ಚಿಕ್ಕಮಗಳೂರು :
ಮೂರು ವಿವಾಹವಾಗಿ ಮೂವರನ್ನು ಬಿಟ್ಟು ನಾಲ್ಕನೇ ಮದುವೆಯಾಗಿದ್ದ ಹೆಂಡತಿಯನ್ನು ಕುಡಿದ ಮತ್ತಿನಲ್ಲಿ ಹೆಂಡತಿಗೆ ಮಾರಕಾಸ್ತ್ರದಿಂದ ಹೊಡೆದು ಪಾಪಿ ಪತಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಎನ್ ಎಂಡಿಸಿ ಗ್ರಾಮದಲ್ಲಿ ನಡೆದಿದೆ.
20 ವರ್ಷಗಳ ಹಿಂದೆ ಎನ್ ಎಂ ಡಿಸಿ ಗ್ರಾಮದ ಹಿರೇಶ್ ಎಂಬುವನು ಲಲಿತ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದನು, ಕಳೆದ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಈ ವೇಳೆ ಹೆಂಡತಿ ಲಲಿತಾಳಿಗೆ ಮನೆಯಲ್ಲಿದ್ದ ದೊಣ್ಣೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಈಗಾಗಲೇ ಮೂವರನ್ನು ವಿವಾಹವಾಗಿ ಎಲ್ಲರಿಂದಲೂ ದೂರವಿರುವ ಹಿರೇಶ್ ಮದುವೆ ಆಗುವುದನ್ನೇ ಚಾಳಿ ಮಾಡಿಕೊಂಡಿದ್ದ ಎನ್ನಲಾಗಿದೆ. ಶೃಂಗೇರಿ ತಾಲೂಕಿನ ಕೆರೆಮಕ್ಕಿ ಗ್ರಾಮದ ವಾಸಿಯಾದ ಶೇಷಯ್ಯ ತನ್ನ ಅಕ್ಕನನ್ನು ಕೊಲೆ ಮಾಡಿರುವುದಾಗಿ ಚಿಕ್ಕಮಗಳೂರಿನ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಹಿರೇಶ್ ನನ್ನು ಬಂಧಿಸಿದ್ದಾರೆ. ಕೊಲೆ ನಡೆದ ಎನ್ಎಂಡಿಸಿ ಗ್ರಾಮದ ಮನೆಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸಚಿನ್ ಕುಮಾರ್ ತಮ್ಮ ಸಿಬ್ಬಂದಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಲಲಿತಾ ಹಾಗೂ ಹಿರೇಶ್ ದಂಪತಿಗಳಿಗೆ ಯಾವುದೇ ಮಕ್ಕಳಿರಲಿಲ್ಲ ಎಂದು ತಿಳಿದು ಬಂದಿದೆ.
Leave a comment