Home namma chikmagalur ತಾರಕಕ್ಕೇರಿದ ಕಾಂಗ್ರೆಸ್ ಮುಖಂಡರ ಮುಸುಕಿನ ಕಿತ್ತಾಟ ವರಿಷ್ಟರಿಗೆ ಪೀಕಲಾಟ
namma chikmagalurCrime NewsPolitical News

ತಾರಕಕ್ಕೇರಿದ ಕಾಂಗ್ರೆಸ್ ಮುಖಂಡರ ಮುಸುಕಿನ ಕಿತ್ತಾಟ ವರಿಷ್ಟರಿಗೆ ಪೀಕಲಾಟ

Share
Share

ಚಿಕ್ಕಮಗಳೂರು :

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2023 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಇದರ ಕ್ರೆಡಿಟ್ ಪಡೆಯಲು ನಾ ಮುಂದು ತಾ ಮುಂದು ಎಂದು ಎಲ್ಲಾ ಮುಖಂಡರು ಮುಗಿಬಿದ್ದಿದ್ದು ಸುಳ್ಳಲ್ಲ, ಇದರಲ್ಲಿ ಇಬ್ಬರು ಮುಸ್ಲಿಂ ಮುಖಂಡರು ಕೂಡಾ ಇರುವುದು ಸತ್ಯ.

ಈ ವಿಷಯ ಈಗೇಕೆ ಪ್ರಸ್ತಾಪ ಮಾಡ್ತಾ ಇದೀವಿ ಅನ್ನೋದಕ್ಕು ಕಾರಣ ಇದೆ. ಆ ಇಬ್ಬರು ಮುಖಂಡರು ಸದ್ಯ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದ್ದಾರೆ. ಇತ್ತೀಚೆಗೆ ನಡೆದ ಘಟನೆಯೊಂದು ಇದರ ಮುಂದುವರಿದ ಭಾಗವಾಗಿ ಪೊಲೀಸರಿಗೂ ಕಸಿವಿಸಿ ಉಂಟು ಮಾಡಿದೆ.

ಈದ್ ಮಿಲಾದ್ ಹಿಂದಿನ ದಿನ ನಡೆದ ಗಲಾಟೆಯೊಂದು ಇಬ್ಬರು ಮುಖಂಡರ ಬೆಂಬಲಿಗರ ನಡುವಿನ ಸಂಘರ್ಷ ತಾರಕಕ್ಕೇರುವಂತೆ ಮಾಡಿದೆ. ಮುಖಂಡರ ಕೋಲ್ಡ್ ವಾರ್ ಗೆ ಇದು ಮತ್ತಷ್ಟು ತುಪ್ಪ ಸುರಿದಂತಾಗಿದೆ. ಈ ಮಧ್ಯೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಒತ್ತಡಕ್ಕೆ ಒಳಗಾಗಿ ಅನುಸರಿಸಿದ ಇಬ್ಬಗೆಯ ನೀತಿ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ . ಅಕ್ಸಾ ಮಸೀದಿ ಬಳಿ ನಡೆದ ಜಗಳದ ನಂತರ ದಾಖಲಾದ ಕೇಸ್ ನಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹಿಲ್ ಪಾಷ ಬಂಧನಕ್ಕೆ ಒತ್ತಾಯಿಸಿ ಗಾಯಾಳು ಜಹೀರ್ ಕುಟುಂಬದ ಮಹಿಳೆಯರು ಹಾಗೂ ಎಸ್.ಡಿಪಿಐ ಪಕ್ಷದ ಕಾರ್ಯಕರ್ತರಿಂದ ಠಾಣೆ ಮುತ್ತಿಗೆ ಯತ್ನ ಕೂಡಾ ನಡೆದಿದೆ. ಇದರಲ್ಲಿ ಇಬ್ಬರೂ ನಾಯಕರ ಪ್ರತಿಷ್ಟೆ ಅಡಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಕಾಂಗ್ರೆಸ್ ಶಾಸಕ ಹಾಗೂ ಜಿಲ್ಲಾ ಕೇಂದ್ರದ ಪಕ್ಷದ ಪ್ರಮುಖರಿಗೆ ಈ ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟ ತೀವ್ರ ಮುಜುಗರ ತಂದಿರುವುದಂತು ಸತ್ಯ.

