Home Latest News ಕ್ರಾಂತಿಕಾರಿ ಬದಲಾವಣೆ ಬಂದೂಕಿನಿಂದಲ್ಲ-ಹೋರಾಟದಿಂದ
Latest Newschikamagalurnamma chikmagalur

ಕ್ರಾಂತಿಕಾರಿ ಬದಲಾವಣೆ ಬಂದೂಕಿನಿಂದಲ್ಲ-ಹೋರಾಟದಿಂದ

Share
Share

ಚಿಕ್ಕಮಗಳೂರು: ಜನರಲ್ಲಿ ಕ್ರಾಂತಿಕಾರಿ ಬದಲಾವಣೆ ಮೂಡಿಸುವುದು ಬಂದೂಕಿನಿಂದಲ್ಲ, ಹೊಸ ರಾಜಕೀಯ ಬದಲಾವಣೆ ಅರ್ಥೈಸಿಕೊಂಡು, ನಿವೇಶನ ಹಾಗೂ ಭೂರಹಿತರು ಹೋರಾಟ ರೂಪಿಸಿದಾಗ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ. ವಿ.ಲೋಕೇಶ್ ಹೇಳಿದರು.

ನಗರದ ಸಿಪಿಐ ಕಚೇರಿಯಲ್ಲಿ ಬುಧವಾರ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ ಶತಮಾನ ಸಂಭ್ರಮ ಹಾಗೂ ತಾಲ್ಲೂಕು ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಶತಮಾನದಿಂದ ಅಧಿಕಾರ ಹೊರತಾಗಿ ಜನತೆಯ ನೋವು, ನಿರಾಸೆ ಹಾಗೂ ಶೋಷಿತರ ಪರವಾಗಿ ನಿರಂತರವಾಗಿ ಹೋರಾಡುತ್ತಿರುವ ಪಕ್ಷ ಸಿಪಿಐ. ಸ್ವಾತಂತ್ರ್ಯ ಪೂರ್ವದ ಮುಂಚೆಯೂ ಬ್ರಿಟಿಷರ ಬೂಟು ನೆಕ್ಕಿಕೊಂಡು ಅಧಿಕಾರ ನಡೆಸಿದ ಎರಡು ರಾಷ್ಟ್ರೀಯ ಪಕ್ಷಗಳು ರೈತರು, ಕಾರ್ಮಿಕ ವರ್ಗವನ್ನು ಅಡಿಯಾ ಳಗಿಸಿಕೊಂಡು ವೈಯಕ್ತಿಕವಾಗಿ ಸಿರಿಸಂಪತ್ತು ಹೆಚ್ಚಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಷ್ಟ್ರದಲ್ಲಿ ಶೇ.೮೦ ರಷ್ಟು ದುಡಿಯುವ ವರ್ಗದಿಂದ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು ಆಸ್ತಿ-ಅಂ ತಸ್ತು ಹೆಚ್ಚಳಗೊಳಿಸಿ ಶ್ರಮಿಕರನ್ನು ಕೆಳಗೆ ತಳ್ಳುತ್ತಿದೆ. ಜಾತಿ ತಾರತಮ್ಯ, ಬಡವ-ಶ್ರೀಮಂತ ಎಂದು ವಿಂಗಡಿಸಿ ಜನಾಂಗವನ್ನು ಒಡೆಯುತ್ತಿದೆ. ಈ ವಿರುದ್ಧ ಕಮ್ಯೂನಿಸ್ಟ್ ಪಕ್ಷ ಹೋರಾಟ ರೂಪಿಸಿದ ಕಾರಣ ಇಂದು ಶೋ ಷಿತರು ಸ್ವಾಭಿಮಾನದ ಜೀವನಕ್ಕೆ ದಾರಿಯಾಗಿದೆ ಎಂದರು. ದೇಶದ ಬಹುಸಂಖ್ಯಾತರು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಜಾತಿ ಸಮೀಕ್ಷೆ ಕಡ್ಡಾಯವಾಗಿದೆ. ಆದರೆ ಕೇಂದ್ರ ಸರ್ಕಾರ ಜನಗಣತಿಗೆ ಮುಂದಾಗಿರುವುದು ಸರಿಯಾದ ನಿರ್ಧಾರವಲ್ಲ. ಈ ಹಿಂದೆ ೧೯೩೨ರಲ್ಲಿ ಬ್ರಿಟಿ ಷರ ಆಳ್ವಿಕೆಯಲ್ಲಿ ಜಾತಿಸಮೀಕ್ಷೆ ನಡೆದಿತ್ತು. ಇದಾದ ಬಳಿಕ ಇಂದಿಗೂ ದೇಶದಲ್ಲಿ ಸಮೀಕ್ಷೆಗೆ ಯಾವ ಸರ್ಕಾ ರಗಳು ಆಸಕ್ತಿ ತೋರದೇ ಬಹುಜನರನ್ನು ತುಳಿಯುತ್ತಿದೆ ಎಂದರು.

