ಮೂಡಿಗೆರೆ: ಗೋಣಿಬೀಡು ಗ್ರಾಮದ ಕಸ್ಕೇಬೈಲ್ ಸಮೀಪ ಭಾನುವಾರ ಸಂಜೆ ಕಾರು ಹಾಗೂ ತರಕಾರಿ ಸಾಗಿಸುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಸುಧಾಕರ್ (35) ಮೃತಪಟ್ಟವರು. ಇವರು, ಗೋಣಿಬೀಡು ಹೋಬಳಿಯ ಚಿನ್ನಿಗಾ ಗ್ರಾ.ಪಂ. ಅಟೆಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಕಸ್ಕೇಬೈಲ್ ಗ್ರಾಮದ ಚರ್ಚ್ ಹಾಲ್ ಬಳಿ ಸುಧಾಕರ್ ರಸ್ತೆ ಬದಿ ಬಸ್ ಗಾಗಿ ಕಾಯುತ್ತಾ ನಿಂತಿದ್ದಾಗ, ರಾಷ್ಟ್ರೀಯ ಹೆದ್ದಾರಿ 73ರಲ್ಲಿ ವೇಗವಾಗಿ ಬಂದ ತರಕಾರಿ ಸಾಗಾಟದ ಲಾರಿಯು ಎದುರಿ ನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದು ಸುಧಾಕರ್ ಮೇಲೆ ಹರಿದಿದೆ. ಇದರಿಂದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಡಿಕ್ಕಿಯ ರಭಸಕ್ಕೆ ಲಾರಿ ಪಲ್ಟಿಯಾಗಿದ್ದು, ಮುಂದಿನ ಚಕ್ರಗಳು ಕಿತ್ತು ಬಂದಿವೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಬಂದ ಗೋಣಿಬೀಡು ಪೊಲೀಸರು ವಾಹನಗಳನ್ನು ತೆರವು ಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಅಪಘಾತದ ಘಟನೆಗೆ ಸಂಬಂಧಿಸಿದಂತೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಧಾಕರ್ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದು, ತಿಂಗಳ ಹಿಂದಷ್ಟೇ ಮನೆಯ ಗೃಹಪ್ರವೇಶ ನಡೆಸಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
Car-lorry collision: Man standing on the side of the road dies
Leave a comment