Home namma chikmagalur ಬಾನು ಮುಷ್ತಾಕ್‌ಗೆ ಬೂಕರ್‌ಪ್ರಶಸ್ತಿ-ಟೀಕಾಕಾರರಿಗೆ ನೀಡಿರುವ ಕಪಾಳ ಮೋಕ್ಷ
namma chikmagalurchikamagalurHomeLatest News

ಬಾನು ಮುಷ್ತಾಕ್‌ಗೆ ಬೂಕರ್‌ಪ್ರಶಸ್ತಿ-ಟೀಕಾಕಾರರಿಗೆ ನೀಡಿರುವ ಕಪಾಳ ಮೋಕ್ಷ

Share
Share

ಚಿಕ್ಕಮಗಳೂರು: ಮಹಿಳಾ ಸಾಹಿತ್ಯ ಎಂದರೆ ಹೆಣ್ಣಿನ ಸೌಂದರ್ಯದ ವರ್ಣನೆ ಎಂದು ಹಿಗಳಿಯುವ ಸಾಮಾಜಿಕ ಜಾಲತಾಣದ ಮಂದಿಗೆ ಭಾನು ಮುಸ್ತಾಕ್ ಮತ್ತು ದೀಪಾ ಬಾಸ್ತಿಯವರ ಕೃತಿಗಳಿಗೆ ಅಂತರಾಷ್ಟ್ರೀಯ ಬೂಕರ್‌ಪ್ರಶಸ್ತಿ ಸಂದಿರುವುದು ಟೀಕಾಕಾರರಿಗೆ ನೀಡಿರುವ ಕಪಾಳ ಮೋಕ್ಷ ಎಂದು ಅಂಕಣಗಾರ್ತಿ, ದೀಪ ಹಿರೇಗುತ್ತಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಪ್ರಥಮ ಸಮ್ಮೇಳದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕವಿಗೋಷ್ಠಿ ಒಂದರಲ್ಲಿ ರಚಿಸಿದ ಕವನವನ್ನು ವಿಮರ್ಷಿಸಿದ ಸಾಮಾಜಿಕ ಜಾಲತಾಣದ ಮಂದಿ ಟೀಕೆಗಳ ಮಹಾಪೂರವನ್ನೇ ಹರಿಸಿದ್ದರು. ಬಹು ಹಿಂದಿನಿಂದಲೂ ಮಹಿಳೆಯರ ಪ್ರಗತಿಯನ್ನು ತಡೆಯುವ ಪಟ್ಟ ಭದ್ರ ಹಿತಾಸಕ್ತಿಗಳ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಮಹಿಳೆಯರು ಅವರ ಟೀಕೆಗಳಿಗೆ ಮೆಟ್ಟಿ ನಿಲ್ಲುವಂತಾಗಬೇಕು ಎಂದು ಹೇಳಿದರು.

ಸಂಕಷ್ಟದಲ್ಲಿರುವ ಮಹಿಳೆಗೆ ಮಹಿಳೆಯೇ ಬೆಂಬಲಿಸುವ ಮೂಲಕ ಪರಸ್ಪರ ಹೆಣ್ಣುಮಕ್ಕಳು ಸಹಕರಿಸಿಕೊಂಡದ್ದೇ ಆದರೆ ಜಗತ್ತಿನಲ್ಲಿ ಹೆಣ್ಣು ಕಣ್ಣೀರು ಹಾಕುವ ಪರಿಸ್ಥಿತಿಯೇ ನಿರ್ಮಾಣವಾಗುವುದಿಲ್ಲ ಈ ನಿಟ್ಟಿನಲ್ಲಿ ಮಹಿಳೆಯರು ಜಾಗೃತರಾಗಿ ಬದುಕಬೇಕೆಂದು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಸಾಹಿತಿಗಳು ಎನಿಸಿಕೊಂಡವರು ಸಂವಿಧಾನವನ್ನು ಟೀಕಿಸುವುದನ್ನು ಕಾಯಕವನ್ನಾಗಿಸಿ ಕೊಂಡಿದ್ದಾರೆ ಆದರೆ ಮಹಾಭಾರತದ ಕಾಲದಲ್ಲಿ ದ್ರೌಪದಿ ಎಂಬ ಹೆಣ್ಣು ಪಂಥದ ವಸ್ತುವಾಗಿ ಉಪಯೋಗಿಸಲ್ಪಟ್ಟಿದ್ದಳು ಆದರೆ ಅದೇ ಹೆಸರಿನ ಮಹಿಳೆ ದ್ರೌಪದಿ ಮುರ್ಮುರವರಿಗೆ ಸಂವಿಧಾನ ನೀಡಿದ ಬಲದಿಂದ ದೇಶದ ರಾಷ್ಟ್ರಪತಿಯಾಗಿ ರಾರಾಜಿಸುತ್ತಿದ್ದಾರೆ ಇದು ಸಂವಿಧಾನ ಮಹಿಳೆಯರಿಗೆ ನೀಡಿರುವ ಬಲ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಚೌಧರಿ ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಪುರುಷರ ದಬ್ಬಾಳಿಕೆಯ ನಡುವೆಯೂ ಮಹಿಳೆ ತನ್ನ ಆತ್ಮೀಯತೆಯ ಉಳಿವಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾಳೆ. ಹಲವು ಯಶಸ್ವಿಗಳನ್ನು ಕಂಡಿದ್ದಾಳೆ ಅದೇ ನಿಟ್ಟಿನಲ್ಲಿ ಚಿಕ್ಕಮಗಳೂರು ನಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಮಹಿಳೆಯರ ಮೇಲೆ ದೌರ್ಜನ್ಯಗಳಾದಾಗ ರಾಜ್ಯ ಮಹಿಳಾ ಆಯೋಗ ಸದಾ ಮಹಿಳೆಯರ ರಕ್ಷಣೆಗೆ ಸಿದ್ಧವಿದೆ ಸಂಕಷ್ಟಕ್ಕೆ ಒಳಗಾದ ಮಹಿಳೆಯರು೧೧೨ ಸಂಖ್ಯೆಗೆ ಕರೆ ಮಾಡಿ ನೆರವು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಯುವಜನ ಕ್ರೀಡಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮಂಜುಳಾ ಹುಲ್ಲಳ್ಳಿ, ಗ್ರಂಥ ಪಾಲಕಿ ಸತ್ಯವತಿ, ರಂಗ ನಿರ್ದೇಶಕಿ ಪ್ರತಿಭಾ ನಂದಕುಮಾರ್ ರವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇದಿಕೆಯಲ್ಲಿ ಮಕ್ಕಳ ವೈದ್ಯ ಜೆ.ಪಿ ಕೃಷ್ಣೇಗೌಡ ರೇಖಾಹುಲಿಯಪ್ಪ ಗೌಡ,ರೂಪ ನಾಯಕ್ ನಿರ್ಮಲ ಮಂಚೇಗೌಡ, ಸುರೇಶ್ ವಕೀಲ ವೆಂಕಟೇಶ್ ಕೋಶಾಧ್ಯಕ್ಷ ಪ್ರಕಾಶ್ ಉಪಸ್ಥಿತರಿದ್ದರು

Booker Prize for Banu Mushtaq – a slap in the face to critics

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...