಗೂ ವೇದಾ ನದಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಗಣೇಹಳ್ಳಿ ಗ್ರಾ.ಪಂ ಸದಸ್ಯ ಬಸವರಾಜ್ ಉಪಸ್ಥಿತರಿದ್ದರು.

Demand to stop channel work for the benefit of farmers

Share

Leave a comment

Leave a Reply

Your email address will not be published. Required fields are marked *

Don't Miss

ಮೈಮೆಲೆ ಬಿಸಿನೀರು ಬಿದ್ದು ಹೆಣ್ಣುಮಗುವಿಗೆ ಗಾಯ

ಚಿಕ್ಕಮಗಳೂರು: ಜಿಲ್ಲಾಮಕ್ಕಳ ಘಟಕದ ದತ್ತು ಸಂಸ್ಥೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗುವಿಗೆ ಸುಟ್ಟಗಾಯವಾಗಿದ್ದು ಇದರಿಂದ ಹೆಣ್ಣುಮಗು ನರಳುವಂತಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಗಾಂಧಿನಗರದಲ್ಲಿರುವ ದತ್ತು...

ಹಿರೇಬೈಲು ಗ್ರಾಮದಲ್ಲಿ ನಕಲಿ ವೈದ್ಯನ ವಿರುದ್ಧ ಕ್ರಮ

ಕಳಸ: ಹಿರೇಬೈಲು ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯನ ವಿರುದ್ಧ ಕ್ರಮ ಕೈಗೊಂಡಿದ್ದು, ಕ್ಲಿನಿಕ್ ಅನ್ನು ಬಂದ್ ಮಾಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಆರೋಗ್ಯ ಇಲಾಖೆ...

Related Articles

ನಯನ ಮೋಟಮ್ಮ ಕ್ಷೇತ್ರ ದರ್ಶನಕ್ಕೆ ಬಾರಮ್ಮ

ಮೂಡಿಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡಬಿಡದೆ ಮಳೆ ಬರುತ್ತಿದ್ದು ಅನಾಹುತದ ಸಂಭವಿಸಿ ಹಲವರು ಪ್ರಾಣ...

ಜು.28ಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳ

ಚಿಕ್ಕಮಗಳೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ವಸಾಹತು ಹಿಂಭಾಗ, ಜಿಲ್ಲಾ ಪಂಚಾಯಿತಿ ಹತ್ತಿರ, ಜ್ಯೋತಿನಗರ, ಚಿಕ್ಕಮಗಳೂರು)...

ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕುದುರೆಮುಖ, ಮುಳ್ಳಯ್ಯನ...

ಸಾರ್ವಜನಿಕರ ಸುರಕ್ಷತೆಗಾಗಿ “ಮನೆ-ಮನೆಗೆ ಪೊಲೀಸ್”

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ 368 ಬೀಟ್‌ಗಳಲ್ಲಿ ಏಕಕಾಲದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು  ಜಿಲ್ಲಾ ಪೊಲೀಸ್...