Home namma chikmagalur ಮೂಡಿಗೆರೆ ತಾಲ್ಲೂಕಿನಾದ್ಯಂತ ಮಳೆಯಿಂದ ಜನಜೀವನ ಅಸ್ತವ್ಯಸ್ತ
namma chikmagalurchikamagalurHomeLatest News

ಮೂಡಿಗೆರೆ ತಾಲ್ಲೂಕಿನಾದ್ಯಂತ ಮಳೆಯಿಂದ ಜನಜೀವನ ಅಸ್ತವ್ಯಸ್ತ

Share
Share

ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ಇಡೀ ದಿನ‌ ಬಿಡುವಿಲ್ಲದೇ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ತಾಲ್ಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ಮಂಜುನಾಥ್ ಹಾಗೂ ಗಿರೀಶ್ ಅವರಿಗೆ ಸೇರಿದ ಹಳೆಯ ಕಟ್ಟಡವೊಂದು ಕುಸಿದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಕಟ್ಟಡಲ್ಲಿದ್ದ ಅಕ್ಮಲ್ ಖಾನ್ ಅವರಿಗೆ ಸೇರಿದ ಎಲೆಕ್ಟ್ರಿಕಲ್ ಅಂಗಡಿಯು ಸಂಪೂರ್ಣ ಹಾನಿಯಾಗಿದೆ. ಕಟ್ಟಡದ ಬಳಿ ನಿಲ್ಲಿಸಿದ್ದ ಕಾರು, ಎರಡು ಬೈಕ್‌ಗಳು ಜಖಂಗೊಂಡಿವೆ. ಕಟ್ಟಡದಲ್ಲಿ ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಘಟನೆ ವೇಳೆ ಊಟಕ್ಕಾಗಿ ಹೊರ ಹೋಗಿದ್ದರಿಂದ ಜೀವ ಹಾನಿ ತಪ್ಪಿದಂತಾಗಿದೆ.

ಮಳೆಯಿಂದ ಗೆಂಡೆಹಳ್ಳಿ ಬೇಲೂರು ರಸ್ತೆಯಲ್ಲಿ‌ ಮರ‌ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು, ಸ್ಥಳೀಯರು ಮರವನ್ನು ತೆರವುಗೊಳಿಸಿದ ಬಳಿಕ ಸಂಚಾರ ಸುಗಮವಾಗಿತ್ತು. ಮಳೆಯ ನಡುವೆಯೇ ತಾಲ್ಲೂಕಿಗೆ ಭಾನುವಾರ ಪ್ರವಾಸಿಗರ ದಂಡು ಹರಿದು ಬಂದಿದ್ದು, ಭೈರಾಪುರ, ದೇವರಮನೆ, ರಾಣಿಝರಿ ಪ್ರದೇಶಗಳಲ್ಲಿ ಪ್ರವಾಸಿಗರಿಂದ ವಾಹನ‌ ದಟ್ಟಣೆ ಉಂಟಾಗಿತ್ತು.

Rain disrupts normal life across Mudigere taluk

Share

Leave a comment

Leave a Reply

Your email address will not be published. Required fields are marked *

Don't Miss

ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗುತ್ತಿರುವುದಕ್ಕೆ ಸರ್ಕಾರದ ವಿವಿಧ ವಸತಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು ಪ್ರಮುಖ ಕಾರಣವಾಗಿದೆ ಎಂದು ಶಾಸಕಿ ನಯನ ಮೋಟಮ್ಮ ತಿಳಿಸಿದರು. ಅವರು ಇಂದು ಮಳಲೂರು,...

ಆಂಟಿ ಪ್ರೀತ್ಸಿ ಬೆಚ್ಚಿ ಬಿದ್ದ ಯುವಕ !

ಚಿಕ್ಕಮಗಳೂರು: ಸೋಷಿಯಲ್‌ ಮಿಡಿಯಾದಲ್ಲಿ ಪರಿಚಯವಾದ ಹುಡುಗ ,ಹುಡುಗಿಯರು ಪ್ರೀತಿಸಿ ಮೋಸ ಹೋಗುವ ಹಲವು ಘಟನೆಗಳಿವೆ. ಪಾಕಿಸ್ತಾನದ ಗೃಹಿಣಿ ಭಾರತದ ಯುವಕ,ಬಾಂಗ್ಲಾದೇಶ ಹುಡುಗ ಭಾರತದ ಯುವತಿ ಪ್ರೀತಿಯ ಜಾಲದಲ್ಲಿ ಮುಳುಗಿದ ಸುದ್ದಿಗಳನ್ನು ಕೇಳಿತ್ತಿರುವಾಗಲೇ...

Related Articles

ರಸ್ತೆ ಅಪಘಾತದಲ್ಲಿ ದಾವಣಗೆರೆಯ ಉದ್ಯಮಿ ಸಾವು

ಕಡೂರು: ತಾಲ್ಲೂಕಿನ ಕನಕರಾಯನಗುಡ್ಡದ ಬಳಿ ಕಾರು ಮತ್ತು ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಚಾಲಕ...

ಬೀದಿ ನಾಯಿಗಳ ಹಾವಳಿ: 11 ಜನರಿಗೆ ಗಾಯ

ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್, ಜಿಲ್ಲಾ ಪಂಚಾಯಿತಿ‌ ಕಚೇರಿ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,...

ಧರ್ಮಸ್ಥಳ ಪ್ರಕರಣಗಳ ತನಿಖೆ ಎಸ್‌ಐಟಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಚಿಕ್ಕಮಗಳೂರು: ಧರ್ಮಸ್ಥಳ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ನಿಷ್ಪಕ್ಷಪಾತವಾಗಿ ನಡೆಸಿ...

ಜನಸಾಮಾನ್ಯರ ಏಳಿಗೆಗೆ ಜೀವನ ಮೀಸಲಿಟ್ಟವರು ಹೆಚ್.ಟಿ.ರಾಜೇಂದ್ರ

ಚಿಕ್ಕಮಗಳೂರು: :- ಸಮಾಜದಲ್ಲಿನ ಶೋಷಿತರು, ರೈತರು, ದಲಿತರ ಮೂಲಹಕ್ಕಿಗಾಗಿ ವೈ ಯಕ್ತಿಕ ಜೀವನವನ್ನು ಜನಸಾಮಾನ್ಯರ ಏಳಿಗೆಗೆ...