Home namma chikmagalur ಎಸ್‌ಬಿಐ ಸಂಸ್ಥಾಪನ ದಿನ – 60 ಜನರಿಂದ ಸ್ವಯಂ ಪ್ರೇರಿತ ರಕ್ತದಾನ
namma chikmagalurchikamagalurHomeLatest News

ಎಸ್‌ಬಿಐ ಸಂಸ್ಥಾಪನ ದಿನ – 60 ಜನರಿಂದ ಸ್ವಯಂ ಪ್ರೇರಿತ ರಕ್ತದಾನ

Share
????????????????????????????????????
Share

ಚಿಕ್ಕಮಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ ೭೦ನೇ ಸಂಸ್ಥಾಪನದ ದಿನ ದ ಅಂಗವಾಗಿ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಸಹಯೋಗದಲ್ಲಿ ನಗರದ ಕೋಟೆ ಸಮೀಪದ ಎಸ್‌ಬಿಐ ಬ್ಯಾಂಕ್ ಕಚೇರಿ ಆವರಣದಲ್ಲಿ ಸಿಎಸ್‌ಆರ್ ನಿಧಿಯಿಂದ ಶುಕ್ರವಾರ ರಕ್ತದಾನ ಶಿಬಿರವನ್ನು ನಡೆಸಲಾಯಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್‌ಬಿಐ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಟಿ.ಎಂ.ರವಿ ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಅತಿದೊಡ್ಡ ಬ್ಯಾಂಕ್ ಆಗಿದೆ. ೨೦೦ ವರ್ಷಗಳ ಇತಿ ಹಾಸವಿದೆ. ಮೊದಲು ಬ್ಯಾಂಕ್ ಆಫ್ ಕಲ್ಕತ್ತಾ ಹೆಸರಿನಲ್ಲಿ ಆರಂಭವಾಗಿ ನಂತರ ಇಂಪಿರಿಯಲ್ ಬ್ಯಾಂಕ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು ಎಂದರು.

೧೯೯೫ರ ಜುಲೈ ೧ ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿ ತು. ಅಲ್ಲದೇ ಸರ್ಕಾರಿ ಕಚೇರಿ, ಆಸ್ಪತ್ರೆ, ಕಾಲೇಜುಗಳಿಗೆ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಸಾಮಾಜಿಕ ಕಾರ್‍ಯಗಳನ್ನು ಮಾಡುವ ಮೂಲಕ ಎಸ್‌ಬಿಐ ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಮಾತನಾಡಿ ಜೀವಗಳನ್ನು ಉಳಿಸಲು ಮತ್ತು ಆಸ್ಪತ್ರೆಗಳು ತುರ್ತು ಪರಿಸ್ಥಿತಿಗಳು, ಶಸ್ತ್ರಚಿಕಿತ್ಸೆಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ನಿರ್ವಹಿಸಲು ರಕ್ತದಾನವು ಅತ್ಯ ಗತ್ಯ. ರಕ್ತದಾನವು ಸರಳ ಮತ್ತು ನಿಸ್ವಾರ್ಥ ಕ್ರಿಯೆಯಾಗಿದ್ದು ಅಗತ್ಯವಿರುವವರಿಗೆ ಸ್ಪಂದಿಸುವ ಗುಣ ಬೆಳೆಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮ ಬೀರು ತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೇ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತ ಗ ಗಾಯಾಳುಗಳು ಮೃತಪಡುತ್ತಿದ್ದು ಈ ಬಗ್ಗೆ ಗಮನಹರಿಸಿ ಭಯಪಡದೇ ರಕ್ತದಾನ ಶಿಬಿರದಲ್ಲಿ ಪಾಲ್ಗೊ ಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ|| ಮುರಳಿಧರ್ ಮಾತನಾಡಿ ರಕ್ತದಾನದಿಂದ ಮೂರು ಜೀವಗಳನ್ನು ಉಳಿಸಬಹುದು. ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ರೋಗಿಗಳು ಮತ್ತು ಅಪಘಾತಗಳಂತಹ ತು ರ್ತು ಸಂದರ್ಭಗಳಲ್ಲಿ ಸಂರಕ್ಷಿಸಬಹುದು. ಅಲ್ಲದೇ ಸ್ಥಳೀಯ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ಸ್ಥಿರ ವಾದ ರಕ್ತದ ಪೂರೈಕೆಯನ್ನು ಕಾಪಾಡಿಕೊಳ್ಳಲು ಯುವಕರು ಸ್ವಯಂ ಮುಂದಾಗಬೇಕು ಎಂದರು.

