ಚಿಕ್ಕಮಗಳೂರು: ಶಾಹು ಮಹಾರಾಜ ಅವರು ದೀನ ದಲಿತರಿಗಾಗಿ ವಿವಿಧ ಯೋಜನೆ ಗಳನ್ನು ಜಾರಿಗೊಳಿಸಿ ಹಿಂದುಳಿದ ವರ್ಗದ ರಾಜನೆಂದೇ ಗುರುತಿಸಿಕೊಂಡವರು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.
ನಗರದ ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಗುರುವಾರ ನಡೆದ ಶಾಹು ಮಹಾರಾಜ್‌ರವರ ಜನ್ಮದಿನಾಚರ ಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಭಾರತೀಯ ನೆಲದಲ್ಲಿ ಸಮ ಸಂಸ್ಕೃತಿಯ ಪ್ರತಿಪಾದನೆ ಮಾಡಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಅಧಿ ಕಾರ ನಡೆಸಿದವರು ಶಾಹುಮಹಾರಾಜರು. ತಳಸಮುದಾಯವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮೀಸಲಾತಿ ಜಾರಿಗೆ ತಂದವರು ಎಂದು ಹೇಳಿದರು.
ಶಾಹುರವರ ಕ್ರಾಂತಿಕಾರಕ ಹೆಜ್ಜೆಗಳಿಂದ ಅನೇಕ ಹಿಂದುಳಿದ ವರ್ಗದವರ ಮೇಲೆ ಬರಲು ಸಾಧ್ಯವಾ ಯಿತು. ಹೀಗಾಗಿ ತಳಸಮುದಾಯದವರು ಸದಾ ಶಾಹು ಮಹಾರಾಜರನ್ನು ಸ್ಮರಿಸಬೇಕು. ಶಾಹುರವರ ಬ ದುಕಿನಲ್ಲಿ ಅಳವಡಿಸಿಕೊಂಡ ಸಾಮಾಜಿಕ ಪ್ರಜ್ಞೆ, ಹಿಂದುಳಿದವರಿಗೆ ಸ್ಪಂದಿಸಿದ ಗುಣಗಳನ್ನು ಮೈಗೂಡಿಸಿಕೊ ಳ್ಳಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಸೌಹಾರ್ದ ಮೂಡಿಸುವುದಕ್ಕಾಗಿ ಶಾಹು ಮಹಾರಾಜರು ಶ್ರಮಿಸಿದ್ದಲ್ಲದೇ ಬೇರೊಬ್ಬ ರಿಗೂ ಅದಕ್ಕಾಗಿ ಚೈತನ್ಯ ತುಂಬಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಹೋರಾಟ ಮತ್ತು ಉದ್ದೇಶವನ್ನು ನಾ ವುಗಳು ಪೂರೈಸಬೇಕಾದ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ವೈಚಾರಿಕತೆಯ ಭದ್ರ ಬುನಾದಿಯನ್ನು ಸಾಮಾಜಿಕ ಪರಿವರ್ತನ ಚಳವಳಿಯ ಸಂದರ್ಭದಲ್ಲಿ ಶಾಹೂ ಮಹಾರಾಜರು ಹಾಕಿದ್ದಾರೆ. ಅದರ ಫಲ ವನ್ನು ನಾವೀಗ ಪ್ರಜಾಪ್ರಭುತ್ವದಲ್ಲಿ ಅನುಭವಿಸುತಿದ್ದೇವೆ. ಸಾಧನೆ ಮಾಡಿದ ಮಹನೀಯರ ಜಯಂತಿ ಕಾ ರ್ಯಕ್ರಮ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್ ಶಾಹು ಮಹಾರಾಜರು ಶೋಷಿತರನ್ನು ಆರ್ಥಿಕವಾಗಿ ಸಬಲರಾಗಿಸುವುದಕ್ಕಾಗಿ ಹಲವಾರು ಯೋಜನೆಗಳನ್ನು ಪರಿಚಯಿಸುವ ಜೊತೆಗೆ ವಿವಿಧ ಸಾಮಾಜಿಕ ಹೋರಾಟಗಾರರೊಡನೆ ಸೇರಿ ಶ್ರಮಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್, ಲೋಕಸಭಾ ಕ್ಷೇತ್ರದ ಸಂಯೋಜಕ ಕೆ.ಆರ್. ಗಂಗಾಧರ್, ಜಿಲ್ಲಾ ಉಪಾಧ್ಯಕ್ಷರಾದ ಬಾಬು, ಕೆ.ಎಸ್.ಮಂಜುಳಾ, ಕಾರ್ಯದರ್ಶಿ ಪುಟ್ಟಸ್ವಾಮಿ, ಅಸೆಂಬ್ಲಿ ಉಪಾಧ್ಯಕ್ಷ ಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಖಜಾಂಚಿ ಟಿ.ಹೆಚ್.ರತ್ನ, ಕಛೇರಿ ಕಾರ್ಯ ದರ್ಶಿ ಕಲಾವತಿ, ಮುಖಂಡರುಗಳಾದ ಲತಾ, ಆನಂದ್ ಉಪಸ್ಥಿತರಿದ್ದರು.
Shahu Maharaj the king of the backward classes
Leave a comment