ಚಿಕ್ಕಮಗಳೂರು: ಶಿಕ್ಷಕರಿಗಾಗಿ ಜನರೇಟಿವ್ ಎಐಯೊಂದಿಗೆ ದೈನಂದಿನ ಕೆಲಸಗಳಲ್ಲಿ ಸ ಮಯವನ್ನು ಉಳಿಸಲು, ಸೂಚನೆಗಳನ್ನು ವೈಯಕ್ತೀಕರಿಸಲು, ಪಾಠಗಳು ಮತ್ತು ಚಟುವಟಿಕೆಗಳನ್ನು ಸೃಜ ನಾತ್ಮಕ ರೀತಿಯಲ್ಲಿ ವರ್ಧಿಸಲು ಸಹಕಾರಿ ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಹೇಳಿದರು.
ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ‘ಜನರೇಟಿವ್ ಎ.ಐ.ಫಾರ್ ದ ಮಾರ್ಡನ್ ಎಜುಕೇಟರ್ ಎಂಬ ವಿಷಯ ಕುರಿತು ಅಧ್ಯಾಪಕರುಗಳ ಅಭಿವೃದ್ದಿಗೆ ಏರ್ಪಡಿಸಿದ್ದ ಆರು ದಿನಗಳ ಕಾ ರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಯಂ-ಗತಿಯ ಕೋರ್ಸ್ ಶಿಕ್ಷಕರ ಕಾರ್ಯನಿರತ ವೇಳಾಪಟ್ಟಿಗೆ ಹೊಂದಿಕೊಳ್ಳುತ್ತದೆ ಮತ್ತು ನಮ್ಯತೆ ಯನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ. ಇದು ಎಲ್ಲಾ ವಿಭಾಗಗಳ ಶಿಕ್ಷಕರಿಗೆ ಪ್ರಾಯೋಗಿಕ ಅನುಭವವನ್ನು ನೀಡು ತ್ತದೆ ಹಾಗೂ ಕೋರ್ಸ್ ಅನ್ನು ಪೂರ್ಣಗೊಳಿಸಲಿದೆ ಎಂದು ತಿಳಿಸಿದರು.
ಎಐ ತಜ್ಞರು ಅಭಿವೃದ್ಧಿಪಡಿಸಿರುವ ಈ ಕೋರ್ಸ್ ಎಐ ಅನ್ನು ನಿಮ್ಮ ಅಭ್ಯಾಸಕ್ಕೆ ತರಲು ನಿಮಗೆ ಸಹಾ ಯ ಮಾಡುತ್ತದೆ. ನೀವು ಎಐ ಬಗ್ಗೆ ಮೂಲಭೂತ ತಿಳುವಳಿಕೆಯನ್ನು ಸಹ ಪಡೆಯಬಹುದು. ಈ ತಂತ್ರಜ್ಞಾ ನದ ಅವಕಾಶಗಳು ಮತ್ತು ಮಿತಿಗಳು ಮತ್ತು ಅದನ್ನು ಜವಾಬ್ದಾರಿಯುತವಾಗಿ ಹೇಗೆ ಬಳಸುವುದು ಎಂಬು ದನ್ನು ನೀವು ಕಲಿಯಬಹುದು ಎಂದರು.
ಕೌಶಲ್ಯ ಟೆಕ್ನಿಕಲ್ ಟ್ರೈನಿಂಗ್ ಮತ್ತು ಕನ್ಸಲ್ಟೆನ್ಸಿ ಸರ್ವಿಸ್‌ನ ಸಂಸ್ಥಾಪಕ ರಘುಪ್ರಸಾದ್ ಮಾತನಾಡಿ ಜನರೇಟಿವ್ ಎಐ ಎಂಬ ವಿಷಯವು ನಿಜಕ್ಕೂ ಇಂದಿನ ಯುಗಕ್ಕೆ ಅಗತ್ಯವಾಗಿದ್ದು, ಅಧ್ಯಾಪನದಲ್ಲಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ದಾರಿ ಮಾಡುತ್ತದೆ. ಜೊತೆಗೆ ತಂತ್ರಜ್ಞಾನವನ್ನು ನುರಿತು ತಜ್ಞರಿಂದ ಕಲಿಯುವ ಅದ್ಬುತ ವೇದಿಕೆ ಇದಾಗಿದ್ದು ಭಾಗವಹಿಸುವ ನವೀನ ಕಲಿಕರಿಗೆ ಉಪಯೋಗ ಎಂದರು.
ಇದೇ ವೇಳೆ ವಿವಿಧ ಕಾಲೇಜಿನಿಂದ ೫೦ಕ್ಕೂ ಹೆಚ್ಚು ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಹಾಗೂ ಪಾ ಧ್ಯಾಪಕಿ ಡಾ|| ಪುಷ್ಪ ರವಿಕುಮಾರ್ ವಿಭಾಗದ ಸಂಯೋಜಕರಾದ ಪ್ರೊ.ಎಸ್.ಹರೀಶ್, ಪ್ರೊ.ಸಿ.ಎ.ಅನ್ಸರ್ ಪಾಷಾ, ಪ್ರೊ.ಜೆ.ಮಣಿಕಂಠಪ್ರಸಾದ್, ಪ್ರೊ.ಅರ್ಪಿತ ಆಯೋಜನಾ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
Saving time with AI technology
Leave a comment