ಚಿಕ್ಕಮಗಳೂರು: ಆಂಬುಲೆನ್ಸ್ ನಲ್ಲಿ ಕೋಟ್ಯಂತರ ಮೌಲ್ಯದ ತಾಮ್ರ ಸಾಗಿಸುತ್ತಿದ್ದ ಖತರ್ನಾಕ್ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಗುಜುರಿ ಅಂಗಡಿಗಳಿಂದ ಬೆಂಗಳೂರು ಸೇರಿದಂತೆ ಬೇರೆ ಕಡೆಗಳಿಗೆ ಅಕ್ರಮವಾಗಿ ರಾಶಿ ರಾಶಿ ತಾಮ್ರವನ್ನು ಕೊಂಡೊಯ್ದು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಖದೀಮ ಜುನೇದ್ ಹಾಗೂ ಹೇಮಂತ್ ಸೇರಿದಂತೆ ಮೂವರನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಆಂಬುಲೆನ್ಸ್ ವಶಪಡಿಸಿಕೊಳ್ಳಲಾಗಿದ್ದು, ಕೋಟ್ಯಂತರ ಮೌಲ್ಯದ ತಾಮ್ರವನ್ನು ವಶಕ್ಕೆ ಕಳೆದ ಡಿಸೆಂಬರ್ 13ರಂದು ನಡೆದ ದತ್ತ ಜಯಂತಿ ಶೋಭಾ ಯಾತ್ರೆಯ ವೇಳೆ ರೋಗಿ ಇಲ್ಲದೆ ಸಾವಿರಾರು ಜನರ ನಡುವೆ ಸೈರನ್ ಬಳಸಿ ಸಾಗಿದ ಅಂಬುಲೆನ್ಸ್ ವಿಡಿಯೋ ವೈರಲ್ ಆಗಿತ್ತು. ಅದೇ ಆಂಬುಲೆನ್ಸ್ ನಲ್ಲಿ ಇದೀಗ ತಾಮ್ರ ಸಾಗಾಟ ಪ್ರಕರಣ ಬೆಳಕಿಗೆ ಬಂದಿದ್ದು, ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.
ಈ ನಡುವೆ ಪೊಲೀಸರ ಮೇಲೆ ಗುಮಾನಿ ವ್ಯಕ್ತವಾಗಿದ್ದು, ಕಾಪರ್ ಸಾಗಾಣಿ ದಂಧೆಯಲ್ಲಿ ಭಾಗಿಯಾಗಿರುವ ಶಂಕೆಯೂ ವ್ಯಕ್ತವಾಗಿದೆ. ಈ ಕುರಿತು ಠಾಣೆಯ ತುಂಬಾ ಗುಸು ಗುಸು ಚರ್ಚೆಗಳು ನಡೆದಿದ್ದು, ಯಾರು ಈ ಅಕ್ರಮದಲ್ಲಿ ಯಾರು ಕೈಜೋಡಿಸಿದ್ದಾರೆ ಅವರ ವಿರುದ್ಧ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಕ್ರಮ ಕೈಗೊಳ್ಳುವರೇ..?. ಕಾದು ನೋಡಬೇಕಿದೆ….
Leave a comment