ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಕಾಡಾನೆಯ ಭೀತಿ ಮುಂದುವರೆದಿದೆ, ಇಂದು ಮತ್ತೆ ರಾಜ್ಯ ಹೆದ್ದಾರಿಯನ್ನು ದಾಟುತ್ತಿರುವ ವೇಳೆ ಕಾಡಾನೆ ಕಾಣಿಸಿಕೊಂಡಿದೆ.
ಶಿವಮೊಗ್ಗ ನರಸಿಂಹರಾಜಪುರ ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಒಂದು ಪ್ರತ್ಯಕ್ಷವಾಗಿದೆ. ಎನ್ ಆರ್ ಪುರ ತಾಲೂಕಿನ ಅರಂಬಳ್ಳಿಯಲ್ಲಿ ಈ ಗಜದರ್ಶನದ ಘಟನೆ ನಡೆದಿದೆ.
ಅರಂಬಳ್ಳಿ ಬಸ್ ನಿಲ್ದಾಣದ ಸಮೀಪವೇ ಬೀಡು ಬಿಟ್ಟಿದ್ದ ಕಾಡಾನೆಯೊಂದು ರಾಜ್ಯ ಹೆದ್ದಾರಿಯನ್ನು ದಾಟಿ ಅರಂಬಳ್ಳಿ ಅರಣ್ಯ ಪ್ರದೇಶಕ್ಕೆ ತೆರಳುತ್ತಿರುವ ವೇಳೆ ಘರ್ಜಿಸಿ ಅರಣ್ಯ ಪ್ರದೇಶದ ಒಳಗೆ ಪ್ರವೇಶ ಮಾಡಿದೆ. ಈ ಭಾಗದಲ್ಲಿ ಆನೆಯ ಕಾಟ ದಿನೇ ದಿನೇ ಹೆಚ್ಚುತ್ತಿದ್ದು ಈ ಕಾಡಾನೆಯನ್ನ ಬೇರೆಡೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಅಗ್ರಹ ಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್ ಅರ್ ಪುರ ತಾಲೂಕಿನ ಕೆಲ ಗ್ರಾಮಗಳನ್ನು ಸೇರಿದಂತೆ ಆನೆ ಕಾರಿಡಾರ್ ಮಾಡುವ ಉದ್ದೇಶ ಹೊರ ಬಿದ್ದಿರುವ ಕಾರಣ ಈ ಭಾಗದ ಜನರಿಗೆ ಭೀತಿ ಎದುರಾಗಿದೆ ಜೊತೆಗೆ ಕಾಡಾನೆಗಳ ಓಡಾಟ ಹೆಚ್ಚುತ್ತಿದ್ದು ಅರಣ್ಯ ಇಲಾಖೆ ಸಹಾ ಕಾರಿಡಾರ್ ಗೆ ಗುರುತಿಸುವ ಹುನ್ನಾರ ನಡೆಸಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಜೊತೆಗೆ ಸಾರ್ವಜನಿಕರು ಸಂಚರಿಸಲು ಭಯ ಪಡುವಂತಾಗಿದ್ದು ಶಾಶ್ವತ ಪರಿಹಾರ ಒದಗಿಸಿ ಕೊಡುವಂತೆ ಒತ್ತಾಯ ಸಹಾ ಕೇಳಿ ಬಂದಿದೆ.
Leave a comment