ತರೀಕೆರೆ: ಲಕ್ಕವಳ್ಳಿಯ ಭದ್ರಾ ಅಣೆಕಟ್ಟೆಯಲ್ಲಿ ಶೇ 80ರಷ್ಟು ನೀರು ಭರ್ತಿಯಾಗಿದ್ದು, ಶುಕ್ರವಾರ ಸಂಜೆ ಅಣೆಕಟ್ಟೆಯ ನಾಲ್ಕು ಕ್ರಸ್ಟ್ ಗೇಟ್‍ಗಳನ್ನು ತೆರೆದು ಭದ್ರಾ ನದಿಗೆ ನೀರು ಹರಿಸಲಾಯಿತು.
ಅಣೆಕಟ್ಟೆಯಲ್ಲಿ ಶೇ 80ರಷ್ಟು ನೀರು ಶೇಖರಣೆಯಾದ ಬಳಿಕ, ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಅತಿವೃಷ್ಟಿ ಮತ್ತು ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನೀರನ್ನು ಹೊರ ಬಿಡಲಾಗುತ್ತದೆ ಎಂದು ಬಿ.ಆರ್.ಪಿ.ಯ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಉಮೇಶ್ ತಿಳಿಸಿದ್ದಾರೆ.
Water from Bhadra dam into the river
Leave a comment