ಅಜ್ಜಂಪುರ: ತಾಲ್ಲೂಕಿನ ಶಿವನಿ ಗ್ರಾಮದ ಮೆಸ್ಕಾಂ ಪ್ರಭಾರ ಶಾಖಾಧಿಕಾರಿ ಎಸ್.ಎಂ. ಕುಮಾರ್, ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಸೋಮವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಗುತ್ತಿಗೆದಾರ ಆನಂದ್ ಅವರಿಂದ ಪಟ್ಟಣದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಕುಮಾರ್ ₹20 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ನೇತೃತ್ವದ ತಂಡವು ದಾಳಿ ನಡೆಸಿ, ವಶಕ್ಕೆ ಪಡೆದರು.
Shivani village MESCOM branch officer caught in Lokayukta trap
Leave a comment