ಇದೇ ವೇಳೆ ೬೦ ಜನರು ಸ್ವಯಂಪ್ರೇರಿತ ರಕ್ತದಾನ ಮಾಡಿದರು. ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಿ ಗಳಿಗೆ ೫೦೦ ರೂ. ಬೆಲೆಬಾಳುವ ಬಹುಮಾನದ ಕೂಪನ್ ಬ್ಯಾಂಕ್‌ನಿಂದ ವಿತರಿಸಲಾಯಿತು. ಈ ಸಂದರ್ಭ ದಲ್ಲಿ ಹೊಸಮನೆ ಎಸ್‌ಬಿಐ ಬ್ಯಾಂಕ್ ಶಾಖೆ ಮುಖ್ಯಸ್ಥ ಗುರುಪ್ರಸಾದ್ ಕಾಮತ್, ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಕೆ.ರಂಗ ಸ್ವಾಮಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಕು.ಪಲ್ಲವಿ ಜೋಷಿ, ರೆಡ್‌ಕ್ರಾಸ್ ನಿರ್ದೇಶಕ ವಿಲಿಯಂ ಪಿರೇರಾ, ಆ ಯೋಜಕ ಜಿ.ವಿ.ಗಿರೀಶ್, ಜೇಸಿಐ ಅಧ್ಯಕ್ಷ ಸಿ.ಬಿ. ಪ್ರದೀಪ್, ವೈದ್ಯ ಡಾ|| ಯಶವರ್ಧನ್ ಮತ್ತಿ ತರರು ಉಪ ಸ್ಥಿತರಿದ್ದರು.

SBI Foundation Day – 60 people volunteer to donate blood

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ‌ಲ್ಲಿ ಇಂದು ನೂತನ ರಸ್ತೆ ಮೇಲ್ವೇತುವೆಯ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ

ಚಿಕ್ಕಮಗಳೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ಸಚಿವರಾದ ವಿ.ಸೋಮಣ್ಣ ಅವರು ಮೇ 31 ರಂದು (ನಾಳೆ ಭಾನುವಾರ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ...

ಶ್ರೀಗಂಧ ಮರಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ

ಚಿಕ್ಕಮಗಳೂರು: ನಾಡಿನಲ್ಲಿ ಶ್ರೀಗಂಧ ಮರಗಳ ರಕ್ಷಣೆ ಮತ್ತು ನಗರವನ್ನು ಪ್ಲಾಸ್ಟಿಕ್ ಮು ಕ್ತಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲಾ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಮತ್ತು ವಿವಿಧ ಕನ್ನಡಪರ ಸಂಘಟನೆಗಳ...

Related Articles

ಪ್ಲೆಕ್ಸ್‌ ಹರಿದ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು: ಕಾಫಿನಾಡಿನ ಕಾಂಗ್ರೆಸ್ ಶಾಸಕ ಹೆಚ್.ಡಿ.ತಮ್ಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವಿದ್ದ ಪ್ಲೆಕ್ಸ್‌ಗೆ...

ಅಡಿಕೆ ಕಳವು ಪ್ರಕರಣದ ಆರೋಪಿಗಳ ಬಂಧನ

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಜಕ್ಕಣಕ್ಕಿಯ ರೈತರ ಗೋದಾಮಿನಲ್ಲಿಟ್ಟಿದ್ದ ಅಡಿಕೆಯನ್ನು ಕಳವು ಮಾಡಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು...

ಮೂಡಿಗೆರೆಯಲ್ಲಿ ಬಾಗಿಲು ಮುರಿದು ಕಳ್ಳತನ

ಮೂಡಿಗೆರೆ: ಬೀಗ ಹಾಕಿದ್ದ ಮನೆಯೊಂದರ ಮುಂಬಾಗಿಲು ಮುರಿದು ಮನೆಯೊಳಗೆ ನುಗ್ಗಿ ನಗದು ಸಹಿತ ಅಪಾರ ಮೌಲ್ಯದ...

ನಾಗಲಕ್ಷ್ಮಿ ಚಿತ್ರಮಂದಿರದ ಪ್ರದರ್ಶನ ಸ್ಥಗಿತ

ಚಿಕ್ಕಮಗಳೂರು: ಅಗ್ನಿ ಸುರಕ್ಷತಾ ಪರಿಕರಗಳನ್ನು ಅಳವಡಿಸದ ಕಾರಣಕ್ಕೆ ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನಗಳನ್ನು ಅಧಿಕಾರಿಗಳು...