Home Latest News 12 ಲಕ್ಷ ರೂ.ವೆಚ್ಚದಲ್ಲಿ ಸರ್ಕಾರಿ ಶಾಲೆಗೆ ನಲಿಕಲಿ ಸಾಮಾಗ್ರಿ
Latest NewschikamagalurHomenamma chikmagalur

12 ಲಕ್ಷ ರೂ.ವೆಚ್ಚದಲ್ಲಿ ಸರ್ಕಾರಿ ಶಾಲೆಗೆ ನಲಿಕಲಿ ಸಾಮಾಗ್ರಿ

Share
????????????????????????????????????
Share

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳ ಮಕ್ಕಳ ಶ್ರೇಯೋಭಿವೃದ್ದಿಗಾಗಿ ರಾಜ್ಯಸರ್ಕಾರ ಹಲ ವಾರು ಸವಲತ್ತುಗಳನ್ನು ಒದಗಿಸುತ್ತಿದೆ. ಜೊತೆಗೆ ದಾನಿಗಳ ಸಹಕಾರವಿದ್ದಲ್ಲಿ ಆ ಶಾಲೆ ಮುಂಚೂಣಿಯಲ್ಲಿ ಹೆಜ್ಜೆಹಾಕಲು ಸಾಧ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ತಾಲ್ಲೂಕಿನ ಅಲ್ಲಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಿನೋಪ್ಸಿಸ್ ಕಂಪನಿ ಮತ್ತು ಇಂ ಡಿಯಾ ಸುಧಾರ್ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್‌ನಿಂದ ಉಚಿತವಾಗಿ ಶಾಲಾಮಕ್ಕಳಿಗೆ ನಲಿಕಲಿ ಚೇರ್ ಮತ್ತು ಟೇಬಲ್ ವಿತರಣಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಅತಿಹೆಚ್ಚು ಮಧ್ಯಮ ಹಾಗೂ ಬಡವರ ಮಕ್ಕಳು ಅಭ್ಯಾಸಿಸಲು ಆಗಮಿಸುತ್ತಾರೆ. ಅವರುಗಳಿಗೆ ಸಮಗ್ರ ಶಿಕ್ಷಣ ಬೋಧಿಸುವ ಬಹುಮುಖ್ಯ ಕಾಯಕ ಶಿಕ್ಷಕರ ಮೇಲಿದೆ. ಹಾಗಾಗಿ ಸರ್ಕಾರವು ಶಾಲಾಮಕ್ಕಳಿಗೆ ಕೊರತೆಯಾಗದಂತೆ ನಿಗಾವಹಿಸುತ್ತಿದೆ. ಜೊತೆಗೆ ದಾನಿಗಳು ಸಹಕರಿಸಿದರೆ ಮಕ್ಕಳ ಭವಿಷ್ಯ ವನ್ನು ಉಜ್ವಲಗೊಳಿಸಬಹುದು ಎಂದರು.

