ಚಿಕ್ಕಮಗಳೂರು :
ಅಜ್ಜ ಅಜ್ಜಿ ಡಬರ್ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಸೈಕೊ ಕ್ಯಾಬ್ ಡ್ರೈವರ್ ನನ್ನು ಘಟನೆ ನಡೆದ 48 ಗಂಟೆಗಳ ಒಳಗೆ ಮಲ್ಲಂದೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ
ಅಜ್ಜಿ ರೇಪ್ ಮಾಡಲು ಹೋಗಿ ಅಜ್ಜ ಅಜ್ಜಿ ಇಬ್ಬರನ್ನೂ ಮುಗಿಸಿದ ನಿಶಾಂತ್ ಕೊಲೆಗೆ ಕಾರಣವಾದ ರೋಚಕತೆಯನ್ನು ಪೊಲೀಸರು ಕೊನೆಗೂ ಬಾಯಿ ಬಿಡಿಸಿದ್ದಾರೆ.
ಮಾರಕ ಕಾಯಿಲೆಗೆ ತುತ್ತಾಗಿದ್ದ ಎಂದು ಸ್ನೇಹಿತರು ಹೇಳಿದ್ದರಿಂದ ಅದಕ್ಕೆ ಅಜ್ಜಿಯನ್ನು ರೇಪ್ ಮಾಡಲು ಮುಂದಾಗಿದ್ದ ಇವನ ಸೈಕೊ ಟ್ರೀಟ್ ಮೆಂಟ್ ಗೆ ಪೊಲೀಸರಿಗೆ ಬೆಚ್ಚಿ ಬಿದ್ದಿದ್ದಾರೆ.
ರಾತ್ರೋರಾತ್ರಿ ಹತ್ಯೆ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಪಾಪಿಯನ್ನು ಮಲ್ಲಂದೂರು ಪಿಎಸ್ಐ ಗುರು ಸಜ್ಜನ್ ನೇತೃತ್ವದ ತಂಡ ಬಂಧಿಸಿ ಕರೆ ತಂದಿತ್ತು. ಆದರೆ ಕೊಲೆಗೆ ಕಾರಣ ಮಾತ್ರ ಬೇರೆಯೇ ಹೇಳುತ್ತಿದ್ದ ಕಿರಾತಕನಿಗೆ ಆಲ್ದೂರು ವೃತ್ತ ನಿರೀಕ್ಷಕರಾದ ಪಿ.ಪಿ ಸೋಮೇಗೌಡರು ತಮ್ಮದೇ ಸ್ಟೈಲ್ ನಲ್ಲಿ ಬಾಯಿ ಬಿಡಿಸಿದ್ದಾರೆ. ಮೊದಲು ಹೇಳಿದ್ದು ಸುಳ್ಳು ಎಂದು ನಂತರ ಸತ್ಯ ಹೇಳಿದ್ದಾನೆ.
ಕೊಲೆ ಮಾಡಿ ಬೆಂಗಳೂರಿನ ಗಲ್ಲಿ ಯಲ್ಲಿ ಮಲಗಿದ್ದ ಆರೋಪಿಯನ್ನು ಸಿಬ್ಬಂದಿಗಳಾದ ದೇವರಾಜ್, ಅಶೋಕ್, ಭರತ್ ಭೂಷಣ್, ಅಭಿಷೇಕ್, ಶರತ್, ಚಿದಾನಂದ, ನವೀನ್ ಕುಮಾರ್, ಮಂಜುನಾಥ್, ಹರ್ಷ, ಶಾಂತರಾಜು, ಚಾಲಕರಾದ ರಾಜಯ್ಯ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಬ್ಬಾನಿ ಬಂಧನಕ್ಕೆ ಸಹಕರಿಸಿದ್ದಾರೆ. ಕೃತ್ಯ ನಡೆದ ನಂತರ ಪರಾರಿಯಾಗಲು ಬಳಸಿದ ಕೆಎ-02 ಕೆಪಿ- 4270 ಎನ್ ಟಾರ್ಕ್ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡು, ಆರೋಪಿಯು ಬಸಪ್ಪ ಹಾಗೂ ಲಲಿತಮ್ಮ ರವರನ್ನು ಕೊಲೆ ಮಾಡಲು ಬಳಸಿದ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಕೃತ್ಯ ನಡೆದ ಕೇವಲ 48 ಗಂಟೆ ಒಳಗಾಗಿ ಆರೋಪಿಯನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ. ಪ್ರಕರಣದಲ್ಲಿ ಆರೋಪಿಯನ್ನು ಯಶಸ್ವಿಯಾಗಿ ಕೃತ್ಯ ನಡೆದ ಕೇವಲ 48 ಗಂಟೆ ಒಳಗಾಗಿ ದಸ್ತಗಿರಿ ಮಾಡಿ ಕಾನೂನು ಕ್ರಮ ಜರುಗಿಸಲು ಶ್ರಮಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಡಾ. ವಿಕ್ರಂ ಅಮಟೆ ಐಪಿಎಸ್ ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆ ರವರು ಪ್ರಶಂಸಿಸಿ ಶ್ಲಾಘಿಸಿರುತ್ತಾರೆ.
Leave a comment