ಚಿಕ್ಕಮಗಳೂರು: ಚಿಕ್ಕಮಗಳೂರು ಮೂಲದ ಚಿತ್ರನಟಿ ರನ್ಯಾ ರಾವ್ ವಿದೇಶದಿಂದ 127ಕೆ,ಜಿ,ಚಿನ್ನ ಕದ್ದು ತಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಬಲೆಗೆ ಬಿದ್ದು ಒದ್ದಾಡುತ್ತಿದ್ದಾವಳಿಗೆ ಮತ್ತಷ್ಟು ಸಂಕಟಕ್ಕೆ ಸಿಲುಕಿದ್ದಾಳೆ ಎನ್ನಲಾಗಿದೆ.
ಮೂರು ನಾಲ್ಕು ಚಿತ್ರಗಳಲ್ಲಿ ಕಾಟಚಾರಕ್ಕೆ ನಟಿಸಿರುವ ರನ್ಯಾರಾವ್ ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿ ಕೊಂಡಿರುವ ರಾವ್ ಹಿನ್ನೆಲೆ ಬಿಗ್ ಜೀರೊ . ಚಿಕ್ಕಮಗಳೂರು ಸಮೀಪದ ಕೈಮರದ ಬಳಿ ಇದ್ದ ರೋಹಿಣಿ ಹೆಗಡೆಶ್ ಪುತ್ರಿ ರನ್ಯಾರಾವ್ ಪೊಲೀಸ್ ಅಧಿಕಾರಿಯ ಮಲಮಗಳಾಗಿದ್ದರ ಹಿನ್ನೆಲೆ ರೋಚಕವಾಗಿದೆ.
ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠ ಧಿಕಾರಿಯಾಗಿದ್ದ ರಾಮಚಂದ್ರ ರಾವ್ ರೋಹಿಣಿ ಬಲೆಗೆ ಬಿದ್ದು ಈಗಾ ವಿಲ,ವಿಲ ಎಂದು ಒದ್ದಾಡುವಂತಾಗಿದೆ. ರೋಹಿಣಿ ರೈಫಲ್ ಶೂಟಿಂಗ್ ಕಲಿಯಲು ಹೋದಾಗ ರಾಮಚಂದ್ರ ರಾವ್ ಶೂಟಿಂಗ್ ಶುರುಮಾಡಿಕೊಂಡಿದ್ದರ ಪರಿಣಾಮ ಗಂಡನಿಗೆ ಗುಡ್ ಬೈ ಹೇಳಿ ರಾಮಚಂದ್ರ ರಾವ್ ಪತ್ನಿಯಾಗಿದ್ದು ಇದರಿಂದಾಗಿ ರನ್ಯಾರಾವ್ ಮಲಮಗಳಾಗಿ ಚಿನ್ನ ಕಳ್ಳಿಯಾಗಿದ್ದಾಳೆ.
ಕಲಿತಿರುವುದು ಬಿಡು ಕಳ್ಳಿ ಎಂದರೆ ಕಲಿತಿರುವುದು ಬಿಟ್ಟು ಬಾಯಿಗೆ ಏನು ಮಣ್ಣು ಹಾಕಿಕೊಳ್ಳಲಾ ಎಂದು ಮಗಳನ್ನು ಅಂತರಾಷ್ಟ್ರೀಯ ಚಿನ್ನದ ಕಳ್ಳಿಯಾಗಿ ಶಾಶ್ವತವಾಗಿ ಮಣ್ಣು ತಿನ್ನುವ ಪರಿಸ್ಥಿತಿ ಸೃಷ್ಟಿ ಮಾಡಿಕೊಂಡಿದ್ದಾರೆ. ರಾಮಚಂದ್ರ ರಾವ್ ಇದರಿಂದಾಗಿ ಕಡ್ಡಾಯ ರಜೆಯ ಮೇಲೆ ತೆರಳಿ ಮುಖ ಮುಚ್ಚಿ ಕೊಳ್ಳುವಂತೆ ಮಾಡಿರುವ ಸಮಯದಲ್ಲಿ ಡಿ,ಆರ್,ಐ 102 ಕೋಟಿ ದಂಡ ಹಾಕಿರುವುದರಿಂದ ಮತ್ತಷ್ಟು ಸಂಕಷ್ಟ ಶುರುವಾಗಿದೆ.
ರನ್ಯಾರಾವ್ ಜೊತೆಗೆ ಚಿನ್ನ ಕಳ್ಳ ಸಾಗಾಣಿಕೆ ಆರೋಪದಲ್ಲಿ ಭಾಗಿಯಾಗಿರುವ ಉದ್ಯಮಿ ತರುಣ್ ಕೊಂಡರಾಜ್ ,ಸಾಹಿಲ್ ಸಖಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಅವರು ಪರಪ್ಪನಹಾರ ಜೈಲಿನಲ್ಲಿ ಇದ್ದಾರೆ .ಇವರುಗಳಿಗೆ ದಂಡ ಕಟ್ಟುವಂತೆ ನೋಟೀಸ್ ನೀಡಲಾಗಿದೆ.
ಒಂದು ವರ್ಷ ಜಾಮೀನು ಪಡೆಯಲು ಸಾಧ್ಯವಿಲ್ಲ. ದಂಡ ಕಟ್ಟಿದರು ಅಪರಾಧ ಪ್ರಕರಣಗಳು ಮುಂದುವರೆಯಲಿವೆ ಎನ್ನಲಾಗಿದೆ. ನೂಲಿನಂತ ಸೀರೆ, ತಾಯಿಯಂತೆ ಮಗಳು ಎಂಬ ಗಾದೆಯಂತೆ ರೋಹಿಣಿ ಮಗಳು ಆಗಿದ್ದು ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದವರಲ್ಲ ಹೀಗಾಗಿ ದಂಡದ ಮೊತ್ತವನ್ನು ಮಲತಂದೆ ರಾಮಚಂದ್ರ ರಾವ್ ಕಟ್ಟಬೇಕು ಎಂದು ಢವ,ಢವ ಶುರುವಾಗಿದೆ .
ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಧಿಕಾರಿಯಾಗಿದ್ದಾಗ ಜಿಲ್ಲಾ ಸಮಾಚಾರ ಪತ್ರಿಕೆಯಲ್ಲಿ ರೋಹಿಣಿ ಮಳೆಗೆ ಗಡ,ಗಡ ಎನ್ನುವ ರಾವ್ ಎಂದು ಬರೆಯಲಾಗಿತ್ತು ಈಗ ಸದಾಕಾಲವೂ ಗಡ,ಗಡ,ಎನ್ನುವಂತಾಗಿದೆ.
102 crores fined for 127 KG gold cactus Ranyarao
Leave a comment