Home namma chikmagalur ದೇವಿರಮ್ಮ ಬೆಟ್ಟ ಹತ್ತಲು ಇಂದು ಸಂಜೆಯಿಂದಲೇ ಅವಕಾಶ : ಹರಿದು ಬರುತ್ತಿರುವ ಭಕ್ತರ ದಂಡು
namma chikmagalur

ದೇವಿರಮ್ಮ ಬೆಟ್ಟ ಹತ್ತಲು ಇಂದು ಸಂಜೆಯಿಂದಲೇ ಅವಕಾಶ : ಹರಿದು ಬರುತ್ತಿರುವ ಭಕ್ತರ ದಂಡು

Share
Share

ಚಿಕ್ಕಮಗಳೂರು : ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರೋ ಬಿಂಡಿಗ ದೇವಿರಮ್ಮ ದೇವಾಲಯದಲ್ಲಿ ದೀಪಾವಳಿ ಅಂಗವಾಗಿ ಇಂದಿನಿಂದ ಮೂರು ದಿನಗಳ ಕಾಲ ಈ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 3000 ಅಡಿಗಳಷ್ಟು ಎತ್ತರ ಗುಡ್ಡದಲ್ಲಿರೋ ದೇವಿರಮ್ಮ ವರ್ಷಗೊಮ್ಮೆ ಮಾತ್ರ ಜನರಿಗೆ ದರ್ಶನ ನೀಡೋದು. ಮತ್ತೊಂದು ವಿಶೇಷ ಅಂದ್ರೆ 3000 ಅಡಿ ಎತ್ತರವಿರೋ ಈ ಬೆಟ್ಟವನ್ನ ಭಕ್ತಾಧಿಗಳ ಬರಿಗಾಲಲ್ಲೇ ಬೆಟ್ಟವೇರೋದು. ಮೂರು ದಿನಗಳ ಕಾಲ ನಡೆಯೋ ದೇವರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆ ನಡೆಸಲಾಗಿದೆ. ನರಕ ಚತುರ್ದಶಿಯಂದು ದೇವಿರಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನ ದೇವಿಗೆ ಸಲ್ಲಿಸಿ ಬುಧವಾರ (ಇಂದು) ಸಂಜೆ 4 ಗಂಟೆಯಿಂದಲೇ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ನರಕ ಚತುದರ್ಶಿಯಂದು ಕಾಲಿಗೆ ಚಪ್ಪಲಿಯನ್ನು ಹಾಕದೆ ಕಾಡು, ಬೆಟ್ಟ-ಗುಡ್ಡದ ಕಲ್ಲಿನ ಹಾದಿ, ಕಲ್ಲು-ಮುಳ್ಳುಗಳ ನಡುವೆ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗ್ತಾರೆ. ಈ ಜಾತ್ರೆಯಲ್ಲಿ ಪಾಲ್ಗೊಂಡು, ಬೆಟ್ಟವನ್ನೇರಿ ಪೂಜೆ ಮಾಡಿಸಿದ್ರೆ ಭಕ್ತರ ಇಷ್ಟಾರ್ಥ ಸಿದ್ಧಿಸೋದ್ರಿಂದ ಭಕ್ತರು ಜಾತ್ರೆಯಂದು ದೇಹವನ್ನ ದಂಡಿಸೋದ್ರ ಮೂಲಕ ತಮ್ಮ ಕಾರ್ಯ, ಬಯಕೆಯನ್ನ ಸಿದ್ಧಿಸಿಕೊಳ್ತಾರೆ. ಹಾಗಾಗಿ, ಪೊಲೀಸ್ ಇಲಾಖೆ ಯಾವುದೇ ತೊಂದರೆಯಾಗಂತೆ ಸಾವಿರಾರು ಪೊಲೀಸರಿಂದ ಭಕ್ತರು ಹೋಗೋ ಮಾರ್ಗದುದ್ಧಕ್ಕೂ ಬಿಗಿ ಬಂದೋಬಸ್ತ್ ಕಲ್ಪಸಿದೆ.

ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರ ಪೂಜೆ ನಡೆಯೋದು. ಈ ಬೆಟ್ಟಕ್ಕೆ ಯಾವುದೇ ರಸ್ತೆ ಸಂಪರ್ಕವೂ ಇಲ್ಲ. ಇದರಿಂದಾಗಿ ಬೆಟ್ಟಗುಡ್ಡಗಳನ್ನು ಅಲೆದಾಡಿಕೊಂಡೆ ಬರಬೇಕು. ಜೊತೆಗೆ ಬೆಟ್ಟ ಏರುವಾಗ ಯಾವುದೇ ಆಹಾರವನ್ನು ಸ್ವೀಕರಿಸುವಂತಿಲ್ಲ. ಕಾಲಿಗೆ ಚಪ್ಪಲಿಯನ್ನು ಹಾಕುವಂತಿಲ್ಲ. ದೇವರಿಗೆ ಪೂಜೆ ಸಲ್ಲಿಸಿದ ನಂತರ ಈ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ. ರಾಜ್ಯ ಹೊರರಾಜ್ಯಗಳಿಂದ ಆಗಮಿಸೋ ಭಕ್ತಾಧಿಗಳಿಗೆ ಸಕಲ ಸಿದ್ದತೆಯನ್ನ ಜಿಲ್ಲಾಡಳಿತ ಹಾಗೂ ದೇವಾಲಯ ಸಮಿತಿ ವ್ಯವಸ್ಥೆಯನ್ನ ನಿರ್ಮಿಸಿಕೊಂಡಿದ್ದಾರೆ. ಈ ಬಾರಿ ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಬೆಟ್ಟವನ್ನೆರೋ ನಿರೀಕ್ಷೆಯಿ ಇದೆ. ಹಾಗಾಗಿ, ಜಿಲ್ಲಾಡಳಿತ 5 ಆಂಬುಲೆನ್ಸ್‍ಗಳನ್ನ ನೇಮಕ ಮಾಡಿದ್ದು, ಆರೋಗ್ಯ ಸಿಬ್ಬಂದಿಗಳು ಕೂಡ ಇರ್ತಾರೆ. ದಾರಿಯುದ್ಧಕ್ಕೂ ಅಲ್ಲಲ್ಲೇ ಸಂಘ-ಸಂಸ್ಥೆಗಳು ಕೂಡ ಕುಡಿಯೋ ನೀರು, ಜ್ಯೂಸ್ ಸೇರಿದಂತೆ ಭಕ್ತರಿಗೆ ವಿವಿಧ ಸೌಲಭ್ಯ ಒದಗಿಸುತ್ತಾರೆ.

ಒಟ್ಟಾರೆ ದೀಪಾವಳಿಯ ದಿನದಂದು ಆರಂಭಗೊಳ್ಳೋ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೇ ಆರಂಭಗೊಂಡಿದೆ. ಕಾಫಿನಾಡಲ್ಲಿ ನೆಲೆಸಿರುವ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ಅಗಣಿತ ಮಂದಿ ಭಕ್ತರ ಪಾಲಿಗೆ ಬೇಡಿಕೆಯನ್ನೆಲ್ಲಾ ಈಡೇರಿಸೋ ಕರುಣಾಳು ಅಂದ್ರು ತಪ್ಪಲ್ಲ. ಜನರು ತಮ್ಮ ಆಸೆ, ಆಶೋತ್ತರಗಳನ್ನು ಈಡೇರಿಸುವ ದೇವಿಯಾಗಿ ದೇವಿರಮ್ಮನನ್ನು ನಂಬಿ ವರ್ಷಕ್ಕೊಂದು ಭಾರಿ ನಿಷ್ಕಲ್ಮಷ ಮನಸ್ಸಿನಿಂದ ತಮ್ಮ ಕೈಲಾದಷ್ಟು ಮಟ್ಟಿಗೆ ಭಕ್ತಿ ಸಮರ್ಪಿಸಿ ಪಾವನರಾಗ್ತಾರೆ