ಎರಡೂ ಕಡೆಯವರ ಬೆಂಬಲಿಗರು ಸದ್ಯ ಕೋರ್ಟು ಕೇಸು ಪೊಲೀಸ್ ಸಮಸ್ಯೆ ಎದುರಿಸುತ್ತಿದ್ದು ಇಬ್ಬರ ಪ್ರತಿಷ್ಟೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಕೇಳೊರೆ ಇಲ್ಲದಂತಾಗಿದೆ ಕಾಂಗ್ರೆಸ್ ಕಾರ್ಯಕರ್ತರ ಗೋಳು

ಚಿಕ್ಕಮಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಸಮೀಪಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಐದು ಜನ ಮುಖಂಡರು ಆಯಾಕಟ್ಟಿನ ನಿಗಮ ಮಂಡಳಿಯ ಗೂಟದ...

ಪದವೀಧರರ ಸಹಕಾರ ಸಂಘದಲ್ಲಿ ಯಾವುದೇ ಅಕ್ರಮ ನಡೆದಿಲ್ಲ : ಲೋಕಪ್ಪಗೌಡ

ಚಿಕ್ಕಮಗಳೂರು : ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿಟಿ ಗೋಪಾಲಗೌಡ ಮಾಡಿರುವ ಆರೋಪಗಳಿಗೆ ಸಂಘದ ಮಾಜಿ ಅಧ್ಯಕ್ಷ ಲೋಕಪ್ಪ ಗೌಡ ಸ್ಪಷ್ಟನೆ ನೀಡಿದ್ದಾರೆ. ಸಂಘದ ನೂತನ ಕಟ್ಟಡ ನಿರ್ಮಾಣ...

Related Articles

ಸಿ.ಟಿ ರವಿ ಸ್ವಾಗತ ವೇಳೆ ಆಂಬುಲೆನ್ಸ್ ದುರ್ಬಳಕೆ : ಎಫ್ಐಆರ್‌ ದಾಖಲು

ಚಿಕ್ಕಮಗಳೂರು : ಕಳೆದ ರಾತ್ರಿ ಸಿ.ಟಿ ರವಿ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ ವೇಳೆ ಅದ್ದೂರಿ ಸ್ವಾಗತ...

ಲಕ್ಷ್ಮೀ V/S ರವಿ ಯಾರಿಗೆ ಲಾಭ ಯಾರಿಗೆ ನಷ್ಟ : ಜಾತಿ ಜವಾಬು ಹೇಳುತ್ತಾ

ಚಿಕ್ಕಮಗಳೂರು : ವಿಧಾನ ಪರಿಷತ್ ನಲ್ಲಿ ಸಿ.ಟಿ.ರವಿ v/s ಲಕ್ಷ್ಮೀ ಹೆಬ್ಬಾಳ್ಕರ್ ಕಿತ್ತಾಟದಲ್ಲಿ ಗೆದ್ದವರು ಯಾರು?...

ಪೊಲೀಸರು ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸಿದ್ದಾರೆ : ಸಿ.ಎಚ್ ಲೋಕೇಶ್ ಆರೋಪ

ಚಿಕ್ಕಮಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್...

ಸಿ.ಟಿ ರವಿ ಅದ್ದೂರಿ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರ ಭರ್ಜರಿ ತಯಾರಿ

ಚಿಕ್ಕಮಗಳೂರು : ಹೈಕೋರ್ಟ್ ಜಾಮೀನು ಪಡೆದ ನಂತರ ತವರು ಜಿಲ್ಲೆಗೆ ಆಗಮಿಸುತ್ತಿರುವ ಸಿ.ಟಿ ರವಿಗೆ ಅದ್ಧೂರಿ...