Home Latest News ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಆಕ್ರೋಶ
Latest NewschikamagalurHomenamma chikmagalur

ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಆಕ್ರೋಶ

Share
Share

ಚಿಕ್ಕಮಗಳೂರು: ನಿಯಮ ಉಲ್ಲಂಘಿಸಿ ಸರ್ವಸದಸ್ಯರ ಸಾಮಾನ್ಯ ಸಭೆಯನ್ನು ಕರೆದಿರುವ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್‌ರವ ರಿಗೆ ನಗರಸಭೆಯ ಆಡಳಿತ ನಡೆಸುವ ಸಾಮಾರ್ಥ್ಯವಿಲ್ಲ .ಅವರಿಗೆ ನಿಯಮಗಳ ಪರಿಜ್ಞಾನವಿಲ್ಲಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಇಂದು ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.

ನಗರಸಬೆ ಮಾಜಿ ಮಾಜಿ ಅಧ್ಯಕ್ಷ ವರಸಿದ್ದಿವೇಣು ಗೋಪಾಲ್ ಮಾತನಾಡಿ ನಿಯಮಾನುಸಾರ ಯಾವುದೇ ಸಾಮಾನ್ಯ ಸಭೆ ಕರೆಯುವುದಿದ್ದರೂ ಎಂಟು ದಿನಗಳ ಮುಂಚಿತವಾಗಿ ಸದಸ್ಯರಿಗೆ ಮಾಹಿತಿ ನೀಡಬೇಕು. ವಿಶೇಷ ಸಭೆ. ತುರ್ತು ಸಭೆಗಳಿಗೆ ಕನಿಷ್ಠ ಮೂರು ದಿನದ ಮೊದಲು ಮಾಹಿತಿ ನೀಡಬೇಕು. ನಗರಸಭೆಯ ನಿಯಮಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿಯಿಲ್ಲಾ. ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಈ ಸಭೆಗೆ ನಾವು ಭಾಗವಹಿಸಬೇಕೆ, ಅಭಿವೃದ್ಧಿಯ ಪ್ರಸ್ತಾವನೆಗಳಿಗೆ ನಾವು ಸಮಿತಿ ಸೂಚಿಸಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು,

ಮುಂದಿನ ದಿನಗಳಲ್ಲಿ ಯಾವುದೇ ಸಭೆ ಕರೆಯದಿದ್ದರೂ ಕರೆಯುವುದಿದ್ದರೂ ಕನಿಷ್ಠ ೮ ದಿನಗಳ ಮೊದಲು, ತುರ್ತು ಸಭೆಗೆ ಕನಿಷ್ಠ ಮೂರು ದಿನಗಳ ಮೊದಲು ಸಭೆ ಕರೆಯುವಂತೆ ನಿರ್ಣಯ ಕೈಗೊಳ್ಳಲು ಸದಸ್ಯ ಲಕ್ಷ್ಮಣ್ ಆಗ್ರಹಿಸಿದ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕಳೆದ ಮೂರು ಸಭೆಗಳಿಂದ ಆಡಳಿತ ಪಕ್ಷದ ಸದಸ್ಯರು ನಿರಂತರವಾಗಿ ಗೈರಾಗುತ್ತಿದ್ದು ಅವರದೇ ಪಕ್ಷದ ಅಧ್ಯಕ್ಷರ ಬಗ್ಗೆ ಅಸಮಾಧಾನವಿದೆಯೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರ್ರೆಸ್‌ನ ಸದಸ್ಯ ಮುನೀರ್ ಮೂದಲಿಸಿದರು.

ಅಧ್ಯಕ್ಷೇ ಸುಜಾತಾ ಶಿವಕುಮಾರ್ ರವರನ್ನು ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ನ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡು ಒಳಪಡಿಸಿದರೂ ತೀವ್ರ ಮುಜುಗರಕ್ಕೆ ಒಳಪಡಿಸಿದರೂ ಸಹ ಬಿಜೆಪಿಯ ಒಬ್ಬನೇ ಒಬ್ಬ ಸದಸ್ಯರು ಸಹ ಅಧ್ಯಕ್ಷರ ಪರವಾಗಿ ಸಮರ್ಥನೆ ಮಾಡಿಕೊಳ್ಳದಿರುವ ಬಗ್ಗೆ ಕಾಂಗ್ರೆಸ್ ನ ಸದಸ್ಯರು ಕುಹಕದ ನಗೆ ಬೀರುತ್ತಿದ್ದದ್ದು ಈ ಸಭೆಯ ವಿಶೇಷ.