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಕೇಳೊರೆ ಇಲ್ಲದಂತಾಗಿದೆ ಕಾಂಗ್ರೆಸ್ ಕಾರ್ಯಕರ್ತರ ಗೋಳು

ಚಿಕ್ಕಮಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಸಮೀಪಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಐದು ಜನ ಮುಖಂಡರು ಆಯಾಕಟ್ಟಿನ ನಿಗಮ ಮಂಡಳಿಯ ಗೂಟದ...

ಪದವೀಧರರ ಸಹಕಾರ ಸಂಘದಲ್ಲಿ ಯಾವುದೇ ಅಕ್ರಮ ನಡೆದಿಲ್ಲ : ಲೋಕಪ್ಪಗೌಡ

ಚಿಕ್ಕಮಗಳೂರು : ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿಟಿ ಗೋಪಾಲಗೌಡ ಮಾಡಿರುವ ಆರೋಪಗಳಿಗೆ ಸಂಘದ ಮಾಜಿ ಅಧ್ಯಕ್ಷ ಲೋಕಪ್ಪ ಗೌಡ ಸ್ಪಷ್ಟನೆ ನೀಡಿದ್ದಾರೆ. ಸಂಘದ ನೂತನ ಕಟ್ಟಡ ನಿರ್ಮಾಣ...

Related Articles

ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ

ಚಿಕ್ಕಮಗಳೂರು :ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ* ಸಾಹಿತಿ ಶಿಕ್ಷಕ ಮೇಕನಗದ್ದೆ ಲಕ್ಷ್ಮಣಗೌಡರಿಗೆ ಸಮ್ಮೇಳನದ *ಮೂಡಿಗೆರೆಯಲ್ಲಿ...

ಒಕ್ಕಲಿಗರ ಹೆಮ್ಮೆಯ ಬೆಳ್ಳಿ ಭವನ ಲೋಕಾರ್ಪಣೆಗೆ ಸಿದ್ದ

ಚಿಕ್ಕಮಗಳೂರು : ಜಿಲ್ಲಾ ಒಕ್ಕಲಿಗರ ಸಂಘವು 25 ವರ್ಷಗಳ ಹಿಂದೆ ವಿಜಯಪುರದಲ್ಲಿ ಕಲ್ಯಾಣ ಮಂಟಪ ನಿರ್ಮಾಣ...

ವ್ಯಕ್ತಿ ಓರ್ವ ವ್ಯಕ್ತಿತ್ವ ಹಲವು : ಗೊ.ರು.ಚ ಸರ್ವಾಂತರ್ಯಾಮಿ

ಚಿಕ್ಕಮಗಳೂರು : ಗೊರುಚ ಅವರಿಗೆ ನೆನ್ನೆಯಿಂದ ರಾಜ್ಯದ ಎಲ್ಲಾ ಕಡೆಯಿಂದ ಶುಭಾಶಯಗಳು ಹರಿದು ಬರುತ್ತಿವೆ. ಅದರಲ್ಲೂ...

ಪಾಸ್ ಪೋರ್ಟ್, ಮೂರು ಲಕ್ಷ ಹಣ ಕಳೆದುಕೊಂಡಿದ್ದ ರಷ್ಯಾಪ್ರಜೆ ಹಿಂದಿರುಗಿಸಿದ ಯುವಕ

ಚಿಕ್ಕಮಗಳೂರು : ವಿದೇಶಿ ಪ್ರಜೆಗಳು ಕ್ಯಾಂಟೀನ್ ವೊಂದರಲ್ಲಿ ಮರೆತು ಬಿಟ್ಟು ಹೋಗಿದ್ದ ಮೂರು ವರೆ ಲಕ್ಷ...