ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಕಾಡನೆಗಳ ಉಪಟಳ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ ನರಸಿಂಹರಾಜಪುರ ತಾಲೂಕಿನ ಅರಂಬಳ್ಳಿ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಬಿಂದಾಸ್ ಆಗಿ ಕಾಡಾನೆಯೊಂದು ಓಡಾಡಿದೆ. ಆನೆಯನ್ನು ಕಂಡು ವಾಹನ ಸವಾರರು ಕೆಲಕಾಲ ಆತಂಕದಲ್ಲಿದ್ದರು, ಆನೆ ರಸ್ತೆ ಬಿಟ್ಟು ಕೆಳಗಿಳಿದ ನಂತರ ಸವಾರರು ಮುಂದೆ ಸಾಗಿದ್ದಾರೆ.
ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಇತ್ತೀಚಿಗೆ ಎನ್ಆರ್.ಪುರ ತಾಲೂಕ್ ನಲ್ಲಿ ಆನೆಯೊಂದು ಇಬ್ಬರನ್ನು ಬಲಿ ಪಡೆದುಕೊಂಡಿತ್ತು ಹೀಗಾಗಿ ತಾಲೂಕಿನಲ್ಲಿ ಬೀಡು ಬಿಟ್ಟಿರುವ ಬೇರೆ ಆನೆಗಳನ್ನು ತಕ್ಷಣ ಸ್ಥಳಾಂತರ ಮಾಡುವಂತೆ ಜನರು ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡಿದ್ದರು ಇದುವರೆಗೆ ಆನೆಗಳನ್ನು ಕಾಡಿಗಟ್ಟಲು ಇಲಾಖೆ ತಲೆ ಕೆಡಿಸಿಕೊಂಡಿಲ್ಲ ಎಂದು ಇಲ್ಲಿನ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Leave a comment