Home Latest News ಹೊಯ್ಸಳರ ಕಾಲದ 2 ವೀರಗಲ್ಲು ಪತ್ತೆ
Latest NewschikamagalurHome

ಹೊಯ್ಸಳರ ಕಾಲದ 2 ವೀರಗಲ್ಲು ಪತ್ತೆ

Share
Share

ಮೂಡಿಗೆರೆ: ತಾಲ್ಲೂಕಿನ ಬಕ್ಕಿ ಗ್ರಾಮದ ಸುಗ್ಗಿ ಮಂದಿನಲ್ಲಿ ಹೊಯ್ಸಳರ ಕಾಲದ ೨ ವೀರಗಲ್ಲುಗಳು ಪತ್ತೆಯಾಗಿವೆ.

ಶಾಸನ ಸಂಶೋಧಕರಾದ ಮೇಕನಗದ್ದೆ ಲಕ್ಷ್ಮಣಗೌಡ ಹಾಗೂ ಬಕ್ಕಿ ಗ್ರಾಮದ ಬಿ.ಬಿ.ಸಂಪತ್ ಕುಮಾರ್ ಅವರು ಅಪ್ರಕಟಿತ ಶಾಸನಗಳ ಅಚ್ಚು ತೆಗೆದು ಶಾಸನ ತಜ್ಞ ಮೈಸೂರಿನ ಎಚ್.ಎಂ.ನಾಗರಾಜರಾವ್ ಅವರಿಗೆ ಕಳುಹಿಸಿ ಕೊಟ್ಟಿದ್ದರು.

ಹೊಯ್ಸಳರ ವೀರಬಲ್ಲಾಳನ ಕಾಲಕ್ಕೆ ಸೇರಿರುವ ಈ ಶಾಸನಗಳ ಪೈಕಿ ಒಂದರಲ್ಲಿ ಸ್ಪಷ್ಟವಾದ ಬರವಣಿಗೆ ಇದೆ. ಇನ್ನೊಂದರಲ್ಲಿ ಅಕ್ಷರಗಳು ಓದಲಾಗದ ಸ್ಥಿತಿಯಲ್ಲಿವೆ. ಮೊದಲನೇ ಶಾಸನದಲ್ಲಿ ಎರಡು ಪಟ್ಟಿಗಳಲ್ಲಿ ಬರವಣಿಗೆ ಇದೆ. ಮೂರು ಪಟ್ಟಿಗಳಲ್ಲಿ ಆಕರ್ಷಕವಾದ ಕೆತ್ತನೆಗಳಿವೆ. ಮೊದಲನೇ ಪಟ್ಟಿಯಲ್ಲಿ ೩ ಸಾಲುಗಳಿದ್ದು, ಹೊಯ್ಸಳ ರಾಜ ವೀರಬಲ್ಲಾಳರ ಆಳ್ವಿಕೆಯ ಕಾಲದ ಪ್ಲವ ಸಂವತ್ಸರದಲ್ಲಿ ನಡೆದ ಹೋರಾಟದಲ್ಲಿ ಮಡಿದ ವೀರನ ಉಲ್ಲೇಖವಿದೆ.

೨ನೇ ಪಟ್ಟಿಯಲ್ಲಿ ೪ ಸಾಲುಗಳಿವೆ. ಕಲ್ಲಿನ ಕೆತ್ತನೆ ಅಕ್ಷರ ಅಳಿಸಿ ಹೋಗಿರುವುದರಿಂದ ವೀರನ ಹೆಸರು ಮತ್ತಿತರ ವಿವರಗಳು ಸ್ಪಷ್ಟವಾಗುತ್ತಿಲ್ಲ. ಕೊನೆಯಲ್ಲಿ ಶಾಸನವನ್ನು ಹಾಳುಮಾಡಿದವರಿಗೆ ಒದಗುವ ಪಾಪದ ಕುರಿತು ಶಾಪಾಶಯ ವಾಕ್ಯಗಳಿವೆ. ಎರಡನೆಯ ಕಲ್ಲಿನಲ್ಲಿ ಅಕ್ಷರಗಳು ಪೂರ್ತಿ ಸವೆದಿರುವುದರಿಂದ ಯಾವ ಮಾಹಿತಿಯೂ ಸ್ಪಷ್ಟವಾಗಿ ಸಿಗುತ್ತಿಲ್ಲ.

