Home namma chikmagalur ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಶೇ 77.76 ಮತದಾನ
namma chikmagalurajjampuraHomeLatest News

ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಶೇ 77.76 ಮತದಾನ

Share
Share

ಅಜ್ಜಂಪುರ: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಭಾನುವಾರ ನಡೆದ ಮೊದಲ ಚುನಾವಣೆಯಲ್ಲಿ ಶೇ 77.76 ಮತದಾನವಾಗಿದೆ.

4,967 ಪುರುಷ ಮತಗಳಲ್ಲಿ 3,916 ಹಾಗೂ 5,285 ಮಹಿಳಾ ಮತಗಳಲ್ಲಿ 4,056 ಮತಗಳು ಚಲಾವಣೆಗೊಂಡವು. ಒಟ್ಟಾರೆ 10,252 ಮತದಾರರಲ್ಲಿ 7,972 ಮತದಾರರು ತಮ್ಮ ಹಕ್ಕು ಚಲಾಯಿಸಿದರು.

1 ನೇ ವಾರ್ಡ್‌ನ ಒಟ್ಟು 876 ಮತಗಳಲ್ಲಿ 628, 2 ನೇ ವಾರ್ಡ್‌ನ 1,529 ಮತಗಳಲ್ಲಿ 1,108, 3ನೇ ವಾರ್ಡ್‌ನ 1,704 ಮತಗಳಲ್ಲಿ 1,313, 4ನೇ ವಾರ್ಡ್‌ನ 788 ಮತಗಳಲ್ಲಿ 595, 5ನೇ ವಾರ್ಡ್‌ನ 791 ಮತಗಳಲ್ಲಿ 630, 6ನೇ ವಾರ್ಡ್‌ನ 761 ಮತಗಳಲ್ಲಿ 658, 7ನೇ ವಾರ್ಡ್‌ನ 789 ಮತಗಳಲ್ಲಿ 643, 8ನೇ ವಾರ್ಡ್‌ನ 505 ಮತಗಳಲ್ಲಿ 442, 9ನೇ ವಾರ್ಡ್‌ನ 467 ಮತಗಳಲ್ಲಿ 430, 10ನೇ ವಾರ್ಡ್‌ನ 855 ಮತಗಳಲ್ಲಿ 662, 11ನೇ ವಾರ್ಡ್‌ನ 1,187 ಮತಗಳಲ್ಲಿ 863 ಮತಗಳು ಚಲಾವಣೆಯಾದವು.

ಬೆಳಗಿನಿಂದಲೇ ಮತದಾರರು ಮತ ಕೇಂದ್ರದತ್ತ ಮುಖ ಮಾಡಿದ್ದರು. 10 ಗಂಟೆಯಿಂದ 3 ಗಂಟೆವರೆಗೆ ಮತದಾನ ಏರುಗತಿ ಪಡೆದಿತ್ತು. ಮತ ಕೇಂದ್ರದಲ್ಲಿ ಸಾಲುಗಟ್ಟಿ ನಿಂತು ಮತದಾನ ಮಾಡಿದರು. ಸಂಜೆ ವೇಳೆಗೆ ಮತದಾನ ಪ್ರಮಾಣ ಕ್ಷೀಣಿಸಿತ್ತು.

ಶೆಟ್ರು ಸಿದ್ದಪ್ಪ ಪದವಿ ಪೂರ್ವ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ, ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಉತ್ತರ ದಿಕ್ಕಿನ ಶಾಲೆ, ಸರ್ಕಾರಿ ಪೂರ್ವ ದಿಕ್ಕಿನ ಶಾಲೆ ಮತ ಕೇಂದ್ರದ ಬಳಿ ಅಭ್ಯರ್ಥಿಗಳು, ಕಾರ್ಯಕರ್ತರು, ಬೆಂಬಲಿಗರು ಜಮಾಯಿಸಿದ್ದರು. ಮತದಾರರ ಮನವೊಲಿಸಲು ಅಂತಿಮ ಹಂತದವರೆಗೂ ಕಸರತ್ತು ನಡೆಸಿದ್ದು ಕಂಡುಬಂದಿತು.

11 ವಾರ್ಡ್‌ಗಳ 31 ಅಭ್ಯರ್ಥಿಗಳ ಭವಿಷ್ಯಗಳಲ್ಲಿ ಇವಿಎಂಗಳಲ್ಲಿ ಭದ್ರವಾಗಿದ್ದು, ಮತ ಎಣಿಕೆ ಬುಧವಾರ (ಆ.20) ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.

77.76% voter turnout in Ajjampura town panchayat elections

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮಳೆಯ ಆರ್ಭಟ – ಕಾಫಿಬೆಳೆ ನಾಶ – ರಸ್ತೆ ಹುಡುಕಾಡುವ ಕಾಟ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ...

12ನೇ ಶತಮಾನದಲ್ಲೇ ಕನ್ನಡಕ್ಕೆ ವಚನಾಕಾರಿಂದ ಬಹಳ ದೊಡ್ಡ ಕೊಡುಗೆ

ಚಿಕ್ಕಮಗಳೂರು: ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು ೧೨ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರು ಕೊಟ್ಟ ಸಾಂಸ್ಕೃತಿಕ ಚಳುವಳಿ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ...

Related Articles

ದೊಡ್ಡ ಮನೆ ಡಿಚ್ಚಿ ಯಾರಿಗೆ – ಕೈ ಕಸರತ್ತು ? ಬಿಜೆಪಿಯಲ್ಲಿ ತಳಮಳ !

ಅಜ್ಜಂಪುರ: ಪಟ್ಟಣ ಪಂಚಾಯತಿ ಚುನಾವಣೆ ನಡೆದು ಇಪ್ಪತ್ತು ದಿನಗಳಾಗಿದೆ ಆದರೆ ಅಧ್ಯಕ್ಷ/ ಉಪಾಧ್ಯಕ್ಷರ ಚುನಾವಣೆ ವಿಳಂಬ...

ಜನರಿಗೆ ವಾಸ್ತವ ಸಂಗತಿ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾದ್ಯಂತ ಪ್ರವಾಸ

ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ ಜನಪರ ಯೋಜನೆಗಳ ಪ್ರಚಾರ ಕೈಗೊಳ್ಳುವುದರೊಂದಿಗೆ ವಿರೋಧ...

ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು

ಚಿಕ್ಕಮಗಳೂರು: ‘ಅಲ್ಲಂಪುರ ನಿವಾಸಿ ಓಂಕಾರಮೂರ್ತಿ ಮೇಲಿನ ಹಲ್ಲೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’...

ಅಂಬೇಡ್ಕರ್ ಸಂವಿಧಾನದ ತತ್ವ ಹೊಂದಿರುವ ಪಕ್ಷ ಕಾಂಗ್ರೆಸ್

ಚಿಕ್ಕಮಗಳೂರು:  ಅಂಬೇಡ್ಕರ್ ಸಂವಿಧಾನದ ತತ್ವವನ್ನು ಹೊಂದಿರುವ ಪಕ್ಷ ಕಾಂ ಗ್ರೆಸ್. ಚುನಾವಣೆಗೆ ಮಾತ್ರ ಪಕ್ಷ ಸೀಮಿತವಾಗದೇ...