ಚಿಕ್ಕಮಗಳೂರು : ವಕ್ಫ್ ಬೋರ್ಡ್ ಆಸ್ತಿ ಸಂಪೂರ್ಣ ಸರ್ಕಾರದ್ದಾಗಿದ್ದು, ಈ ಬಗ್ಗೆ ಕೆಲವರು ಕೆಸರೆರಚಾಟದಲ್ಲಿ ತೊಡಗಿದ್ದಾರೆ ಎಂದು ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು 1998 ರಲ್ಲೇ ಸುಪ್ರೀಂ ಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿ ವಕ್ಫ್ ಆಸ್ತಿ ಸರ್ಕಾರದ್ದು ಎಂಬ ಉಲ್ಲೇಖವಿದೆ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಈ ಬಗ್ಗೆ ಕೂಲಂಕುಶ ಚರ್ಚಿಸಿ ತಿದ್ದುಪಡಿ ತಂದು ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.
ಕೆಲವರು ಮುಖವಾಡ ಧರಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ವಕ್ಫ್ ಯಾವುದೇ ಮುಸ್ಲಿಮರ ಆಸ್ತಿಯಲ್ಲ, ವಕ್ಫ್ ಹಾಗೂ ಮುಜರಾಯಿಗೆ ಇಲಾಖೆಗಳಿಗೆ ಸರ್ಕಾರಗಳು ಒಬ್ಬ ಸಚಿವರನ್ನು ನೇಮಿಸಿಲಾಗಿರುತ್ತದೆ, ಯಾವುದೇ ಮಂತ್ರಿಯನ್ನು ಖಾಸಗಿ ಆಸ್ತಿ ಕಾಯಲು ನೇಮಿಸಿರುವುದಿಲ್ಲ. ಕಳೆದ 2020ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 300ಕ್ಕೂ ಹೆಚ್ಚು ನೋಟಿಸ್ ಗಳನ್ನು ವಕ್ಫ್ ಮುಖಾಂತರ ಆಗಿನ ಸಚಿವೆ ಶಶಿಕಲಾ ಜೊಲ್ಲೆ ಆದೇಶದಂತೆ ನೋಟಿಸ್ ಹೊರಡಿಸಲಾಗಿತ್ತು.
ಆದರೆ ಇಂದು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿರುವವರು ಕೆಸರೆರಚಾಟವನ್ನು ನಿಲ್ಲಿಸಬೇಕು ಎಂದು ಎಂಪಿ ಕುಮಾರಸ್ವಾಮಿ ಒತ್ತಾಯಿಸಿದರು.
ಇದೆ ವೇಳೆ ಸಿಟಿ ರವಿ ವಿರುದ್ಧ ಕೂಡ ಎಂ.ಪಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ರವಿ ಕೆಲಸವೇ ಇಂತಹ ವಿಷಯಗಳಲ್ಲಿ ರಾಜಕೀಯ ಮಾಡುವುದು, ದತ್ತಪೀಠ ವಕ್ಫ್ ಆಸ್ತಿ ಎಂದು ಯಾರು ಹೇಳಿಲ್ಲ, ಭೂ ಕಾಯ್ದೆ ಅಥವಾ ಯಾವುದೇ ಇನಾಂ ಭೂಮಿ ಇದ್ದರೂ ಸರ್ಕಾರ ವಶಪಡಿಸಿಕೊಳ್ಳಬೇಕು. ಬೇರೆ ವಿಷಯಗಳಲ್ಲಿ ರಾಜಕೀಯ ಮಾಡಲು ರವಿಗೆ ಬರುವುದಿಲ್ಲ ಎಂದು ಟೀಕಿಸಿದರು. ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಬಿಲ್ ಪಾಸ್ ಮಾಡಿದರು ಅಂತಿಮವಾಗಿ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು.
ಇದೀಗ ಹಿಂದೂ ಮುಸ್ಲಿಂ ಎಂದು ಅನವಶ್ಯಕವಾಗಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಷ್ಟೋ ಜನರಿಗೆ ವಾಸ್ತವವೇ ಗೊತ್ತಿಲ್ಲ. ಯಾರು ಏಕ ಪಕ್ಷಿಯವಾಗಿ ಈ ಬಗ್ಗೆ ಮಾತನಾಡಬಾರದು ಎಂದರು
Leave a comment