ಚಿಕ್ಕಮಗಳೂರು : ಹೊಟ್ಟೆ ನೋವು ತಾಳಲಾರದೆ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾದ ಘಟನೆ ತರೀಕೆರೆ ತಾಲ್ಲೂಕಿನ ಲಿಂಗದಳ್ಳಿ ಸಮೀಪದ ಗುಳ್ಳದಮನೆ ಗ್ರಾಮದಲ್ಲಿ ನಡೆದಿದೆ. ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಯುವತಿ ನೇಣಿಗೆ ಶರಣಾಗಿದ್ದಾಳೆ.
ತರೀಕೆರೆ ತಾಲೂಕಿನ ಗುಳ್ಳದಮನೆ ಗ್ರಾಮದ ಬಿಂದು (21) ಮೃತ ದುರ್ದೈವಿಯಾಗಿದ್ದು, ಕಳೆದ ನವೆಂಬರ್ 24 ರಂದು ಮದುವೆಯಾಗಿದ್ದು 1 ತಿಂಗಳು 3 ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ವಿಪರೀತ ಹೊಟ್ಟೆನೋವು ತಾಳಲಾರದೆ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾಳೆ. 3 ದಿನದ ಹಿಂದೆ ಪೂಜೆಗೆಂದು ಗಂಡನ ಜೊತೆ ತವರು ಮನೆಗೆ ಬಂದಿದ್ದಳು
ಗುಳ್ಳದಮನೆ ಗ್ರಾಮದಲ್ಲಿ ಕಳೆದ 3 ದಿನದಿಂದ ದೇವಸ್ಥಾನ ಹಾಗೂ ಮನೆಯ ಪೂಜೆಗಳಲ್ಲಿ ಭಾಗಿಯಾಗಿ ನಿನ್ನೆ ತೀವ್ರ ಹೊಟ್ಟೆನೋವಿನಿಂದ ಸ್ನಾನಗೃಹದಲ್ಲೇ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ
ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಮೃತದೇಹ ಪರಿಶೀಲನೆ ನಡೆಸಿದ್ದಾರೆಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತರೀಕೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ಬಿಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Leave a comment