ಸಭೆ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರ ಅನುಪಸ್ಥತಿಯನ್ನು ಯನ್ನು ದಂಟರಮಕ್ಕಿ ವಾರ್ಡಿನ ಮಂಜುಳಾ ಶ್ರೀನಿವಾಸ್ ಮತ್ತು ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸಭೆಯನ್ನುಮ ಬಹಿಷ್ಕರಿಸಿ ಹೊರ ನಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆಯು ನಡೆಯಿತು. ಸಭೆಯಿಂದ ಹೊರ ನಡೆದು ಉಪಾಧ್ಯಕ್ಷರ ಕೊಠಡಿಯಲ್ಲಿದ್ದಇಬ್ಬರು ಸದಸ್ಯರನ್ನು ಕಾಂಗ್ರೆಸ್ ಪಕ್ಷದ ಸದಸ್ಯರು ಮನವೊಲಿಸಿ ಸಭೆಗೆ ಕರೆದುಕೊಂಡು ಬರುವ ಮೂಲಕ ಸಭೆಗೆ ಅಗತ್ಯವಿದ್ದ ಸಂಖ್ಯಾಬಲವನ್ನು ಕ್ರೂಢೀಕರಿಸಿದರು.

ಕಾಂಗ್ರೆಸ್ ಪಕ್ಷದ ಪಕ್ಷದ ೧೧ ಮಂದಿ ಸದಸ್ಯರು ಬಿಜೆಪಿಯ ಆರು ಮಂದಿ, ಜೆಡಿಎಸ್ ಗೋಪಿ ಸೇರಿದಂತೆ ಒಟ್ಟು ೧೭ಮಂದಿ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ಆರಂಭವಾಯಿತು. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಮುನೀರ್ ಮಾತನಾಡಿ ನಗರಸಭೆಯ ಎಸ್ ಎಫ್ ಸಿ , ನಗರೋತ್ಥಾನ ಸೇರಿದಂತೆ ಲಕ್ಷಾಂತರ ರೂಪಾಯಿಗಳ ಅನುದಾನಗಳ ಪಡೆದಿರುವ ಬಿಜೆಪಿ ಸದಸ್ಯರು ಗೈರಾಗುವ ಮೂಲಕ ಅಧ್ಯಕ್ಷರನ್ನು ಅವಮಾನಿಸಿದ್ದಾರೆ. ನಮಗೆ ಯಾವುದೇ ಅನುದಾನ ನೀಡದೆ ಇದ್ದರೂ ಸಹ ನಗರದ ಅಭಿವೃದ್ದಿ ದೃಷ್ಟಿಯಿಂದ ಕಾಂಗ್ರೆಸ್ ಸದಸ್ಯರು ನಾವು ಸಭೆಗೆ ಹಾಜರಾಗಿದ್ದೇವೆ. ಈ ತಾರತಮ್ಯ ಧೋರಣೆಯ ನಡುವೆಯೂ ಅಭಿವೃದ್ಧಿ ಕಾಮಗಾರಿಗಳಿಗೆ ನಾವು ಸಮ್ಮತಿ ಸೂಚಿಸಬೇಕೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಧ್ಯೆಕ್ಷೆ ಸುಜಾಶಿವಕುಮಾರ್ ಮಾತನಾಡಿ ಬಿಜೆಪಿಯ ಸದಸ್ಯರು ಮದುವೆ , ಸೇರಿದಂತೆ ಭಾಗವಹಿಸುವುದಾಗಿ ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಆಡಳಿತ ಪಕ್ಷದ ಸದಸ್ಯರ ಅನುಪಸ್ಥಿತಿ ಮತ್ತುವಿರೋಧ ಪಕ್ಷಗಳ ಆಕ್ಷೇಪದ ನಡುವೆ ನಗರದ ವಿವಿಧ ವಾರ್ಡ್‌ಗಳ ವಿವಿಧ ಅನುದಾನಗಳ ಅಡಿಯ ಅಭಿವೃದ್ಧಿ ಕಾಮಗಾರಿಗಳು ಇಂದು ನಡೆದ ನಗರಸಭೆ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದುಕೊಂಡವು.

