Home namma chikmagalur ತೆಂಗಿನಲ್ಲಿ ಅಣಬೆ ರೋಗದ ನಿರ್ವಹಣೆ
namma chikmagalurchikamagalurHomeLatest News

ತೆಂಗಿನಲ್ಲಿ ಅಣಬೆ ರೋಗದ ನಿರ್ವಹಣೆ

Share
Share

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರ್ಲಕ್ಷಿತ ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆಯ ಕೊರತೆಯಿರುವ ತೆಂಗಿನ ತೋಟಗಳಲ್ಲಿ ಅಣಬೆ ರೋಗದ ಲಕ್ಷಣ ಹಾಗೂ ನಿರ್ವಹಣೆ ಯನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಮರದ ಕೆಳ ಭಾಗದ ಗರಿಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗಿ ಮರದ ಕಾಯಿಗಳ ಗಾತ್ರ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ಇಳುವರಿ ಕುಂಠಿತವಾಗುತ್ತದೆ. ಕೊನೆಯ ಹಂತದಲ್ಲಿ ಮರದ ಬುಡದಲ್ಲಿ ಚಿಕ್ಕಚಿಕ್ಕ ಅಣಬೆಯಾಕಾರದ ಶಿಲೀಂಧ್ರದ ಬೆಳವಣಿಗೆ ಕಂಡು ಬರುತ್ತವೆ.

ನಿರ್ವಹಣೆ: ಅಣಬೆ ರೋಗಕ್ಕೆ ತುತ್ತಾದ ಗಿಡಗಳನ್ನು ತೆಗೆದು ಸುಡಬೇಕು. ತೋಟಗಳಲ್ಲಿ ಬಸಿಗಾಲುವೆ ನಿರ್ಮಾಣ ಮಾಡಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಬೇಕು. ಸಮಗ್ರ ಪೋಷಕಾಂಶ ನಿರ್ವಹಣೆಯ ಜೊತೆಗೆ ತೆಂಗಿನ ಮರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇವಿನ ಹಿಂಡಿಯನ್ನು (ವರ್ಷಕ್ಕೆ ಪ್ರತಿ ಗಿಡಕ್ಕೆ 5 ಕೆ.ಜಿ.) ಮತ್ತು 50 ಗ್ರಾಂ ಟ್ರೈಡೆಮಾರ್ಫ್ ಅನ್ನು 10 ಕೆ.ಜಿ ಕೊಟ್ಟಿಗೆ ಗೊಬ್ಬರದ ಜೊತೆಗೆ ವರ್ಷಕ್ಕೆ 2 ಬಾರಿ ಮಿಶ್ರಣ ಮಾಡಿಕೊಡಬೇಕು. ಅಣಬೆ ರೋಗಕ್ಕೆ ತುತ್ತಾದ ಮರಗಳಿಗೆ 5ಮಿ.ಲೀ ಟ್ರೈಡೆಮಾರ್ಫ್‌ ಅಥವಾ 3 ಮಿ.ಲೀ ಹೆಕ್ಸಾಕೋನಜೋಲ್ ಅನ್ನು 100 ಎಂ.ಎಲ್‌ ನೀರಿನಲ್ಲಿ ಬೆರೆಸಿ 3 ತಿಂಗಳಿಗೊಮ್ಮೆ ಬೇರಿನ ಮೂಲಕ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Management of fungal disease in coconut

Share

Leave a comment

Leave a Reply

Your email address will not be published. Required fields are marked *

Don't Miss

ಗಿರಿ ಪ್ರದೇಶದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ನೂತನ ಸಂಚಾರ ವ್ಯವಸ್ಥೆ

ಚಿಕ್ಕಮಗಳೂರು: : ಮುಳ್ಳಯ್ಯನಗಿರಿ ಭಾಗದಲ್ಲಿ ಇತ್ತೀಚೆಗೆ ವಾರಾಂತ್ಯದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, ಎರಡು ಸ್ಲಾಟ್‌ಗಳಲ್ಲಿ ಪ್ರತೀದಿನ ವಾಹನಗಳನ್ನು ಗಿರಿಭಾಗಕ್ಕೆ ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು....

ಕಾವೇರುತ್ತಿದೆ ಅಜ್ಜಂಪುರ ಪಟ್ಟಣ ಪಂಚಾಯತಿ ಚುನಾವಣೆ

ಅಜ್ಜಂಪುರ: ಕಳೆದ ಏಳು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಬಣಗುಡುತ್ತಿದ್ದ ಪಟ್ಟಣ ಪಂಚಾಯತಿಗೆ ಆಗಷ್ಟ್ 17 ರಂದು ಚುನಾವಣೆ ದಿನಾಂಕ ನಿಗದಿಯಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜನತಾದಳದ ಮಧ್ಯೆ ಬಿರುಸಿನ...

Related Articles

ಮಕ್ಕಳ ಬಾಲ್ಯ ಸುರಕ್ಷತೆಗಾಗಿ ಭದ್ರ ಬಾಲ್ಯ ಯೋಜನೆ ಅನುಷ್ಠಾನ

ಚಿಕ್ಕಮಗಳೂರು: ಮಕ್ಕಳ ಬಾಲ್ಯವನ್ನು ಸುರಕ್ಷಿತಗೊಳಿಸುವ ಗುರಿ ಇರಿಸಿಕೊಂಡು ಜಿಲ್ಲೆಯಲ್ಲಿ ಭದ್ರ ಬಾಲ್ಯ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಎಲ್ಲಾ...

ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ವಿರುದ್ಧ ಸಮಾಜದಿಂದ ಪ್ರತಿಭಟನೆ

ಚಿಕ್ಕಮಗಳೂರು:  ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ನಿಗಧಿತ ದರಕ್ಕಿಂತ ಕಡಿಮೆ...

ಮಾದಕ ವಸ್ತು ವಿರೋಧಿ ಜಾಗೃತಿ ಸಮಿತಿ ರಚನೆ ಕಡ್ಡಾಯ 

ಚಿಕ್ಕಮಗಳೂರು:  ಶಾಲಾ ಕಾಲೇಜುಗಳಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಸಮಿತಿಗಳನ್ನು ಕಡ್ಡಾಯವಾಗಿ ರಚಿಸುವ ಮೂಲಕ ಮಾದಕ ವಸ್ತು...

ವೇದಾನದಿ ನೀರಿನ ಹಂಚಿಕೆಯಲ್ಲಿ ರೈತರು ಸಂಯಮ ಕಾಪಾಡಬೇಕು

ಚಿಕ್ಕಮಗಳೂರು: ವೇದಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರೈತರು ಸಂಯಮ ಕಾಪಾಡಬೇಕು. ಜೊತೆಗೆ ಕೆರೆ ತುಂಬಿಸುವ...