ಚಿಕ್ಕಮಗಳೂರು :
ಬೆಳಗಿನ ಜಾವದ ನಸುಕಿನ ನಿದ್ರೆಯ ಗುಂಗಿನಲ್ಲಿದ್ದ ಕೆಎಸ್ ಆರ್.ಟಿ.ಸಿ ಅಶ್ವಮೇಧ ಬಸ್ ನ ಚಾಲಕ ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆ ಡಿವೈಡರ್ ಮೇಲೆ ಚಲಿಸಿದ ಘಟನೆ ಇಂದು ಕಡೂರು ಪಟ್ಟಣದಲ್ಲಿ ನಡೆದಿದೆ.
ನಿಯಂತ್ರಣ ತಪ್ಪುತ್ತಿದ್ದಂತೆ ಎಚ್ಚೆತ್ತುಕೊಂಡ ಬಸ್ ಚಾಲಕ ತಕ್ಷಣ ಕೂಡಲೆ ತಹಬದಿಗೆ ತರಲು ಪ್ರಯತ್ನಿಸುತ್ತಾನೆ. ಆದರೂ ಸಹಾ ಡಿವೈಡರ್ ನಲ್ಲಿದ್ದ ಎರಡು ಲೈಟ್ ಕಂಬಗಳಿಗೆ ಡಿಕ್ಕಿ ಹೊಡೆದೇ ಬಿಡುತ್ತದೆ. ಡಿಕ್ಕಿಯಾದ ನಂತರವೂ ಕೊಂಚ ದೂರ ಡಿವೈಡರ್ ಮೇಲೆ ಬಸ್ ಚಲಿಸುತ್ತದೆ. ನಂತರ ಮತ್ತೆ ರಸ್ತೆಗೆ ಬಸ್ ಕೊಂಡೋಯ್ದುವಲ್ಲಿ ಚಾಲಕ ಯಶಸ್ವಿಯಾಗಿದ್ದಾನೆ. ಈ ಅವಘಡ ಇಂದು ಮುಂಜಾನೆ ಕಡೂರು ಪಟ್ಟಣದಲ್ಲಿ ನಡೆದಿದೆ.
ಕಡೂರು ಪಟ್ಟಣದ ಚೆಕ್ ಪೋಸ್ಟ್ ನಿಂದ ಬಸ್ ನಿಲ್ದಾಣದ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಡಿವೈಡರ್ ಮೇಲೆ ಬಸ್ ಚಲಿಸುತ್ತಿರುವ ದೃಶ್ಯವು ಸಮೀಪದ ಅಂಗಡಿಯೊಂದರ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ, ಬಸ್ ಯಾವ ಘಟಕಕ್ಕೆ ಸೇರಿದ್ದು ಹಾಗೂ ಚಾಲಕ ಯಾರು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
Leave a comment