ಚಿಕ್ಕಮಗಳೂರು: ಚಿಕ್ಕಮಗಳೂರು ಮತ್ತು ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಅಗಲೀಕರ ಣದ ವೇಳೆ ಮರಗಳ ಕಟಾವು ಮಾಡುವುದನ್ನು ತಡೆಗಟ್ಟಬೇಕು ಎಂದು ಬಹುಜನ ಸಮಾಜ ಪಕ್ಷ ತಾಲ್ಲೂಕು ಘಟಕದಿಂದ ಶುಕ್ರವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮೂಗ್ತಿಹಳ್ಳಿ ಗ್ರಾ ಮದಿಂದ ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ವರೆಗೆ ರಸ್ತೆ ಅಬಲೀಕರಣದ ಎರಡು ಬದಿಯ ಸಾವಿರಾರು ಮರಗ ಳನ್ನು ಹನನ ಮಾಡುವುದಾಗಿ ವಿಷಯ ತಿಳಿದಿರುವ ಕಾರಣ ಈ ನಡೆಯನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಕಳೆದ ಹಲವಾರು ವರ್ಷಗಳಿಂದ ಪ್ರಯಾಣಿಕರಿಗೆ, ಪಾದಚಾರಿಗಳಿಗೆ ನೆರಳಿನ ಆಶ್ರಯ ನೀಡುವ ಜೊ ತೆಗೆ ಹಣ್ಣು-ಹಂಪಲುಗಳನ್ನು ಎರಡು ಬದಿಯ ಮರಗಳನ್ನು ನೀಡುತ್ತಿವೆ. ಆದರೆ ಅಗಲೀಕರಣ ನೆಪದಲ್ಲಿ ಮರಗಳನ್ನು ತೆರವುಗೊಳಿಸುತ್ತಿರುವುದು ವಿಷಾಧಕರ ಸಂಗತಿ ಎಂದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ವಿಚಾರದಲ್ಲಿ ಪಕ್ಷದ ವಿರೋಧವಿಲ್ಲ. ಆದರೆ ಅಭಿವೃದ್ದಿ ಹೆಸರಿನಲ್ಲಿ ಮರ ಗಳನ್ನು ಕಡಿತಲೆ ನಿರ್ಧಾರ ಸರಿಯಲ್ಲ. ಪ್ರಸ್ತುತವಿರುವ ಹಳೆ ರಸ್ತೆಯನ್ನು ಉಳಿಸಿ, ಪಕ್ಕದಲ್ಲಿ ಇನ್ನೊಂದು ರಸ್ತೆ ಯನ್ನು ನಿರ್ಮಿಸಬಹುದು. ಹೀಗಾಗಿ ಜಿಲ್ಲಾಡಳಿತ ಮದ್ಯಪ್ರವೇಶಿಸಿ ಮರ ಹನನ ಮಾಡುವುದನ್ನು ನಿಲ್ಲಿಸ ಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿ ವಿಷಯದಲ್ಲಿ ನಿಯಮ ಸಾಧ್ಯವಾಗದಿದ್ದಲ್ಲಿ ಕನಿಷ್ಟ ಒಂದು ಸಾಲನ್ನಾದರೂ ಮರಗಳನ್ನು ಉಳಿಸಬೇಕು. ಇದೀಗ ರಸ್ತೆ ಅಭಿವೃದ್ದಿಯಲ್ಲಿ ಮರಗಳ ಹನನ ಮಾಡ ಲಾಗಿದೆ ಹೊರತು ಒಂದು ಮರವನ್ನು ಬೆಳೆಸುವ ಪ್ರಯತ್ನ ನಡೆದಿಲ್ಲ. ಹೀಗಾಗಿ ಮರಗಳನ್ನು ಉಳಿಸಿ ಮಾನ ವ ಜನಾಂಗದ ಒಳಿತಿಗೆ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಸಂಯೋಜಕ ಕೆ.ಆರ್.ಗಂಗಾಧರ್, ಅಸೆಂಬ್ಲಿ ಖಜಾಂಚಿ ರತ್ನ, ಟಿ.ಹೆಚ್.ನಗರಾಧ್ಯಕ್ಷ ಡಿ.ಹೆಚ್. ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Appeal to DC to stop felling of trees under the pretext of road widening
Leave a comment