ರೈತರು, ವಸತಿ ರಹಿತರು ಹಾಗೂ ಶೋಷಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹಿಮ್ಮೆಟ್ಟಿ ಸಿ ಹೋರಾ ಡಿದ ಪಕ್ಷ ಸಿಪಿಐ ಎಂದ ಅವರು ಈ ಫಲವಾಗಿ ಕಳೆದ ಎರಡು ದಶಕಗಳಿಂದ ಜನಾಂಗವು ಹಂತ ಹಂತ ವಾಗಿ ಪ್ರಗತಿ ಸಾಧಿಸಿದೆ. ಆದರೆ ರಾಜ್ಯದಲ್ಲಿ ಕಾರ್ಮಿಕರಿಗೆ ೮ ಗಂಟೆ ಕೆಲಸವನ್ನು ೧೨ ಗಂಟೆಗೆ ಸೀಮಿತಗೊ ಳಿಸಿ ದುಡಿಯುವ ವರ್ಗದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ದೂರಿದರು. ೧೯೨೫ ರಲ್ಲಿ ನಾಗ್ಪುರದಲ್ಲಿ ಜನನ ಪಕ್ಷವು ಶೈಕ್ಷಣಿಕ ಸಾಲಿಗೆ ಶತಮಾನೋತ್ಸವ ಪೂರೈಸಿದೆ. ಪಕ್ಷದ ಶಿಸ್ತು, ಸಂಯಮ ಹಾಗೂ ವಿಧಿವಿಧಾನಗಳು ಬೇರೆ ಯಾವುದೇ ರಾಜಕೀಯ ಪಕ್ಷದಲ್ಲಿಲ್ಲ. ಮೂರು ವರ್ಷಕ್ಕೊಮ್ಮೆ ಹೊಸ ಸಮಿತಿ ಸ್ಥಾಪಿಸುತ್ತದೆ. ಪ್ರಸಕ್ತ ರಾಜಕೀಯ ಸವಾಲುಗಳನ್ನು ಎದುರಿಸಿ ಬಡವರ್ಗಕ್ಕೆ ವಿಭಿನ್ನ ಹೋರಾ ಟದಿಂದಲೇ ಕಮ್ಯೂನಿಸ್ಟ್ ಬೆಳೆದುಕೊಂಡು ಬಂದಿದೆ ಎಂದರು.

ಮುಂದಿನ ದಿನಗಳಲ್ಲಿ ರಾಜಕಾರಣ ಬಹಳಷ್ಟು ಕಠಿಣತೆದಿಂದ ಕೂಡಿದೆ. ತೆರಿಗೆ, ರೈತರ ಸಮಸ್ಯೆ, ವಸತಿ, ಶಿಕ್ಷಣ, ಆಹಾರ ಪದ್ಧತಿ ಅಪಾಯದಲ್ಲಿದೆ. ಹಣವಿದ್ದನು ಮಾತ್ರ ಅಧಿಕಾರ ಎಂಬಂತಾಗಿದೆ. ಜಾತಿ ಪ್ರಾಬಲ್ಯ ಬಹುದೊಡ್ಡ ಶಕ್ತಿ ವಹಿಸುತ್ತಿದೆ. ಕಾನೂನು ಬದಲಾವಣೆ, ಜಾತಿ-ಧರ್ಮದ ಕಿತ್ತಾಟಗಳಿವೆ. ಕರಾವಳಿ ಭಾಗದ ಲ್ಲೂ ಪರಸ್ಪರ ಒಡೆದಾಳಿ ಸಂವಿಧಾನ ಆಶಯಕ್ಕೆ ವಿರುದ್ಧವಾಗಿ ರಾಜಕಾರಣ ನಡೆಯುತ್ತಿವೆ ಎಂದರು. ಸಂವಿಧಾನದ ಆಶಯದಲ್ಲಿ ಸರ್ವರಿಗೂ ಸಮಾನ ಗೌರವ, ಉದ್ಯೋಗ, ಬದುಕಿಗಾನುಸಾರ ವೇತನ, ಭೂಮಿ, ಜಾತಿರಹಿತ ಸಮಾಜದ ಉದ್ದೇಶ. ಆದರೆ ಸ್ವಾತಂತ್ರ್ಯವಾಗಿ ಏಳು ದಶಕ ಪೂರೈಸಿದರೂ ಬಡವರು, ಶೋಷಿತರ ಕನಸು ಛಿದ್ರವಾಗುತ್ತಿದೆ. ಕಾರ್ಮಿಕ ವರ್ಗ ಅಧಿಕಾರ ಹಿಡಿಯದೇ ಗಡಿಪಾರು, ರೌಡಿಗಳು, ದಲ್ಲಾ ಳಿ, ಮಠದ ಪ್ರತಿನಿಧಿಗಳು ಜನಪ್ರತಿನಿಧಿಗಳಾಗಿ ದುಡಿಯುವ ವರ್ಗಕ್ಕೆ ಬಹುದೊಡ್ಡ ಮೋಸ ಮಾಡುತ್ತಿದೆ ಎಂ ದು ತಿಳಿಸಿದರು.