ತಾಲ್ಲೂಕಿನ ಸುಮಾರು ೭೦ ಸರ್ಕಾರಿ ಶಾಲೆಗಳಿಗೆ ೧೨ ಲಕ್ಷ ರೂ. ವೆಚ್ಚದಲ್ಲಿ ನಲಿಕಲಿ ಚೇರ್-ಟೇಬಲ್ ಗಳನ್ನು ಸಿಎಸ್‌ಆರ್ ನಿಧಿಯಿಂದ ಕಂಪನಿಗಳು ವಿತರಿಸಿ ಶೈಕ್ಷಣಿಕ ಬೆಳವಣಿಗೆ ಸಹಕರಿಸಿರುವುದಕ್ಕೆ ಧನ್ಯವಾ ದಗಳು. ತಾವು ಕೂಡಾ ಮುಂದಿನ ಸಾಲಿನಿಂದ ಕಂಪನಿಗಳ ಸಹಕಾರ ಪಡೆದು ವರ್ಷಕ್ಕೆ ಕನಿಷ್ಟ ಎರಡು ಶಾಲೆಗಳಿಗೆ ನಲಿಕಲಿ ಸಾಮಾಗ್ರಿಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡ ತಾಯಿಭಾಷೆ ಜೀವನಕ್ಕೆ ಬಹುಮುಖ್ಯ. ಅದರಂತೆ ಆಂಗ್ಲಭಾಷೆಯ ವ್ಯವಹಾರಿಕವಾಗಿರಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಡಮಕ್ಕಳಿಗೆ ಅನುಕೂಲವಾಗಲು ಎಲ್‌ಕೆಜಿ ಮತ್ತು ಯುಕೆಜಿ ಆಂಗ್ಲಮಾಧ್ಯಮ ತರಗತಿಗಳನ್ನು ತೆರೆಯುವ ಆಲೋಚನೆಯಿದ್ದು ಪ್ರಸ್ತುತ ಅನೇಕ ಗ್ರಾಮಗಳಲ್ಲಿ ದಾನಿಗಳ ಸ ಹಕಾರದಿಂದ ಆರಂಭವಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಮಾತನಾಡಿ ಸಮಾಜದಲ್ಲಿ ಮಕ್ಕಳಿಗೆ ಭ್ರಾತೃತ್ವ ಪರಿಕಲ್ಪನೆ ಬೆ ಳೆಸಬೇಕು. ಹಾಗಾಗಿ ಎಳೆವಯಸ್ಸಿನಿಂದಲೇ ಮಕ್ಕಳಿಗೆ ಜ್ಞಾನ ಬೀಜವನ್ನು ಬಿತ್ತಬೇಕು ಎಂದ ಅವರು ತಳ ಮಟ್ಟದಿಂದ ಜನಿಸಿ ವಿದ್ಯಾರ್ಜನೆ ನಡೆಸಿ ಶೋಷಿತರ ಬದುಕನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂ ಡೊಯ್ದ ಅಂಬೇಡ್ಕರ್ ನಮಗೆಲ್ಲಾ ಮಾದರಿ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತೆ ಯಲಗುಡಿಗೆ ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಿಗೆ ನೆಲದಿಂದ ಚೇರಿನಲ್ಲಿ ಕುಳಿತುಕೊಳ್ಳಲು ನಲಿಕಲಿ ಸಾಮಾಗ್ರಿಯ ವಿತರಿಸಿರುವ ಕಂಪನಿಗಳಿಗೆ ಚಿರಋಣಿ. ಹಾಗೇ ಶಾಲೆ ಯ ಮೂಲಸೌಕರ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದ ಅವರು ಸ್ಮಾರ್ಟ್‌ಶಾಲೆಗೆ ನೆರ್ಟ್‌ವರ್ಕ್ ಸಮಸ್ಯೆಯಿದ್ದು ದಾನಿಗಳ ಸಹಕಾರದಿಂದ ಸಮಸ್ಯೆಗಳು ಬಗೆಹರಿಯಲಿದೆ ಎಂದರು.

ಈ ಸಂದರ್ಭದಲ್ಲಿ ಅಲ್ಲಂಪುರ ಗ್ರಾ.ಪಂ. ಸದಸ್ಯ ಎ.ಟಿ.ರಮೇಶ್, ಕಾಂಗ್ರೆಸ್ ಮುಖಂಡ ಜಯರಾಜ್, ಸರ್ಕಾರಿ ನೌಕರರ ಸಂಘದ ಸದಸ್ಯ ದಿನೇಶ್, ಕಾರ್ಯಾಧ್ಯಕ್ಷ ಸುಂದ್ರೇಶ್, ಶಿಕ್ಷಕರ ಸಂಘದ ನಿರ್ದೇಶಕ ಚಂದ್ರೇಗೌಡ, ಸಾವಿತ್ರಿಬಾಯಿ ಪುಲೆ ಸಂಘದ ನಿರ್ದೇಶಕಿ ಪುಷ್ಪ, ಅಲ್ಲಂಪುರ ಶಾಲೆ ಮುಖ್ಯ ಶಿಕ್ಷಕ ಜೋ ಗಪ್ಪ ಮತ್ತಿತರರು ಹಾಜರಿದ್ದರು.