ನಗರೋತ್ಥಾನ ಕಾಮಗಾರಿ ಆರಂಭಗೊಂಡು ೩ ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವವರೆಗೂ ಅವರಿಗೆ ಬಿಲ್ ಪಾವತಿಸಬಾರದು ಅಥವಾ ಗುತ್ತಿಗೆದಾರರನ್ನುಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸದಸ್ಯ ಲಕ್ಷ್ಮಣ್ ಒತ್ತಾಯಿಸಿದರು. ಈ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಪ್ರಭಾರ ಪೌರಾಯುಕ್ತ , ಇಂಜಿಯರ್ ಲೋಕೇಶ್ ಇದ್ದರು.

Opposition party outrage at special general meeting of the Municipal Council

Share

Leave a comment

Leave a Reply

Your email address will not be published. Required fields are marked *

Don't Miss

ನೀರಿಗಾಗಿ ರೈತರು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಿ

ಕಡೂರು: ಜಿಲ್ಲೆಯ ಪ್ರಮುಖ ಕೆರೆಯಾದ ಅಯ್ಯನಕೆರೆ ತುಂಬಿ ಹರಿಯುವ ನೀರನ್ನು ಕೆರೆಗಳಿಗೆ ಹರಿಸುವುದರಿಂದ ಅಂತರ್ ಜಲ ಹೆಚ್ಚಿಸಿ ಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ರೈತರು ಹೇಳುತ್ತಾರೆ. ಭದ್ರ ಉಪ ಕಣಿವೆ ಯೋಜನೆಯ...

ಮಕ್ಕಳಪ್ರತಿಭೆ ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಕ್ರೀಡಾ ಶಿಕ್ಷಕ

ತರೀಕೆರೆ: ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯಗಳ ಜೊತೆಗೆ ದೈಹಿಕ ಶಿಕ್ಷಣವು ಬಹು ಮುಖ್ಯ. ಮಕ್ಕಳ ಆಸಕ್ತಿ ಗಮನಿಸಿ ಪ್ರೋತ್ಸಾಹ ನೀಡುವುದರ ಜೊತೆಗೆ ತರಭೇತಿ ನೀಡಿದರೆ ತಾಲ್ಲೂಕು, ಜಿಲ್ಲೆ,ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸಲು...

Related Articles

ಅಮೃತಮಹಲ್ ಕಾವಲ್ ಪ್ರದೇಶದ ಒತ್ತುವರಿ ತೆರವಿಗೆ ಸೂಚನೆ

ಚಿಕ್ಕಮಗಳೂರು: ಜಿಲ್ಲೆಯ ಅಮೃತಮಹಲ್ ಕಾವಲ್‌ನ ಒತ್ತುವರಿ ಪ್ರದೇಶದವನ್ನು ಕೂಡಲೇ ತೆರವುಗೊಳಿಸುವಂತೆ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ...

ಫೋಟೋ-ವಿಡಿಯೋಗ್ರಫಿ ಕೆನಾನ್ ಕ್ಯಾಮಾರಗಳು ಶ್ರೇಷ್ಠ

ಚಿಕ್ಕಮಗಳೂರು:  ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ ಕ್ಷೇತ್ರದಲ್ಲಿ ಹೊಸ ಆಯಾಮ ವನ್ನು ಸೃಷ್ಟಿಸುವ ಕೆನಾನ್ ಕ್ಯಾಮರಾಗಳು ಛಾಯಾಗ್ರಾಹಕರ...

ಕೊಳಮಗೆ ಬಳಿಯ ಭದ್ರಾ ನದಿಗೆ ಬಿದ್ದ ಪಿಕ್‌ಅಪ್: ಯುವಕ ಸಾವಿನ ಶಂಕೆ

ಕಳಸ: ಕಳಸ-ಕಳಕೋಡು ರಸ್ತೆಯ ಕೊಳಮಗೆ ಬಳಿ ಭದ್ರಾನದಿಗೆ ಗುರುವಾರ ಮಧ್ಯಾಹ್ನ ಪಿಕ್‌ಅಪ್ ವಾಹನ ಬಿದ್ದಿದ್ದು, ಯುವಕನೊಬ್ಬ...

ರೈತರಿಗೆ ರಸಗೊಬ್ಬರ ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ

ಕೊಪ್ಪ : ರೈತರಿಗೆ ರಸಗೊಬ್ಬರ ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ಚೀಲ ಗೊಬ್ಬರ ಬೇಕು...