ಕರಿ ಹೆಂಚಿನ ಮನೆ ಸ್ಥಿತಿ ನೋಡೊದರೆ ಈ ಮನೆಗೆ ಹೋಗುವ ಮನಸ್ಸುಗಳು,ಮನುಷ್ಯರು ಕಡಿಮೆ.
ನಾನು ಸೇರಿದಂತೆ ಈ ಮನೆಗೆ ಹಲವರು ಹೋಗುತ್ತಿದ್ದಾರೆ ಎಂದರೆ ಕಾರ್ತೀಕ್ ನ ಸಾಧನೆ. ತರೀಕೆರೆಯಲ್ಲಿ ಗುರ್ತಿಸದ ಮನೆಗೆ ಗುರ್ತಿಸಿ ಹೋಗಿ ಅಭಿನಂದಿಸುತ್ತಿದ್ದಾರೆ ಎಂದರೆ ಶಿಕ್ಷಣಕ್ಕೆ ಶಕ್ತಿ ಇದೆ ಎಂದು ಓದುವ ಪರಮ ಗುರಿ ಇಟ್ಟುಕೊಂಡು ಬಡವನು ಕೂಡ ಕಡಿಮೆ ಇಲ್ಲ ಎಂದು ಸಾಧನೆ ಮಾಡಿದಾಗ ಸಾಧ್ಯ.
ಕಾರ್ತೀಕ್ ನಿನ್ನ ಕ್ರಾಂತಿಯ ಕಿರಣ ಪ್ರಜ್ವಲಿಸುತ್ತಿರುವುದು ಇತರರಿಗೆ ಮಾದರಿ ಮಾರ್ಗ ಎನ್ನಿಸುತ್ತದೆ.
ಇಂದು ಶಾಸಕ ಎನ್ನುವದು ದೊಡ್ಡ ಹುದ್ದೆ ಎಂದು ಹೆಂಡತಿ ಮಕ್ಕಳನ್ನು ಪೋಷಿಸುವ ಕಾಲಘಟ್ಟದಲ್ಲಿ ಕರಿ ಹೆಂಚಿನ ಮನೆಯಲ್ಲಿ ದೇಶ ಸೇವೆಗೆ ಸೌಭಾಗ್ಯ ತಂದಿರುವ ಕಾರ್ತೀಕ್ ನ ಮುಂದೆ ಶಾಸಕ,ಮಂತ್ರಿ, ಮುಖ್ಯ ಮಂತ್ರಿ ಶೂನ್ಯ.
Karthik brought light to the curry-tiled house
Leave a comment