ಪಠ್ಯ ಲಭ್ಯವಾಗಿರುವ ವೀರಗಲ್ಲಿನಲ್ಲಿ ಕೆಳಗಿನ ಪಟ್ಟಿಯಲ್ಲಿ ನೆಲದ ಮೇಲೆ ನಿಂತ ವೀರನೊಬ್ಬ ಕುದುರೆ ಮೇಲೆ ಕುಳಿತು ಯುದ್ಧ ಮಾಡುತ್ತಾ ಎದುರಾಳಿಯೊಂದಿಗೆ ಹೋರಾಡುತ್ತಿರುವ ಕೆತ್ತನೆಯಿದೆ. ಮೇಲಿನ ಪಟ್ಟಿಯಲ್ಲಿ ಅಪ್ಸರೆಯರನ್ನು ಸುರಲೋಕಕ್ಕೆ ಕರೆತರುವ ಚಿತ್ರವಿದೆ. ಮೂರನೆಯ ಪಟ್ಟಿಯಲ್ಲಿ ವೀರನಿಗೆ ವೀರಸ್ವರ್ಗ ಲಭಿಸಿ ಅಲ್ಲಿ ದೇವತೆಗಳಿಂದ ಪೂಜೆಗೊಳ್ಳುತ್ತಿರುವ ಚಿತ್ರಣದೊಂದಿಗೆ ಸೂರ್ಯ, ಚಂದ್ರ, ನಂದಿ, ತ್ರಿಶೂಲಗಳಿವೆ. ವೀರನ ತ್ಯಾಗ ಬಲಿದಾನಗಳು ಚಂದ್ರಾರ್ಕವಾಗಿರಲಿ ಎಂಬುದನ್ನು ವೀರಗಲ್ಲು ಸಂಕೇತಿಸುತ್ತದೆ.

ಪಕ್ಕದಲ್ಲಿರುವ ಇನ್ನೊಂದು ವೀರಗಲ್ಲಿನಲ್ಲಿ ಅಕ್ಷರಗಳು ಪೂರ್ಣ ಪ್ರಮಾಣದಲ್ಲಿ ನಶಿಸಿ ಹೋಗಿವೆ. ಅದರಲ್ಲೂ ಆಕರ್ಷಕ ಶಿಲ್ಪಗಳ ಕೆತ್ತನೆಯಿದೆ. ಕೆಳಗಿನ ಪಟ್ಟಿಯಲ್ಲಿ ನೆಲದ ಮೇಲೆ ನಿಂತಿರುವ ವೀರನು ಪದಾತಿಗಳೊಂದಿಗೆ ಹೋರಾಡುತ್ತಿರುವ ಚಿತ್ರವಿದೆ. ವೀರನು ಒಂದು ಕೈಯಲ್ಲಿ ಬಿಲ್ಲನ್ನು ಹಿಡಿದು ಬಾಣ ಪ್ರಯೋಗಿಸಿ ಇನ್ನೊಂದು ಕೈಯಲ್ಲಿ ಒರೆಯಿಂದ ಕತ್ತಿಯನ್ನು ಹಿರಿದು ಮೇಲೆ ಎತ್ತಿ ಹಿಡಿದಿರುವ ಅಪರೂಪದ ಚಿತ್ರವಿದೆ ಎಂದು ಶಾಸನ ಸಂಶೋಧಕರಾದ ಮೆಕನಗದ್ದೆ ಲಕ್ಷ್ಮಣಗೌಡ ತಿಳಿಸಿದರು.

