ಬಾಳೆಹೊನ್ನೂರು: ಸಮೀಪದ ಹಿರೇಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಿಗೆಬೈಲು ತುಪ್ಪೂರು ಬಳಿ ಫಸಲು ತುಂಬಿದ್ದ 750ಕ್ಕೂ ಅಧಿಕ ಕಾಫಿ ಗಿಡಗಳನ್ನು ರಾತ್ರಿ ವೇಳೆ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ ಎಂದು ಆರೋಪಿಸಿ ತುಪ್ಪೂರಿನ ಶಂಕರೇಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿದ್ದ ಎರಡು ಎಕರೆಯ ಕಾಫಿ ತೋಟದಲ್ಲಿ ಈ ಬಾರಿ ಉತ್ತಮ ಫಸಲು ಇತ್ತು. ಶನಿವಾರ ರಾತ್ರಿ ಕಾಫಿ ಗಿಡಗಳನ್ನು ಕಡಿದು ಹಾಕಲಾಗಿದೆ. ದುಷ್ಕೃತ್ಯದಲ್ಲಿ ಸ್ಥಳೀಯರ ಕೈವಾಡದ ಶಂಕೆ ಇದ್ದು, ಆರೋಪಿಗಳನ್ನು ಪತ್ತೆ ಹಚ್ಚು ವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಸಿಪಿಐ ಗುರುದತ್ ಕಾಮತ್, ಅಪ ರಾಧ ವಿಭಾಗದ ಪಿಎಸ್‌ಐ ಯೋಗೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
More than 700 coffee plants destroyed by miscreants
Leave a comment