ಚಿಕ್ಕಮಗಳೂರು: ಸೌಹಾರ್ದ ಸಹಕಾರಿ ಸಂಘ ವಾರ್ಷಿಕ ಶೇ.೨೩ ರಷ್ಟು ಪ್ರಗತಿ ಸಾಧಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ೫೫ ಲಕ್ಷ ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಮಾನ ಪತ್ತಿನ ಸೌಹಾ ರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಬಿ.ದೇವರಾಜ್ ತಿಳಿಸಿದರು.
ನಗರದ ಬೈಪಾಸ್ ಸಮೀಪದ ಕನಸು ಸಭಾಂಗಣದಲ್ಲಿ ಸಮಾನ ಪತ್ತಿನ ಸೌಹಾರ್ದ ಸಹಕಾರಿ ಸಂಘ ದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾ ಡಿದರು.
ಪ್ರಸ್ತುತ ಸಂಘದಲ್ಲಿ ೧೬.೪೪ ಲಕ್ಷ ಠೇವಣಿಯಿದೆ. ಜೊತೆಗೆ ಶೇ.೫೫ ಲಕ್ಷ ನಿವ್ವಳ ಲಾಭದಿಂದ ಹಿನ್ನೆಲೆಯ ಲ್ಲಿ ಸದಸ್ಯರಿಗೆ ಶೇ.೧೪ ರಷ್ಟು ಡಿವಿಡೆಂಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರು ಹಾ ಗೂ ಸಾರ್ವಜನಿಕರಿಗೆ ಅನುಕೂಲವಾಗಲು ಸೇವಾ ಕೇಂದ್ರಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಸದಸ್ಯರ ಆರ್ಥಿಕ ಅಭಿವೃದ್ದಿ ನಿಟ್ಟಿನಲ್ಲಿ ೧೪.೭೫ ಕೋಟಿ ಸಾಲಸೌಲಭ್ಯವನ್ನು ಕಲ್ಪಿಸಿದ್ದು, ಶೇ.೯೮ ರಷ್ಟು ವಸೂಲಾತಿ ಕಾರ್ಯವು ಪೂರ್ಣಗೊಂಡು ಆರ್ಥಿಕ, ಶೈಕ್ಷಣಿಕವಾಗಿ ಸಂಘವು ಮುನ್ನೆಲೆಯಲ್ಲಿದೆ. ಸದಸ್ಯರು ಹೆಚ್ಚಾಗಿ ಎಸ್‌ಬಿ ಖಾತೆಯಲ್ಲಿ ವ್ಯವಹಾರ ನಡೆಸುವ ಮೂಲಕ ಸಹಕಾರಿ ಸಂಘವನ್ನು ಬೆಳವಣಿಗೆಯತ್ತ ಕೊ ಂಡೊಯ್ಯಬೇಕು ಎಂದರು.
ವಿಶೇಷವಾಗಿ ಸಂಘದಲ್ಲಿ ಅರ್ಹತೆ ಹೊಂದಿರುವ ಹಿರಿಯರ ಸದಸ್ಯರಿಗೆ ಮನೆಬಾಗಿಲಿಗೆ ಸೇವೆ ಒದಗಿ ಸುವ ಕಾರ್ಯ ಮಾಡಲಾಗುತ್ತಿದೆ. ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಸಂಘವು ತೊಡಗಿಸಿಕೊಂಡಿದೆ ಎಂ ದ ಅವರು ಶಾಲಾವಿದ್ಯಾರ್ಥಿ, ವೃದ್ದರಿಗೆ ಅನುಕೂಲ ಮೂಲಸೌಕರ್ಯವನ್ನು ಪೂರೈಸಲಾಗಿದೆ ಎಂದು ಹೇ ಳಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಡಿ.ಪಿ.ಕೃಷ್ಣಮೂರ್ತಿ, ನಿರ್ದೇಶಕರುಗಳಾದ ಕೆ.ಎನ್. ದೊಡ್ಡೇಗೌಡ, ಬಿ.ಜಿ.ಸೋಮಶೇಖರಪ್ಪ, ಯು.ಎಂ.ಜಯರಾಮೇಗೌಡ, ಬಿ.ಎ.ಬಾಲಕೃಷ್ಣ, ಎಂ.ಎ.ರವಿಕು ಮಾರ್, ಗಂಗಾಧರ್ ನಾಯ್ಕ್, ಕೆ.ವಿ.ಮಮತಾ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ವೈ.ವೆಂಕಟೇಶ್ ಉ ಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್.ಪ್ರೇಮ ಪ್ರಾರ್ಥಿಸಿದರು. ಕೆ.ಜಿ.ನೀಲಕಂಠಪ್ಪ ನಿರೂಪಿಸಿದರು. ಸೋಮಶೇಖ ರಪ್ಪ ಸ್ವಾಗತಿಸಿದರು. ಗಂಗಾಧರ್ ನಾಯ್ಕ್ ವಂದಿಸಿದರು.
Net profit of Rs. 55 lakh for the cooperative society
Leave a comment