Home namma chikmagalur ಬಡತನದ ಮೂಸೆಯಲ್ಲಿ ಕೀರ್ತಿಗಳಿಸಿದ ಲೆಫ್ಟಿನೆಂಟ್ ಕಾರ್ತೀಕ್‌
namma chikmagalurHomeLatest NewsTarikere

ಬಡತನದ ಮೂಸೆಯಲ್ಲಿ ಕೀರ್ತಿಗಳಿಸಿದ ಲೆಫ್ಟಿನೆಂಟ್ ಕಾರ್ತೀಕ್‌

Share
Share

ತರೀಕೆರೆ: ಪ್ರಕೃತಿಯ ಚೆಲುವು, ಗಿರಿ ಶ್ರೇಣಿಯ ಸೊಬಗು,ಗಿರಿಧಾಮಗಳು, ಜಲಪಾತಗಳಿರುವ ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯ ಪ್ರದೇಶದಲ್ಲಿ ಸಾಹಿತ್ಯ, ಜಾನಪದ ಸಾಹಿತ್ಯ, ಕುಸ್ತಿ, ದಸರಾ, ಗಣಪತಿ ಉತ್ಸವ ಅಡಿಕೆ, ವಿಳ್ಯಾದೆಲೆ ತೆಂಗು,ಮಾವು ಶ್ರೀಗಂಧದ ಪ್ರದೇಶದಲ್ಲಿ ಕೇವಲ 23 ನೇ ವಯಸ್ಸಿನಲ್ಲಿ ಸೇನೆಯ ಲೆಫ್ಟಿನೆಂಟ್ ಹುದ್ದೆಯನ್ನು ಗಳಿಸಿರುವ ಟಿ.ಬಿ.ಕಾರ್ತೀಕ್‌ ಸಾಧನೆಯ ಶಿಖರ ಮುಟ್ಟಿರುವ ರೋಚಕ ಸುದ್ದಿ ಮೆಚ್ಚಲೇ ಬೇಕು.

ಕಿತ್ತು ತಿನ್ನುವ ಬಡತನ ಮನೆ,ಮನೆಗೆ ಪತ್ರಿಕೆ ಹಾಕುವ ಕೆಲಸದ ಜೊತೆಗೆ ಅಡಿಕೆ ಬಿಡಿಸುವುದು ಸಮಯ ಸಿಕ್ಕಾಗ ಸಮಾರಂಭದಲ್ಲಿ ಅಡುಗೆ ಬಡಿಸುವುದು ಇಂತಹ ಕಷ್ಟ ಕೋಟಿಯಲ್ಲಿ ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿರುವ ನಮ್ಮ ಹುಡುಗ ದೇಶ ಕಾಯುವ ಲೆಫ್ಟಿನೆಂಟ್ ಎಂತಹ ಸಾಧನೆ.

ಅಂಜಲಿಲ್ಲ,ಅಳಕಲಿಲ್ಲ ಸೇನೆ ಸೇರ ಬೇಕೆಂಬ ಹಟ ಮುಂದಕ್ಕಿಟ್ಟ ಹೆಜ್ಜೆಗಳನ್ನು ಹಿಂದೆ ಇಕ್ಕಲಾರೆ ಎಂದು ಮುನ್ನುಗಿದ ಫಲ ತರೀಕೆರೆಗಷ್ಟೇ ಅಲ್ಲ ರಾಜ್ಯಕ್ಕೂ ಕೀರ್ತಿ ತಂದು ಇತರರಿಗೆ ಮಾದರಿಯಾಗಿದ್ದಾನೆ. ಟಿ.ಬಿ.ಕಾರ್ತೀಕ್‌2024 ರಲ್ಲಿ ನಡೆದ ಯು.ಪಿ.ಎಸ್.ಸಿ ಪರೀಕ್ಷೆಯ ಕಂಬೈಂಡ್ ಡಿಫೆನ್ಸ್‌ ಸರ್ವೀಸಸ್ ( C D S)Combined Defence Service’s ನ 159ನೇ ಬ್ಯಾಚ್ ನಲ್ಲಿ 44 ನೇ ರ್ಯಾಂಕ್ ಗಳಿಸಿ ಅತ್ಯುತ್ತಮ ಸಾಧನೆಯ ಜೊತೆಗೆ ಯಶಸ್ವಿನ ಮಾರ್ಗದಲ್ಲಿ ಹೆಜ್ಜೆಗಳನ್ನು ಹಾಕಿ ಮತ್ತಷ್ಟು ಸಾಧನೆ ಮಾಡಲಿ.

