ತರೀಕೆರೆ: ಜಯಮ್ಮ ಶ್ರೀ ಮಲ್ಲಯ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಶ್ರೀ ಮತಿ ಜಯಮ್ಮನವರ ಪುಣ್ಯ ಸ್ಮರಣೆ ಕಾರ್ಯಕ್ರಮ ವಿಶಿಷ್ಟ ಮತ್ತು ಅಪರೂಪದಿಂದ ಆಯೋಜಿಸಲಾಗಿತ್ತು.
ತಂದೆ,ತಾಯಿ ಎಂದರೆ ನಿರ್ಲಕ್ಷ್ಯಕ್ಕೆ ಒಳಾಗಾಗುತ್ತಿದ್ದಾರೆ.ಅದರಲ್ಲೂ ವಿದ್ಯಾವಂತರು ಮತ್ತು ಹಣವಂತರು ತಂದೆ ತಾಯಿಯನ್ನು ಮನೆಯಿಂದ ಹೊರಗೆ ತಳ್ಳುವ ಅಥವಾ ವೃದ್ದಾಶ್ರಮಕ್ಕೆ ಸೇರಿಸುವ ಮೂಲಕ ಕನಿಷ್ಠರಾಗುತ್ತಿದ್ದಾರೆ.
ತರೀಕೆರೆ ಮಾಜಿ ಪುರಸಭಾ ಅಧ್ಯಕ್ಷ ಎಂ.ನರೇಂದ್ರ ಕುಟುಂಬದವರು ಜಯಮ್ಮನವರ ಸ್ಮರಣೆಯನ್ನು ಪೌರಸೇವಾ ಸ್ವಚ್ಚತಾ ನೌಕರರು, ಆಸ್ಪತ್ರೆಗಳಲ್ಲಿ ಸ್ವಚ್ಚತೆ ಮಾಡುವ ನೌಕರರು ಮತ್ತು ಬೀದಿಯಲ್ಲಿ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಕಲ್ಯಾಣ ಮಂಟಪದಲ್ಲಿ ಸ್ವಚ್ಚತೆ ಮಾಡುವವರಿಗೆ ಸೊಪ್ಪುಗಳನ್ನು ಮಾರುವ ಮಹಿಳೆಯರಿಗೆ ಬಟ್ಟೆ ಮತ್ತು ಪ್ರೊತ್ಸಾಹ ಧನ ವಿತರಿಸಿದರೆ ಅಂಧಮಕ್ಕಳಿಗೆ ರೇಷನ್ ಮತ್ತು ಬಟ್ಟೆ ವಿತರಿಸಿ ಮಾದರಿಯಾಗಿದ್ದಾರೆ.
ತಂದೆ ತಾಯಿಯ ಮಹತ್ವ ಅರಿಯದೆ ನಿರ್ಲಕ್ಷ್ಯ ಮಾಡಿ ಮನೆಯಿಂದ ಹೊರಗೆ ಹಾಕುವ ರಾಜಕೀಯ ಪುಡಾರಿಗಳ ಜೊತೆಗೆ ಪೋಸ್ಟರ್ ನಲ್ಲಿ ಮಿಂಚುವ ಜನರಿಗೆ ಬರವಿಲ್ಲ.ವೃದ್ಧಾಶ್ರಮಗಳು ನಾಯಿ ಕೊಡೆಗಳಂತೆ ಇರುವಾಗ ಮುದುಕರ ಉಸಬಾರಿ ಏಕೆ ಬೇಕು ಎನ್ನುವವರು ಮುಟ್ಟಿ ನೋಡಿಕೊಳ್ಳುವಂತೆ ತಾಯಿಯ ನೆನಪಿಗಾಗಿ ನೊಂದು ಬೆಂದವರಿಗೆ ಕೈಲಾದಷ್ಟು ನೆರವು ನೀಡಿ ಬೆನ್ನು ತಟ್ಟಿ ಹೊಟ್ಟೆ ತುಂಬಾ ಊಟ ಹಾಕಿದ್ದು ಮಾನವೀಯ ಸಂಬಂಧಗಳನ್ನು ತೆರದಿಟ್ಟಿತು.
ಹಣವಂತರು ವಿದ್ಯಾವಂತ ರು ಇಂತಹ ಕೆಲಸ ಮಾಡಿದರೆ ಸಾರ್ಥಕ ಆದರೆ ಕಾಲ ಕೆಟ್ಟಿದೆ ಎನ್ನವವರ ಮಧ್ಯೆ ಕಾಲ ಕೆಟ್ಟಿಲ್ಲ ಮನುಷ್ಯ ಕೆಟ್ಟದ್ದಾನೆ ಎಂಬುದಕ್ಕೆ ಜಯಮ್ಮನವರ ಸ್ಮರಣ ಕಾರ್ಯಕ್ರಮ ವಿಶಿಷ್ಟವಾಗಿತ್ತು. ಜಯಮ್ಮನವರ ಹೆಸರಿನಲ್ಲೇ “ಜಯ” ವಿದೆ ತುಂಬು ಕುಟುಂಬದ ಹಿರಿಯ ಸೊಸೆ ಬದುಕನ್ನು ಹೇಗೆ ಕಟ್ಟಬೇಕು ಬಂದವರೇಲ್ಲಾ ನನ್ನ ಬಂಧುಗಳು ಎಂದು ಉಪಚರಿಸುತ್ತಿದ್ದ ಮನಸ್ಸು. ಮನೆಗೆ ಯಾರಾದರೂ ಬರಲಿ ನೀರು,ಕಾಫಿ,ಊಟ ಏನಾದರೂ ಮಾಡಲೇ ಬೇಕು ಎಂದು ನಗು ಮುಖದಿಂದ ಹೇಳುತ್ತಿದ್ದರು.
ಮಾತು ಮೃದು ಮನಸ್ಸು ಸ್ವಚ್ಛ ಇಂತಹ ಜಯಮ್ಮ ಜೀವನ ಸಾರ್ಥಕಗೊಳಿಸಲು ಶ್ರಮಿಕರಿಗೆ ಪ್ರೋತ್ಸಾಹ ನೀಡಿದ ಜಾತಿ ಮತ ಬಿಟ್ಟು ಸೇರಿದ್ದ ಜನಸ್ತೋಮ ಸಾಕ್ಷಿಕರಿಸಿತು.ಜಯಮ್ಮನವರಿಗೆ ಒಂದು ಆಸೆ ಇತ್ತು ಮಗ ಮನೆ ಕಟ್ಟಬೇಕು ಎಂದು ಜಯಮ್ಮ ಮಲ್ಲಯ್ಯ ನಿಲಯ ಬೇಗ ನಿರ್ಮಿಸಲಿ ಮತ್ತು ಮತ್ತಷ್ಟು ಆಸಕ್ತರ ನೆರವಿಗೆ ಧೈರ್ಯ ಸ್ಥೈರ್ಯ ಸಿಗಲಿ .
Remembering Jayamma who brought respect to workers
Leave a comment