ಮೂಡಿಗೆರೆ: ತಾಲ್ಲೂಕಿನ ಬಾಳೂರು ಹೋಬಳಿಯ ಮರ್ಕಲ್ ಎಸ್ಟೇಟ್ ಕಾಫಿ ತೋಟದೊಳಗೆ ಗುರುವಾರ ಮಧ್ಯಾಹ್ನ ಜಾನುವಾರು ಹತ್ಯೆಯಾಗಿ ಮಾಂಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಜುಲೈ ೯ರಂದು ಮಧ್ಯಾಹ್ನ ೩:೩೦ ರಿಂದ ಸಂಜೆ ೭:೩೦ ರ ಒಳಗೆ ಯಾರೋ ಅಪರಿಚಿತ ವ್ಯಕ್ತಿಗಳು ತೋಟದೊಳಗೆ ಒಂದು ಜಾನುವಾರುವನ್ನು (ಹಸು) ಹತ್ಯೆ ಮಾಡಿ ಮಾಂಸ ಮಾಡಿರುವುದು ಕಂಡು ಬಂದಿದೆ. ಜಾನುವಾರುವಿನ ತಲೆ, ಕಾಲುಗಳು, ಚರ್ಮ, ಮಾಂಸ, ಲಿವರ್, ಇತರೆ ಅಂಗಾಂಗಗಳು ಸ್ಥಳದಲ್ಲೇ ಪತ್ತೆಯಾಗಿವೆ.
ಸ್ಥಳ ಪರಿಶೀಲನೆಗೆ ಆಗಮಿಸಿದ ಬಾಳೂರು ಪೊಲೀಸ್ ಠಾಣೆಯ ಪಿಎಸ್‌ಐ ದಿಲೀಪ್ ಕುಮಾರ್ ಅವರ ಮಾಹಿತಿ ಪ್ರಕಾರ, ತೋಟದ ರೈಟರ್ ಅಭಿಲಾಷ್ ಅವರ ಹೇಳಿಕೆಯಂತೆ, ಅಸ್ಸಾಂ ಮೂಲದ ಸುಮಾರು ೧೫ ಮಂದಿ ಕೂಲಿ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ತೋಟದ ಲೈನ್‌ನಲ್ಲಿ ವಾಸವಿದ್ದು, ಘಟನೆಯ ಸಮಯದಲ್ಲಿ ಕೆಲವರು ತೋಟದೊಳಗೆ ಓಡಾಡುತ್ತಿರುವುದು ಕಂಡುಬಂದಿದೆ. ಮಾಂಸ ತಯಾರಿಸಲು ಮರದ ತುಂಡು ಹಾಗೂ ಅಂಗಾಂಗಗಳನ್ನು ಹೂಳಲು ಬಳಸಿದ ಗುದ್ದಲಿ ಸ್ಥಳದಲ್ಲಿ ಪತ್ತೆಯಾಗಿದೆ.
ಅಜೀರ್ ಅಕ್ಮಲ್, ಅಕ್ಕಾಸ್ ಅಲಿ, ನಜ್ರುಲ್ ಹಕ್, ಇಜಾಬುಲ್ ಹಕ್, ಮೆಹರ್ ಅಲಿ, ಮಂಜುಲ್ ಹಕ್ ಬಂಧಿತ ಆರೋಪಿಗಳು ಜಾನುವಾರುವಿನ ಅಂಗಾಂಗಗಳನ್ನು ಪಶುವೈದ್ಯರ ಸಹಾಯದಿಂದ ಪರೀಕ್ಷಿಸಿ, ನಂತರ ಉಪ ವಿಭಾಗೀಯ ದಂಡಾಧಿಕಾರಿಗಳ ಅನುಮತಿಯನ್ನು ಪಡೆದು ನಾಶಪಡಿಸಲಾಯಿತು. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ೩೦೩(೨) ಬಿ.ಎನ್.ಎಸ್ ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ೨೦೨೦ರ ಕಲಂ ೧೨(೧) ಅನ್ವಯ ಪ್ರಕರಣ ದಾಖಲಾಗಿದೆ.
Accused of killing cattle in Merkel farm arrested
Leave a comment