ತರೀಕೆರೆಯ ಬಸಪ್ಪ ಸೌಭಾಗ್ಯ ದಂಪತಿಯ ಪುತ್ರ ಕಾರ್ತೀಕ್‌ ಪ್ರಾಥಮಿಕ ಶಿಕ್ಷಣವನ್ನು ಎನ್.ಇ.ಹೆಚ್.ಪಿ.ಎಸ್ ಶಾಲೆಯಲ್ಲಿ ಕಲಿತು ಎನ್.ಆರ್.ಪುರದ ಮೊರಾರ್ಜಿ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ 97% ಪಡೆದು ಪ್ರೌಢ ಶಿಕ್ಷಣ ಮುಗಿಸಿ ಉಡುಪಿಯ ಎಂ.ಜೆ.ಎಂ ಕಾಲೇಜ್ ನಲ್ಲಿ ಪಿಯುಸಿ 96%ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕೊಡಗಿನ ಪೊನ್ನಂಪೇಟೆ ಕಾಲೇಜ್ ಅಫ್ ಫಾರೆಸ್ಟ್ರಿ ಬಿ ಎಸ್ಸಿ ಫಾರೆಸ್ಟ್ ಪದವಿಯನ್ನೂ ಅತ್ಯಂತ 80% ಡಿಸ್ಟೆಂಕ್ಷನ್ನಲ್ಲಿ ಪದವಿ ಗಳಿಸಿದ ಹೆಗ್ಗಳಿಕೆ ಸಾಮಾನ್ಯ ಸಾಧನೆಯಲ್ಲ.

ಪದವಿ ಕಾಲೇಜ್ ಸೇರಿದಾಗ ಸೇನೆ ಸೇರಬೇಕು ಎಂಬ ಆಸೆ ಇರಲಿಲ್ಲ ಆದರೆ ಎರಡನೇ ವರ್ಷದ ಅವಧಿಯಲ್ಲಿ ಸೇನೆಗೆ ಸೇರ ಬೇಕು ವಿಶಿಷ್ಟ ಸಾಧನೆ ಮಾಡಬೇಕು ಎಂಬ ಹಂಬಲಕ್ಕೆ ಕೇರಳ ಮೂಲದ ಕ್ಯಾಪ್ಟನ್ ಅಕ್ಷಯ್ ಸಲಹೆ, ಸಹಕಾರ, ಮಾರ್ಗದರ್ಶನ ನೆರವಿಗೆ ಬಂತು ಎರಡನೆಯ ಪದವಿ ಓದುತ್ತಲೇ ಸಿ.ಡಿ.ಎಸ್ ಪರೀಕ್ಷೆಗೆ ತಯಾರಿ ನಡೆಸಿ ಹಟಕ್ಕೆ ಬಿದ್ದು ಪ್ರಥಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಕೀರ್ತಿ ಕಾರ್ತೀಕ್‌ ನದು.

ಎಲ್ಲದಕ್ಕೂ ಹಣವೇ ಮುಖ್ಯ ಎಂದು ತಿಳಿದಿದ್ದ ಕಾರ್ತೀಕ್‌ ಇಲ್ಲ ಏನಾದರೂ ಸಾಧಿಸ ಬೇಕು ಎಂಬ ಆಲೋಚನೆ ವಿಭಿನ್ನ ದಾಖಲೆ ಬರೆಯುವಂತಾಯಿತು. ಡೆಹ್ರಾಡೂನ್ ನಲ್ಲಿ ಲೆಫ್ಟಿನೆಂಟ್ ತರಬೇತಿ ಪಡೆಯುತ್ತಿರುವ ಕಾರ್ತೀಕ್‌ ಕರ್ನಲ್ ನಂತರ ಮೇಜರ್ ಜನರಲ್ ಆಗುವವರೆಗೆ ಸಾಧನೆ ಮಾಡುವ ಮಾರ್ಗ ಇದೆ .ಕಾರ್ತೀಕ್‌ ಕೀರ್ತಿ ಪತಾಕೆಯ ಹೆಜ್ಜೆಗಳು ಮತ್ತಷ್ಟು ಇನ್ನಷ್ಟು ಹೆಚ್ಚಾಗಲಿ ಎಂದು ನ್ಯೂಸ್ ಕಿಂಗ್ ಶುಭ ಹಾರೈಸುತ್ತದೆ.

Lieutenant Karthik who rose to fame in the face of poverty

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...