ರಾಜ್ಯ ಮಂಡಳಿ ಸದಸ್ಯ ಹೆಚ್.ಎಂ.ರೇಣುಕಾರಾಧ್ಯ ಮಾತನಾಡಿ ರಾಜ್ಯದ ಜನತೆ ಟಿವಿಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಎರಡೇ ರಾಜಕೀಯ ಪಕ್ಷಗಳು ಎಂದು ನಂಬುತ್ತಿದೆ. ಈ ರಾಜಕಾರಣಿಗಳು ವ್ಯಾಪಾರ ದೃಷ್ಟಿ ಯಿಂದ ರಾಜಕಾರಣ ಮಾಡುತ್ತಿದೆ. ಟಿಕೇಟ್‌ಗಾಗಿ ಜಾತಿ ಮತ್ತು ಖರ್ಚಿನ ಶಕ್ತಿ ಕೇಳುತ್ತಾರೆ. ಈ ನಡುವೆ ಸಿಪಿ ಐ ತ್ಯಾಗ, ಬಲಿದಾನದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಉತ್ತಮ ಪಕ್ಷವಾಗಿ ಹೊರಹೊಮ್ಮಿದೆ ಎಂ ದು ಹೇಳಿದರು.

ಚುನಾವಣಾ ಅಖಾಡದಲ್ಲಿ ಎಲ್ಲರೂ ನಮ್ಮನವರೇ ಎಂದೇಳುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು, ಅಧಿಕಾರದ ಬಳಿಕ ಮೇಲ್ಚಾತಿಗೆ ಒತ್ತು ನೀಡುತ್ತದೆ. ಸಮಾಜದಲ್ಲಿ ಉತ್ತಮ ನಡತೆ, ಎಲ್ಲರೂ ಪ್ರೀತಿ ಸುವ ಗುಣ ಹಾಗೂ ಪರೋಪಕಾರಿ ಮನುಜನೇ ನಿಜವಾದ ಮೇಲ್ಚಾತಿ ವ್ಯಕ್ತಿಯಾಗಲು ಸಾಧ್ಯವಾಗಿದೆ. ಜೊ ತೆಗೆ ಬಡವರು ಮಕ್ಕಳು ಸಮಾಜದಲ್ಲಿ ಪ್ರತಿಷ್ಟಿತ ನಾಗರೀಕರಾಗುವುದೇ ಸಿಪಿಐ ಧ್ಯೇಯವಾಗಿದೆ ಎಂದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿವೇಶನ, ವಸತಿರಹಿತರಿಗೆ ಶಾಶ್ವತ ಸೂರು ನಿರ್ಮಿಸಲು ಸಿಪಿಐನ ಬಹು ದೊಡ್ಡ ಪಾತ್ರವಿದ್ದು ಯಾವುದೇ ರಾಜಕೀಯ ಜನಪ್ರತಿನಿಧಿಗಳ ಕೊಡುಗೆಯಿಲ್ಲ. ಅಲ್ಲದೇ ಜಿಲ್ಲೆಯ ಯಾವು ದೇ ಭಾಗದಲ್ಲಿ ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾದವರಿಗೆ ಸಿಪಿಐ ಕೆಂಬಾವುಟ ಸಹಕಾರ ನೀಡಿ ಕೈಜೋಡಿಸಿದ ರೆ ಬಲಾಡ್ಯ ಭೂಮಾಲೀಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ಸಂಘಟನೆ ಶಕ್ತಿ ಪಡೆದುಕೊ ಂಡಿದೆ ಎಂದು ಹೇಳಿದರು.

ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಧಾಸುಂದ್ರೇಶ್ ಮಾತನಾಡಿ ಮುಂದಿನ ದಿನಗಳಲ್ಲಿ ಕಾರ್ಮಿ ಕರು, ರೈತರು ಎಚ್ಚೆತ್ತುಕೊಂಡು ಸ್ವಹಕ್ಕುಗಳನ್ನು ಪಡೆದುಕೊಳ್ಳುವ ಶಕ್ತಿ ಬೆಳೆಸಿಕೊಂಡರೆ ಮಾತ್ರ ಸಮಾಜದಲ್ಲಿ ಘನತೆಯಿಂದ ಜೀವಿಸಲು ಸಾಧ್ಯ ಹಾಗೂ ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಗಳಿಗೆ ಕಾರ್ಯಕರ್ತರು ಸಜ್ಜಾಗಿ ದುಡಿವವರನ್ನು ಆಳುವ ವರ್ಗವನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

ಸಮಾವೇಶದ ಅಧ್ಯಕ್ಷತೆಯನ್ನು ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಜಿ.ರಘು, ಕೆಳಗೂರು ರಮೇಶ್, ಸದಸ್ಯ ಎಸ್. ವಿಜಯ್‌ಕುಮಾರ್, ತಾಲ್ಲೂಕು ಸಹ ಕಾರ್ಯದರ್ಶಿ ಕುಮಾರ್, ನಗರ ಕಾರ್ಯದರ್ಶಿ ಜಿ.ರಮೇಶ್ ಇದ್ದರು

Revolutionary change comes not from guns but from struggle.

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...