ಬಕ್ಕಿ ಗ್ರಾಮದ ಸುಗ್ಗಿ ಮಂದಿರದಲ್ಲಿ ತ್ರಿಪುರ ಸಾವಿರದ ಸುಗ್ಗಿ ಹಬ್ಬದ ೩ ಹಾಗೂ ೪ನೇ ದಿನಗಳಲ್ಲಿ ಸುಗ್ಗಿ ಉತ್ಸವ ನಡೆಯುತ್ತದೆ. ಶಾಸನ ದೊರೆತಿರುವ ಈ ಸ್ಥಳ ತ್ರಿಪುರ ಸಾವಿರದ ಸುಗ್ಗಿಹಬ್ಬ ನಡೆಯುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ? ಎಂದು ಗ್ರಾಮದ ಸಂಪತ್ ಕುಮಾರ್ ವಿವರಿಸಿದರು.

2 heroic stones from the Hoysala period discovered

Share

Leave a comment

Leave a Reply

Your email address will not be published. Required fields are marked *

Don't Miss

ಗಿರಿ ಪ್ರದೇಶದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ನೂತನ ಸಂಚಾರ ವ್ಯವಸ್ಥೆ

ಚಿಕ್ಕಮಗಳೂರು: : ಮುಳ್ಳಯ್ಯನಗಿರಿ ಭಾಗದಲ್ಲಿ ಇತ್ತೀಚೆಗೆ ವಾರಾಂತ್ಯದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, ಎರಡು ಸ್ಲಾಟ್‌ಗಳಲ್ಲಿ ಪ್ರತೀದಿನ ವಾಹನಗಳನ್ನು ಗಿರಿಭಾಗಕ್ಕೆ ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು....

ಕಾವೇರುತ್ತಿದೆ ಅಜ್ಜಂಪುರ ಪಟ್ಟಣ ಪಂಚಾಯತಿ ಚುನಾವಣೆ

ಅಜ್ಜಂಪುರ: ಕಳೆದ ಏಳು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಬಣಗುಡುತ್ತಿದ್ದ ಪಟ್ಟಣ ಪಂಚಾಯತಿಗೆ ಆಗಷ್ಟ್ 17 ರಂದು ಚುನಾವಣೆ ದಿನಾಂಕ ನಿಗದಿಯಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜನತಾದಳದ ಮಧ್ಯೆ ಬಿರುಸಿನ...

Related Articles

ಮಕ್ಕಳ ಬಾಲ್ಯ ಸುರಕ್ಷತೆಗಾಗಿ ಭದ್ರ ಬಾಲ್ಯ ಯೋಜನೆ ಅನುಷ್ಠಾನ

ಚಿಕ್ಕಮಗಳೂರು: ಮಕ್ಕಳ ಬಾಲ್ಯವನ್ನು ಸುರಕ್ಷಿತಗೊಳಿಸುವ ಗುರಿ ಇರಿಸಿಕೊಂಡು ಜಿಲ್ಲೆಯಲ್ಲಿ ಭದ್ರ ಬಾಲ್ಯ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಎಲ್ಲಾ...

ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ವಿರುದ್ಧ ಸಮಾಜದಿಂದ ಪ್ರತಿಭಟನೆ

ಚಿಕ್ಕಮಗಳೂರು:  ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ನಿಗಧಿತ ದರಕ್ಕಿಂತ ಕಡಿಮೆ...

ಮಾದಕ ವಸ್ತು ವಿರೋಧಿ ಜಾಗೃತಿ ಸಮಿತಿ ರಚನೆ ಕಡ್ಡಾಯ 

ಚಿಕ್ಕಮಗಳೂರು:  ಶಾಲಾ ಕಾಲೇಜುಗಳಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಸಮಿತಿಗಳನ್ನು ಕಡ್ಡಾಯವಾಗಿ ರಚಿಸುವ ಮೂಲಕ ಮಾದಕ ವಸ್ತು...

ವೇದಾನದಿ ನೀರಿನ ಹಂಚಿಕೆಯಲ್ಲಿ ರೈತರು ಸಂಯಮ ಕಾಪಾಡಬೇಕು

ಚಿಕ್ಕಮಗಳೂರು: ವೇದಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರೈತರು ಸಂಯಮ ಕಾಪಾಡಬೇಕು. ಜೊತೆಗೆ ಕೆರೆ ತುಂಬಿಸುವ...