Nalikali materials for government school at a cost of Rs. 12 lakh

Share

Leave a comment

Leave a Reply

Your email address will not be published. Required fields are marked *

Don't Miss

ಗಿರಿ ಪ್ರದೇಶದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ನೂತನ ಸಂಚಾರ ವ್ಯವಸ್ಥೆ

ಚಿಕ್ಕಮಗಳೂರು: : ಮುಳ್ಳಯ್ಯನಗಿರಿ ಭಾಗದಲ್ಲಿ ಇತ್ತೀಚೆಗೆ ವಾರಾಂತ್ಯದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, ಎರಡು ಸ್ಲಾಟ್‌ಗಳಲ್ಲಿ ಪ್ರತೀದಿನ ವಾಹನಗಳನ್ನು ಗಿರಿಭಾಗಕ್ಕೆ ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು....

ಕಾವೇರುತ್ತಿದೆ ಅಜ್ಜಂಪುರ ಪಟ್ಟಣ ಪಂಚಾಯತಿ ಚುನಾವಣೆ

ಅಜ್ಜಂಪುರ: ಕಳೆದ ಏಳು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಬಣಗುಡುತ್ತಿದ್ದ ಪಟ್ಟಣ ಪಂಚಾಯತಿಗೆ ಆಗಷ್ಟ್ 17 ರಂದು ಚುನಾವಣೆ ದಿನಾಂಕ ನಿಗದಿಯಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜನತಾದಳದ ಮಧ್ಯೆ ಬಿರುಸಿನ...

Related Articles

ಮಕ್ಕಳ ಬಾಲ್ಯ ಸುರಕ್ಷತೆಗಾಗಿ ಭದ್ರ ಬಾಲ್ಯ ಯೋಜನೆ ಅನುಷ್ಠಾನ

ಚಿಕ್ಕಮಗಳೂರು: ಮಕ್ಕಳ ಬಾಲ್ಯವನ್ನು ಸುರಕ್ಷಿತಗೊಳಿಸುವ ಗುರಿ ಇರಿಸಿಕೊಂಡು ಜಿಲ್ಲೆಯಲ್ಲಿ ಭದ್ರ ಬಾಲ್ಯ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಎಲ್ಲಾ...

ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ವಿರುದ್ಧ ಸಮಾಜದಿಂದ ಪ್ರತಿಭಟನೆ

ಚಿಕ್ಕಮಗಳೂರು:  ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ನಿಗಧಿತ ದರಕ್ಕಿಂತ ಕಡಿಮೆ...

ಮಾದಕ ವಸ್ತು ವಿರೋಧಿ ಜಾಗೃತಿ ಸಮಿತಿ ರಚನೆ ಕಡ್ಡಾಯ 

ಚಿಕ್ಕಮಗಳೂರು:  ಶಾಲಾ ಕಾಲೇಜುಗಳಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಸಮಿತಿಗಳನ್ನು ಕಡ್ಡಾಯವಾಗಿ ರಚಿಸುವ ಮೂಲಕ ಮಾದಕ ವಸ್ತು...

ವೇದಾನದಿ ನೀರಿನ ಹಂಚಿಕೆಯಲ್ಲಿ ರೈತರು ಸಂಯಮ ಕಾಪಾಡಬೇಕು

ಚಿಕ್ಕಮಗಳೂರು: ವೇದಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರೈತರು ಸಂಯಮ ಕಾಪಾಡಬೇಕು. ಜೊತೆಗೆ ಕೆರೆ ತುಂಬಿಸುವ...