Home namma chikmagalur chikamagalur ಎನ್.ಆರ್.ಪುರದಲ್ಲಿ ಹಾಡಹಗಲೇ ೧೬.೩೫ ಲಕ್ಷ ಆಭರಣ ಕಳವು
chikamagalurHomeLatest Newsnamma chikmagalur

ಎನ್.ಆರ್.ಪುರದಲ್ಲಿ ಹಾಡಹಗಲೇ ೧೬.೩೫ ಲಕ್ಷ ಆಭರಣ ಕಳವು

Share
Share

ಎನ್.ಆರ್.ಪುರ: ತಾಲೂಕಿನ ಚಿಬ್ಬಳ್ಳಿ ಗ್ರಾಮದ ಕೆ. ಕಣಬೂರು ವ್ಯಾಪ್ತಿಯಲ್ಲಿ ಹಾಡಹಗಲೇ ಕಳ್ಳತನವೊಂದು ನಡೆದಿದ್ದು, ಸುಮಾರು ೧೬.೩೫ ಲಕ್ಷ ರೂ.ಮೌಲ್ಯದ ಬಂಗಾರದ ಒಡವೆಗಳನ್ನು ಕಳ್ಳರು ದೋಚಿದ್ದಾರೆ.

ಪಟ್ಟಣದಲ್ಲಿ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಕೆ.ಎಸ್. ಶ್ರೀಧರ್. ಎಂಬುವವರು ಕೆಲಸದ ಮೇರೆಗೆ ಪಟ್ಟಣಕ್ಕೆ ತೆರಳಿದ್ದ ಸಮಯವನ್ನು ಹೊಂಚು ಹಾಕಿದ ಕಳ್ಳರು ಈ ಕೃತ್ಯವೆಸಗಿದ್ದಾರೆ.ಮಧ್ಯಾಹ್ನ ಮನೆಯ ಮಾಲೀಕರು ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಮುಂಭಾಗದ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿರುವುದು ಪತ್ತೆಯಾಗಿದೆ.

ಮನೆಯ ಒಳಗೆ ಹೋಗಿ ಪರಿಶೀಲಿಸಿದಾಗ, ಬೆಡೂಮ್‌ನಲ್ಲಿದ್ದ ಗಾಡೇಜ್ ಬೀರುವಿನ ಬಾಗಿಲು ತೆರೆದಿದ್ದು, ಅದರ ಮಧ್ಯದ ಕಬೋರ್ಡ್‌ನಲ್ಲಿ ಇಟ್ಟಿದ್ದ ಒಟ್ಟು ೧೦೯ ಗ್ರಾಂ ತೂಕದ ವಿವಿಧ ಚಿನ್ನಾಭರಣಗಳು ಕಳುವಾಗಿವೆ.

ಕಳ್ಳತನವಾದ ವಸ್ತುಗಳಲ್ಲಿ ೧೬ ಗ್ರಾಂನ ಕಾಸಿನ ತಾಳಿ, ೨೪ ಗ್ರಾಂನ ಮುತ್ತಿನ ಸರ, ೧೬ ಗ್ರಾಂನ ನೆಕ್ಸೆಸ್, ೧೨ ಗ್ರಾಂನ ಒಂದು ಬಳೆ ಹಾಗೂ ವಿವಿಧ ತೂಕದ ಸುಮಾರು ೫-೬ ಉಂಗುರಗಳು ಮತ್ತು ಕಿವಿ ಓಲೆಗಳು ಸೇರಿವೆ.ಮನೆಯ ಮಾಲೀಕರು ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಳ್ಳರ ಪತ್ತೆಗೆ ಬಲೆಬೀಸಿದ್ದಾರೆ.

16.35 lakhs of jewellery stolen in broad daylight in N.R.Pura

 

Share

Leave a comment

Leave a Reply

Your email address will not be published. Required fields are marked *

Don't Miss

ಕೇಂದ್ರ ಬಜೆಟ್‌ ನಲ್ಲಿ ರಾಜ್ಯಕ್ಕೆ ಬಿಡಿಗಾಸು ನೀಡದೆ ಮಲತಾಯಿ ಧೋರಣೆ

ಚಿಕ್ಕಮಗಳೂರು: ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ರಾಜಕೀಯ ಲಾಭಕ್ಕೋಸ್ಕರ ಬಜೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸಿರುವ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಬಿಡಿಗಾಸನ್ನೂ ನೀಡದೆ ಮಲತಾಯಿ ಧೋರಣೆ ಅನುಸರಿಸಿದ್ದು, ರಾಜ್ಯದಿಂದ ಆರಿಸಿ...

ಅಕ್ರಮ ಮದ್ಯ ಮಾರಾಟ-ಇಬ್ಬರ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ಬಣಕಲ್ ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬಣಕಲ್ ಪೊಲೀಸ್ ಠಾಣಾ...

Related Articles

ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಕ್ರೀಡಾಕೂಟ-ಸಾಂಸ್ಕೃತಿಕ ಸ್ಪರ್ಧೆ

ಚಿಕ್ಕಮಗಳೂರು:  ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಫೆಬ್ರವರಿ ೨೧...

ಅನುಮಾನಗಳಿಗೆ ಎಡೆಮಾಡಿಕೊಟ್ಟ ಲಘು ವಿಮಾನ ಹಾರಾಟ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಿಗೂಢವಾಗಿ ಹಾರಾಡಿದ ಲಘು ವಿಮಾನವೊಂದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ....

ಶರಣರ ವಚನಗಳು ಮನುಷ್ಯನ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಶಕ್ತಿಗಳು

ಚಿಕ್ಕಮಗಳೂರು: ಶರಣರ ವಚನಗಳು ಕೇವಲ ರಚನೆಗಳಲ್ಲ. ಅವು ಮನುಷ್ಯನ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಶಕ್ತಿಗಳು ಎಂದು ಸಾಣೆಹಳ್ಳಿ...

ಸಮಾಜ ಪರಿವರ್ತನೆಗೆ ಶರಣ ಚಳುವಳಿಯೇ ಪರಿಹಾರ

ಚಿಕ್ಕಮಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ತನ್ನ...