ತರೀಕೆರೆ: ತರೀಕೆರೆ ಪಟ್ಟಣದ ಹೈವೇ ರಸ್ತೆ ಹಲವು ವರ್ಷಗಳಿಂದ ಕಾಮಗಾರಿ ಕಾಣದೆ ಜನ ಹಿಡಿ ಶಾಪ ಹಾಕುತ್ತಾ ಓಡಾಡುತ್ತಿದ್ದರು.ಈಗ ರಸ್ತೆ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ.ಇದಕ್ಕೆ ಕಾರಣವಾದವರನ್ನು ಮೆಚ್ಚಲೇ ಬೇಕು ನಿಜ .ಹಲವು ವರ್ಷಗಳ ನಂತರ ನಡೆಯುತ್ತಿರುವ ಕಾಮಗಾರಿ ನೋಡಿದರೆ ಮುಂದೆ ಏನು ಕಾದಿದೆಯೋ ಎಂಬ ಚಿಂತೆ ಮಾಡುವಂತೆ ಆಗಿದೆ.
ಎರಡು ತಿಂಗಳಿಂದ ನಡೆಯುತ್ತಿರುವ ಕಾಮಗಾರಿ ಮುಗಿಯುವುದು ಯಾವಾಗ ಎಂಬ ಚಿಂತೆ ಕಾಡುತ್ತಿದೆ.ಸೇತುವೆ ನಿರ್ಮಾಣ ಮಾಡಬೇಕಾಗಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲೂ ಬಗೆದಿರುವುದರಿಂದ ಅಚೆ- ಇಚೆ ಸಂಚರಿಸುವುದು ಕಷ್ಟವಾಗಿದೆ .ಪಟ್ಟಣದ ಒಳಗಿನ ರಸ್ತೆಗಳಿಗೆ ಹೋಗುವುದು ದುಸ್ತರವಾಗಿದೆ ಎಂದು ಜನ ಪೇಚಾಡುತ್ತಿದ್ದಾರೆ.ಅದರಲ್ಲೂ ಸಾವು_ ನೋವು ನೋಡಲು ಹೋಗುವ ಜನರಿಗೆ ಕಡು ಕಷ್ಟ. ಇದರಿಂದ ಕಳೆದ ಎರಡು ತಿಂಗಳಿಂದ ವಿದ್ಯುತ್ ಅಭಾವ ಸೃಷ್ಟಿಯಾಗಿದೆ ಮಳೆ ಬೇರೆ ಬರುತ್ತಿರುವುದರಿಂದ ಕೆಸರಿನಿಂದ ಜನ ಓಡಾಡಲು ತೊಂದರೆ ಆಗಿದೆ.
ಬಸ್ ನಿಲ್ದಾಣ ಅಕ್ಕ_ಪಕ್ಕ ಕಟ್ಟಡಗಳು ಅರ್ಧಕ್ಕೆ ಮುಚ್ಚಿ ಹೋಗುವಂತೆ ಆಗಿದೆ.ವ್ಯಾಪಾರಿಗಳು ಮಾತನಾಡುವುದಿಲ್ಲ ನಿಜ ನಮ್ಮ ಗತಿ ಇಷ್ಟೇ ಎನ್ನುವಂತೆ ಆಗಿದೆ ಎನ್ನುತ್ತಿದ್ದಾರೆ.
ತಾಂತ್ರಿಕವಾಗಿ ರಸ್ತೆಯ ನಿರ್ಮಾಣ ಮಾಡುವುದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ ಎಂದುಇನ್ನೂ ಕೆಲವರು ಹೇಗೋ ರಸ್ತೆ ಕೆಲಸ ಮಾಡಲಿ ಎಂದು ಕೆಲವರು ಹೇಳುತ್ತಾರೆ.
ಗುತ್ತಿಗೆದಾರ ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡರೆ ಸಾಕು ಕೊಡುವುದನ್ನು ಕೊಟ್ಟು ಬಿಡುವುದನ್ನು ಬಿಟ್ಟು ಬಿಲ್ ಕರೆಸಿಕೊಳ್ಳುವ ತವಕದಲ್ಲಿ ಇದ್ದಾನೆ.ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎನ್ನುವಂತೆ ಆಗದೆ ರಸ್ತೆ ನಿರ್ಮಾಣ ಜನರಿಗೆ ಅನುಕೂಲ ಆದರೆ ಅಷ್ಟೇ ಸಾಕು.ಈಗಲೂ ಕಾಲ ಮಿಂಚಿಲ್ಲ ಆಗಿರುವ ತಪ್ಪುಗಳನ್ನು ಸರಿಪಡಿಸಿ ರಸ್ತೆ ಮಾಡಲಿ ಎಂದು ಜನರ ಆಸೆ.
May the Tarikere road work go well.
Leave a comment