Home Latest News ಸಿಡಿಎ ಪೌರಾಯುಕ್ತರನ್ನು ವಜಾಗೊಳಿಸಲು ಭೀಮ್‌ಆರ್ಮಿ ಒತ್ತಾಯ
Latest NewschikamagalurHomenamma chikmagalur

ಸಿಡಿಎ ಪೌರಾಯುಕ್ತರನ್ನು ವಜಾಗೊಳಿಸಲು ಭೀಮ್‌ಆರ್ಮಿ ಒತ್ತಾಯ

Share
Share

ಚಿಕ್ಕಮಗಳೂರು: ನಕಲು ಸಹಿ ಬಳಸಿಕೊಂಡು ದಾಖಲೆ ಸೃಷ್ಟಿಸಿದವರ ವಿರುದ್ಧ ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ತೋರಿರುವ ಸಿಡಿಎ ಪೌರಾಯುಕ್ತರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಭೀಮ್ ಆರ್ಮಿ ಪದಾಧಿಕಾರಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವ ರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಸಿಡಿಎಯಲ್ಲಿ ರಾಮನಹಳ್ಳಿ ಗ್ರಾ ಮದ ಪ್ರದೇಶವನ್ನು ವ್ಯಕ್ತಿಯೊರ್ವರು ವಸತಿ ಉದ್ದೇಶಕ್ಕಾಗಿ ಬಳಸಲು ದಲ್ಲಾಳಿಯೋರ್ವನಿಂದ ಏಕ ನಿವೇ ಶನ ರೂಪುರೇಖ ನಕ್ಷೆ ಅನುಮೋದನೆಗೆ ಕೋರಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು ಎಂದರು.

ದಲ್ಲಾಳಿಗೆ ಸಂಬಂಧಪಟ್ಟ ವ್ಯಕ್ತಿಯಿಂದ ಲಕ್ಷಾಂತರ ಹಣ ಪಡೆದು ಪ್ರಾಧಿಕಾರದ ಆಯುಕ್ತರು ನಕಲಿ ಸಹಿ ಬಳಸಿ, ದಾಖಲೆಯನ್ನು ಮಾಡಿಕೊಟ್ಟಿದ್ದಾರೆ. ದಾಖಲೆಗೆ ಸಂಬಂಧಿಸಿದಂತೆ ಪ್ರಾಧಿಕಾರದಲ್ಲಿ ವಿಚಾರಿಸಿದರೆ ನಕಲಿ ಸಹಿ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ ಎಂದರು.

ಆದರೆ ಈವರೆಗೂ ಪೌರಾಯುಕ್ತರು ತಪ್ಪಿತಸ್ಥರ ಯಾವುದೇ ಪ್ರಕರಣ ದಾಖಲಿಸದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಶೀಘ್ರವೇ ಆಯುಕ್ತರನ್ನು ಅಮಾನತ್ತುಗೊಳಿಸಿ ಪ್ರಕರಣವನ್ನು ಸೂಕ್ತ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲ್ಲೂಕು ಅಧ್ಯಕ್ಷ ಧರ್ಮೇಶ್, ರೈತ ವಿಭಾಗದ ಜಿಲ್ಲಾಧ್ಯಕ್ಷ ರಾಜು, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಮುಖಂಡರುಗಳಾದ ರುದ್ರಚಾರಿ ಮತ್ತಿತರರು ಹಾಜರಿದ್ದರು.

Bhim Army demands dismissal of CDA civic commissioner

Share

Leave a comment

Leave a Reply

Your email address will not be published. Required fields are marked *

Don't Miss

ಮೂಡಿಗೆರೆ ತಾಲ್ಲೂಕಿನಾದ್ಯಂತ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ಇಡೀ ದಿನ‌ ಬಿಡುವಿಲ್ಲದೇ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ತಾಲ್ಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ಮಂಜುನಾಥ್ ಹಾಗೂ ಗಿರೀಶ್ ಅವರಿಗೆ ಸೇರಿದ ಹಳೆಯ ಕಟ್ಟಡವೊಂದು ಕುಸಿದಿದ್ದು, ಅಪಾರ ಪ್ರಮಾಣದ...

40 ಸಾವಿರ ಮೌಲ್ಯದ 400 ಮೀಟರ್ ಪೈಪ್‌  ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ 9ನೇ ಮೈಲಿಕಲ್ಲು ಸಮೀಪದಲ್ಲಿ ಪೈಪ್‌ಲೈನ್ ಕಾಮಗಾರಿ ಜಾಗದಲ್ಲಿದ್ದ ₹ 40ಸಾವಿರ ಮೌಲ್ಯದ 400 ಮೀಟರ್ ಪೈಪ್‌  ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಸಿಂಗಟಗೆರೆ ಪೊಲೀಸರು ಬಂಧಿಸಿ,...

Related Articles

ವೇದಾನದಿಯಿಂದ ಕೆರೆ ತುಂಬಿಸುವ ಯೋಜನೆ ಸ್ಥಗಿತಗೊಳಿಸಬೇಕು

ಚಿಕ್ಕಮಗಳೂರು:  ವೇದಾ ನದಿಯ ಅಗ್ರಹಾರ ಬಳಿ ಇರುವ ಚೆಕ್‌ಡ್ಯಾಂನಿಂದ ಹುಲಿಕೆರೆ, ಬೆರಟಿಕೆರೆ, ನಾಗೇನಹಳ್ಳಿಯ ಕೆರೆಗಳಿಗೆ ನೀರೊದಗಿಸುವುದನ್ನು...

ನಿಷೇಧಿತ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್-103 ಪ್ರವಾಸಿಗರು ಪೊಲೀಸರು ವಶಕ್ಕೆ

ಚಿಕ್ಕಮಗಳೂರು: ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶ ಬಿದಿರುತಳದಲ್ಲಿ ಅನುಮತಿ ಇಲ್ಲದೆ ಟ್ರಕ್ಕಿಂಗ್ ನಡೆಸುತ್ತಿದ್ದ ೧೦೩...

ಕೇಂದ್ರ ಗುಪ್ತಚರ ಇಲಾಖೆ ಪೇದೆ ಆತ್ಮಹತ್ಯೆ

ಚಿಕ್ಕಮಗಳೂರು: ಅನಾರೋಗ್ಯದ ಸಮಸ್ಯೆ ಹಿನ್ನೆಲೆ ಗುಪ್ತಚರ ಇಲಾಖೆಯ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ...

ದೇಶ ಸುಭದ್ರಗೊಳಿಸಲು ಯುವಕರು ಯೋಧರಾಗಿ

ಚಿಕ್ಕಮಗಳೂರು:  ಭವ್ಯ ಭಾರತದ ಕನಸನ್ನು ಹೊತ್ತಿರುವ ಯುವಕರು ವಯಸ್ಸಿನಲ್ಲಿ ವ್ಯಸ ನಗಳ ಚಟಕ್ಕೆ ಬಲಿಯಾಗದೇ, ದೇಶವನ್ನು...