ಚಿಕ್ಕಮಗಳೂರು : ವಯನಾಡ್ ಸಂತ್ರಸ್ತರಿಗೆ ಮನೆ ಕಟ್ಟಿಸಿ ಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ರಾಜಕೀಯ ಗುಲಾಮಗಿರಿಯ ಸಂಕೇತ ಎಂದು ಮಾಜಿ ಸಚಿವ ಸಿ.ಟಿ. ರವಿ ಸಿಎಂ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇಗುಲದ ಬಳಿ ದತ್ತಜಯಂತಿಯ ಮೊದಲ ದಿನದ ಅನುಸೂಯ ಜಯಂತಿ ಕಾರ್ಯಕ್ರಮದ ಬಳಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇರಳದ ವಯನಾಡಿನಲ್ಲಿ 100 ಮನೆ ಕಟ್ಟಿಸಿ ಕೊಡುತ್ತವೆ ಎಂದು ಪತ್ರ ಬರೆದಿರುವುದಕ್ಕೆಕಿಡಿಕಾರಿದ್ದು,
ಇದು ರಾಜಕೀಯ ಗುಲಾಮಗಿರಿಯ ಸಂಕೇತ ಎಂದು ಮಾತಿನಲ್ಲಿ ತಿವಿದಿದ್ದಾರೆ. ಇಡೀ ಅಖಂಡ ಭಾರತ ಒಂದು. ಇಡೀ ವಿಶ್ವವೇ ಒಂದು ಮನೆ ಎಂಬ ಉದಾತ್ತ ಮನೋಭಾವನೆ ವಾರಸ್ಥಾರರು ನಾವು. ಅಕ್ಕಪಕ್ಕದವರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಪ್ರತಿನಿಧಿಸುವ ಕ್ಷೇತ್ರ ಎಂದು ಜಿಲ್ಲೆಗೆ ಮಾತ್ರ ಈ ರೀತಿ ಹೇಳುವುದು ರಾಜಕೀಯ ಗುಲಾಮಗಿರಿಯ ಸಂಕೇತ ಹಾಗೂ ಪ್ರತಿಕ ಎಂದಿದ್ದಾರೆ. ಇಲ್ಲಿಯ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಇಲ್ಲಿಯ ಸಂತ್ರಸ್ತರು ಬೀದಿಯಲ್ಲಿ ಇದ್ದಾರೆ. ಇಲ್ಲಿಯವರನ್ನು ಬಿಟ್ಟು ಅಲ್ಲಿಯವರಿಗೆ ಸಹಾಯ ಮಾಡುವುದು ರಾಜಕೀಯದ ಗುಲಾಮಗಿರಿ ಎಂದಿದ್ದಾರೆ. ಕನ್ನಡಿಗರ ಕಷ್ಟಕ್ಕೆ ಸ್ಪಂದಿಸದೆ ಕನ್ನಡಿಗರ ತೆರಿಗೆ ಹಣವನ್ನು ಅಲ್ಲಿ ವಿನಿಯೋಗಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿ, ರಾಜ್ಯದ ಜನರ ಸಂಕಷ್ಟಗಳನ್ನ ಕಡೆಗಣಿಸಿ ಖರ್ಚು ಮಾಡುವುದು ಸೂಕ್ತವಲ್ಲದ ನಡವಳಿಕೆ ಎಂದಿದ್ದಾರೆ.
Leave a comment